ಭಾರತಕ್ಕೆ ಬಿಸಿ ಮುಟ್ಟಿಸಿದ ಇಂಗ್ಲೆಂಡ್‌ನ ‘ಬಾಜ್‌ಬಾಲ್‌’ ಆಟ

KannadaprabhaNewsNetwork |  
Published : Feb 17, 2024, 01:19 AM ISTUpdated : Feb 17, 2024, 02:07 PM IST
ಡಕೆಟ್‌-ಅಶ್ವಿನ್‌ | Kannada Prabha

ಸಾರಾಂಶ

ಭಾರತದ 445 ರನ್‌ಗೆ ಉತ್ತರವಾಗಿ ಬ್ಯಾಟಿಂಗ್‌ ಆರಂಭಿಸಿರುವ ಇಂಗ್ಲೆಂಡ್‌ ಭಾರತೀಯ ಬೌಲರ್‌ಗಳನ್ನು ಚೆಂಡಾಡಿತು. ಬೆನ್‌ ಡಕೆಟ್‌ ಸ್ಫೋಟಕ ಆಟದಿಂದಾಗಿ ತಂಡ 35 ಓವರಲ್ಲೇ 2 ವಿಕೆಟ್‌ಗೆ 207 ರನ್‌ ಕಲೆಹಾಕಿದೆ.

ರಾಜ್‌ಕೋಟ್‌: ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾಕ್ಕೆ ಪ್ರವಾಸಿ ತಂಡದ ‘ಬಾಜ್‌ಬಾಲ್‌’ ಆಟದ ಬಿಸಿ ತಟ್ಟಿದೆ. 

ಆಕ್ರಮಣಕಾರಿ ಆಟದ ಮೂಲಕ ಇಂಗ್ಲೆಂಡ್‌ ಭಾರತಕ್ಕೆ ಆಘಾತ ನೀಡಿದ್ದು, ಪಂದ್ಯದಲ್ಲಿ ಮೇಲುಗೈ ಸಾಧಿಸಲು ಎದುರು ನೋಡುತ್ತಿದೆ. 

ಭಾರತದ 445 ರನ್‌ಗೆ ಉತ್ತರವಾಗಿ ಇಂಗ್ಲೆಂಡ್‌ 2ನೇ ದಿನದಂತ್ಯಕ್ಕೆ ಕೇವಲ 35 ಓವರ್‌ಗಳಲ್ಲಿ 2 ವಿಕೆಟ್‌ಗೆ 207 ರನ್‌ ಗಳಿಸಿದ್ದು, ಇನ್ನು 238 ರನ್‌ ಹಿನ್ನಡೆಯಲ್ಲಿದೆ.

ಮೊದಲ ದಿನ 5 ವಿಕೆಟ್‌ಗೆ 326 ರನ್‌ ಕಲೆಹಾಕಿದ್ದ ಭಾರತ ಶುಕ್ರವಾರವೂ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿತು. ರವೀಂದ್ರ ಜಡೇಜಾ(112) ಮೊದಲ ದಿನದ ಮೊತ್ತಕ್ಕೆ 2 ರನ್‌ ಸೇರಿಸಿ ಔಟಾದರು. 

ಆರ್‌.ಅಶ್ವಿನ್‌ 37 ರನ್‌ ಗಳಿಸಿದರೆ, ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಧೃವ್‌ ಜುರೆಲ್‌ 46ಕ್ಕೆ ವಿಕೆಟ್‌ ಒಪ್ಪಿಸಿದರು. ಬೂಮ್ರಾರ 26 ರನ್‌ ತಂಡವನ್ನು 450ರ ಸನಿಹಕ್ಕೆ ತಲುಪಿಸಿತು. ವುಡ್‌ 4 ವಿಕೆಟ್‌ ಕಿತ್ತರು.

ಇಂಗ್ಲೆಂಡ್‌ ಆರ್ಭಟ: ಬಳಿಕ ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿತು. ಜ್ಯಾಕ್‌ ಕ್ರಾವ್ಲಿ 15ಕ್ಕೆ ಔಟಾದರೂ, ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಬೆನ್‌ ಡಕೆಟ್‌ 118 ಎಸೆತಗಳಲ್ಲಿ 21 ಬೌಂಡರಿ, 2 ಸಿಕ್ಸರ್‌ನೊಂದಿಗೆ ಔಟಾಗದೆ 133 ರನ್‌ ಸಿಡಿಸಿದರು. ರೂಟ್‌(09) ಕೂಡಾ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಅಶ್ವಿನ್‌, ಸಿರಾಜ್‌ ತಲಾ 1 ವಿಕೆಟ್‌ ಕಿತ್ತರು.

ಸ್ಕೋರ್‌: ಭಾರತ 445/10(ಜಡೇಜಾ 112, ಧೃವ್‌ 46, ಅಶ್ವಿನ್‌ 37, ವುಡ್‌ 4-114), ಇಂಗ್ಲೆಂಡ್‌ 207/2(2ನೇ ದಿನದಂತ್ಯಕ್ಕೆ)(ಡಕೆಟ್‌ 133*, ಪೋಪ್‌ 39, ಅಶ್ವಿನ್‌ 1-37)

PREV

Recommended Stories

ರಾಜ್ಯಸಭೆಯಲ್ಲೂ ಕ್ರೀಡಾಆಡಳಿತ ಮಸೂದೆ ಪಾಸ್‌
ಕೊಹ್ಲಿ, ರೋಹಿತ್‌ ನಿವೃತ್ತಿ ವದಂತಿ : 2027ರ ಏಕದಿನ ವಿಶ್ವಕಪ್‌ ಆಡಲ್ವಾ ದಿಗ್ಗಜರು?