ಟಿ20 ವಿಶ್ವಕಪ್‌ಗೆ ಆಯ್ಕೆಯಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ. 2022ರ ವಿಶ್ವಕಪ್ ಬಳಿಕ ಟಿ20 ಕ್ರಿಕೆಟ್‌ನಿಂದ ದೂರ ಉಳಿದಿದ್ದ ಹಿರಿಯ ಆಟಗಾರರು. ಅನುಭವಿಗಳನ್ನು ಕೈಬಿಡುವ ಧೈರ್ಯ ಮಾಡದ ಬಿಸಿಸಿಐ.
ಅಹಮದಾಬಾದ್: 2022ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲುಂಡ ಬಳಿಕ ಭಾರತ 12 ತಿಂಗಳ ಕಾಲ ಹೊಸ ಪೀಳಿಗೆಯ ತಂಡವನ್ನು ಕಟ್ಟುವ ಪ್ರಾಮಾಣಿಕ ಪ್ರಯತ್ನ ನಡೆಸಿತು.
ಹಿರಿಯ ಆಟಗಾರರನ್ನು ಟಿ20 ಕ್ರಿಕೆಟ್‌ನಿಂದ ದೂರವಿರಿಸಿ, ಯುವ ಆಟಗಾರರನ್ನು ತಂಡದೊಳಕ್ಕೆ ತರಲಾಯಿತು. ಆದರೆ ಈ ವರ್ಷ ಜನವರಿಯಲ್ಲಿ ಬಿಸಿಸಿಐ ತನ್ನ ಯೋಜನೆಯಿಂದ ಯೂ-ಟರ್ನ್ ಮಾಡಿ, ವಿಶ್ವಕಪ್‌ಗೂ ಮುನ್ನ ಭಾರತ ಆಡಿದ ಕೊನೆಯ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಆಡಿಸಿತು.
ಇದರೊಂದಿಗೆ ಈ ಇಬ್ಬರು ಹಿರಿಯ ಆಟಗಾರರನ್ನು ವಿಶ್ವಕಪ್‌ಗೆ ಆಯ್ಕೆ ಮಾಡುವ ಬಗ್ಗೆ ತನ್ನ ನಿಲುವನ್ನು ಬಿಸಿಸಿಐ ಸ್ಪಷ್ಟಪಡಿಸಿತ್ತು.ಟಿ20 ವಿಶ್ವಕಪ್‌ಗಾಗಿ ಗುರುತಿಸಲ್ಪಟ್ಟಿದ್ದ ಇಶಾನ್ ಕಿಶನ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ರಿಂಕು ಸಿಂಗ್, ಜಿತೇಶ್ ಶರ್ಮಾ, ರವಿ ಬಿಷ್ಣೋಯ್‌ಗೆ ಅವಕಾಶ ಸಿಕ್ಕಿಲ್ಲ.
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.