ಐಪಿಎಲ್‌ ಹರಾಜಿಗೂ ಮುನ್ನ ತಲಾ ಐವರು ಆಟಗಾರರನ್ನು ಉಳಿಸಿಕೊಳ್ಳಲು ಬಿಸಿಸಿಐ ಅನುಮತಿ ಸಾಧ್ಯತೆ

Published : Sep 26, 2024, 08:27 AM IST
MS Dhoni Carry Stump

ಸಾರಾಂಶ

ಮುಂದಿನ ಐಪಿಎಲ್‌ ಹರಾಜಿಗೂ ಮುನ್ನ ಫ್ರಾಂಚೈಸಿಗಳಿಗೆ ತಲಾ ಐವರು ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಬಿಸಿಸಿಐ ಅನುಮತಿ ನೀಡುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ನವದೆಹಲಿ: ಮುಂದಿನ ಐಪಿಎಲ್‌ ಹರಾಜಿಗೂ ಮುನ್ನ ಫ್ರಾಂಚೈಸಿಗಳಿಗೆ ತಲಾ ಐವರು ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಬಿಸಿಸಿಐ ಅನುಮತಿ ನೀಡುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಬಿಸಿಸಿಐ ಈಗಾಗಲೇ ಈ ಬಗ್ಗೆ ಫ್ರಾಂಚೈಸಿಗಳ ಜೊತೆ ಮಾತುಕತೆ ನಡೆಸಿದೆ. ಕೆಲ ಫ್ರಾಂಚೈಸಿಗಳು 5ರಿಂದ 6 ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಲು ಅವಕಾಶ ನೀಡಬೇಕೆಂದು ಬೇಡಿಕೆ ಇಟ್ಟಿದ್ದವು. ಸದ್ಯ ಬಿಸಿಸಿಐ ಗರಿಷ್ಠ ಐವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಅವಕಾಶ ನೀಡಲಿದೆ ಎಂದು ಗೊತ್ತಾಗಿದೆ. ಆದರೆ ಇದರಲ್ಲಿ ವಿದೇಶಿ ಆಟಗಾರರ ಸಂಖ್ಯೆ ಎಷ್ಟು ಎಂಬುದರ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಇದೇ ವೇಳೆ ಹರಾಜಿನಲ್ಲಿ ರೈಟ್‌ ಟು ಮ್ಯಾಚ್‌(ಆರ್‌ಟಿಎಮ್‌) ಅವಕಾಶ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.

ಭಾರತ ವಿರುದ್ಧ 2ನೇ ಟೆಸ್ಟ್‌ ಆಡಲಿರುವ ಶಕೀಬ್‌ ಹಸನ್‌

ಕಾನ್ಪುರ: ಭಾರತ ವಿರುದ್ಧ ಆರಂಭಿಕ ಟೆಸ್ಟ್‌ ಪಂದ್ಯದ ವೇಳೆ ಗಾಯಗೊಂಡಿದ್ದ ಬಾಂಗ್ಲಾದೇಶದ ಹಿರಿಯ ಆಲ್ರೌಂಡರ್‌ ಶಕೀಬ್‌ ಅಲ್‌ ಹಸನ್‌ ಸದ್ಯ ಗುಣಮುಖರಾಗಿದ್ದು, 2ನೇ ಟೆಸ್ಟ್‌ ಪಂದ್ಯದಲ್ಲಿ ಆಡಲಿದ್ದಾರೆ. 

ಇದನ್ನು ತಂಡದ ಕೋಚ್‌ ಚಂಡಿಕಾ ಹತುರುಸಿಂಘೆ ಖಚಿತಪಡಿಸಿದ್ದು, ಶಕೀಬ್‌ 2ನೇ ಟೆಸ್ಟ್‌ ಪಂದ್ಯಕ್ಕೆ ಆಯ್ಕೆಗೆ ಲಭ್ಯವಿದ್ದಾರೆ ಎಂದು ತಿಳಿಸಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಜಸ್‌ಪ್ರೀತ್‌ ಬೂಮ್ರಾ ಎಸೆದ ಚೆಂಡು ಬ್ಯಾಟ್‌ ಮಾಡುತ್ತಿದ್ದ ಶಕೀಬ್ ಕೈ ಬೆರಳಿಗೆ ಬಡಿದಿತ್ತು. ಪಂದ್ಯದ ಬಳಿಕ ಅವರನ್ನು ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿತ್ತು. ಹೀಗಾಗಿ ಅವರು 2ನೇ ಪಂದ್ಯದಲ್ಲಿ ಆಡುವುದು ಅನುಮಾನ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

PREV

Recommended Stories

ಆರ್‌ಸಿಬಿ ತಂಡ ಖರೀದಿಗೆ 6 ಸಂಸ್ಥೆಗಳ ಆಸಕ್ತಿ!
ಇನ್ನಿಂಗ್ಸ್‌ ಮುನ್ನಡೆಗೆ ರಾಜ್ಯ ಹೋರಾಟ