ಎರಡು ಚಿನ್ನದ ಪದಕ ಪಡೆದು ಈ ವರ್ಷ ಇಂಡೋನೇಷ್ಯಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಕ್ರೀಡಾ ಪ್ರಮೋಷನ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ಮಂಗಳೂರು: ಮಂಗಳೂರು ಮೂಲದ ಅಹ್ಯಾನ್ ಅನ್ವರ್ ಗೋವಾದ ಪಣಜಿಯಲ್ಲಿ ನಡೆದ ರಾಜ್ಯ ಮಟ್ಟದ ಮಿನಿ/ಸೆಕೆಂಡರಿ ಶಾಲಾ ಕ್ರೀಡೆಯಲ್ಲಿ ಅಂಡರ್-11 ಬಾಲಕರ ರೋಲರ್ ಸ್ಕೇಟಿಂಗ್‌ನಲ್ಲಿ ಚಿನ್ನದ ಪದಕ ಹಾಗೂ ರಿಂಕ್ 1ರಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ವಿಜೇತರಾಗಿದ್ದಾರೆ. ಜೊತೆಗೆ ದಕ್ಷಿಣ ಗೋವಾದ ಮಡಗಾಂವ್‌ನಲ್ಲಿ ಫೆಬ್ರವರಿ 1ರಂದು ನಡೆದ ಗೋವಾ ಸ್ಕೇಟಿಂಗ್ ಫೆಸ್ಟಿವಲ್ ಟೂರ್ನಮೆಂಟ್ ನಲ್ಲಿ, 11ವರ್ಷ ದೊಳಗಿನ ಬಾಲಕರ ವಿಭಾಗದಲ್ಲಿ 1000 ಮೀಟರ್ ಮತ್ತು 800 ಮೀಟರ್ ಸ್ಕೇಟಿಂಗ್‌ನಲ್ಲಿ ಎರಡು ಚಿನ್ನದ ಪದಕ ಪಡೆದು ಈ ವರ್ಷ ಇಂಡೋನೇಷ್ಯಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಕ್ರೀಡಾ ಪ್ರಮೋಷನ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.ಅಬ್ದುಲ್ ಅನ್ವರ್ ಕುತ್ತೆತ್ತೂರು ಹಾಗೂ ಹಸೀನಾ ದಂಪತಿಯ ಪುತ್ರನಾಗಿರುವ ಇವನು ಪ್ರಸ್ತುತ ಯೂನಿವರ್ಸಲ್ ರೋಲರ್ ಸ್ಕೇಟಿಂಗ್ ಕ್ಲಬ್ ಮಡಗಾoವ್ ಗೋವಾ ಇದರ ಪ್ರತಿನಿಧಿಯಾಗಿರುತ್ತಾರೆ.