ದೆಹಲಿ ಕ್ಯಾಪಿಟಲ್ಸ್ ಮಹಿಳಾ ತಂಡಕ್ಕೆ ಇನ್ನು ಡಿಪಿ ವರ್ಲ್ಡ್ ಶೀರ್ಷಿಕೆ ಪ್ರಾಯೋಜಕತ್ವ

KannadaprabhaNewsNetwork |  
Published : Feb 17, 2024, 01:17 AM IST
ಕನ್ನಡಪ್ರಭ ಚಿತ್ರ | Kannada Prabha

ಸಾರಾಂಶ

ಕಳೆದ ಬಾರಿ ರನ್ನರ್‌-ಅಪ್‌ ಆಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡವು ಫೆ.23ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಪಂದ್ಯವಾಡಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಡಿಪಿ ವರ್ಲ್ಡ್ ಸಂಸ್ಥೆ ಮತ್ತು ಮಹಿಳಾ ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ ತಂಡ ಶುಕ್ರವಾರ ಹೊಸ ದೀರ್ಘಾವಧಿಯ ಪಾಲುದಾರಿಕೆಯನ್ನು ಘೋಷಿಸಿವೆ. ಸ್ಮಾರ್ಟ್ ಎಂಡ್-ಟು-ಎಂಡ್ ಸಪ್ಲೈ ಚೇನ್ ಪರಿಹಾರಗಳನ್ನು ಪೂರೈಕೆ ಮಾಡುವಲ್ಲಿ ಮುಂಚೂಣಿಯಲ್ಲಿರುವ ಡಿಪಿ ವರ್ಲ್ಡ್ 2024ರಿಂದ ಡೆಲ್ಲಿ ಕ್ಯಾಪಿಟಲ್ ಮಹಿಳಾ ತಂಡದ ಟೈಟಲ್ ಪಾಲುದಾರ ಆಗಿರಲಿದೆ.ಇದೊಂದು ಬಹು ವರ್ಷಗಳ ಪಾಲುದಾರಿಕೆಯಾಗಿದ್ದು, ಶುಕ್ರವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಈ ಪಾಲುದಾರಿಕೆಯನ್ನು ಘೋಷಣೆ ಮಾಡಲಾಯಿತು. ಈ ಮೂಲಕ ಡಿಪಿ ವರ್ಲ್ಡ್ ಫ್ರಾಂಚೈಸಿಯೊಂದಿಗಿನ ತನ್ನ ಸಂಬಂಧವನ್ನು ಮತ್ತಷ್ಟು ಶಕ್ತಿಯುತಗೊಳಿಸಿಕೊಳ್ಳಲಿದೆ. ಈ ಪಾಲುದಾರಿಕೆಯ ಭಾಗವಾಗಿ ದೆಹಲಿ ಕ್ಯಾಪಿಟಲ್ಸ್‌ನ ಅಧಿಕೃತ ಮ್ಯಾಚ್ ಜೆರ್ಸಿ ಮತ್ತು ಟ್ರೈನಿಂಗ್ ಜೆರ್ಸಿಯಲ್ಲಿ ಡಿಪಿ ವರ್ಲ್ಡ್ ಲೋಗೋ ಪ್ರಮುಖವಾಗಿ ಕಾಣಿಸಿಕೊಳ್ಳಲಿದೆ.ಡಿಪಿ ವರ್ಲ್ಡ್ ಸಬ್ ಕಾಂಟಿನೆಂಟ್ ನ ಲಾಜಿಸ್ಟಿಕ್ಸ್ ಮುಖ್ಯ ವಾಣಿಜ್ಯ ಅಧಿಕಾರಿ ಅಶ್ವನಿ ನಾಥ್ ಅವರು ಈ ಪಾಲುದಾರಿಕೆ ಬಗ್ಗೆ ಮಾತನಾಡಿ, ‘ನಾವು ದೆಹಲಿ ಕ್ಯಾಪಿಟಲ್ಸ್ ನ ಮಹಿಳಾ ತಂಡದ ಟೈಟಲ್ ಪಾಲುದಾರ ಆಗುವ ಮೂಲಕ ನಮ್ಮ ಪಾಲುದಾರಿಕೆಯನ್ನು ವಿಸ್ತರಣೆ ಮಾಡಿಕೊಳ್ಳುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಈ ಹಿಂದಿಗಿಂತಲೂ ಕಳೆದ ಹಲವು ವರ್ಷಗಳಲ್ಲಿ ಮಹಿಳಾ ಕ್ರಿಕೆಟ್ ಗೆ ಹೆಚ್ಚು ಹೆಚ್ಚು ಆಟಗಾರ್ತಿಯರು ಬರುತ್ತಿದ್ದಾರೆ ಮತ್ತು ಅಭಿಮಾನಿಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿರುವ ಮೂಲಕ ಮಹಿಳಾ ಕ್ರಿಕೆಟ್‌ನಲ್ಲಿ ಸಾಕಷ್ಟು ರೂಪಾಂತರಗಳಾಗಿವೆ ಎಂದರು.ಡಿಪಿ ವರ್ಲ್ಡ್ ನಲ್ಲಿ ಉದ್ಯೋಗಿಗಳಿಗೆ ಹೆಚ್ಚು ಅಗತ್ಯವಿರುವ ಕೌಶಲ್ಯ ಮತ್ತು ಪ್ರತಿಭೆಯನ್ನು ಹೆಚ್ಚಿಸಲು 2025ರ ವೇಳೆಗೆ ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ಶೇ.20 ಕ್ಕೆ ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ. ಈ ಬದ್ಧತೆಯು ಈಗ ದೆಹಲಿ ಕ್ಯಾಪಿಟಲ್ಸ್ ನೊಂದಿಗೆ ನಮ್ಮ ಪಾಲುದಾರಿಕೆಯನ್ನು ವಿಸ್ತರಣೆ ಮಾಡುತ್ತಿದೆ. ಏಕೆಂದರೆ, ನಾವು ಮುಂದಿನ ಪೀಳಿಗೆಗೆ ಉತ್ತಮ ಮತ್ತು ಹೆಚ್ಚು ಸಮಾನವಾದ ಪ್ರಪಂಚದ ಮೂಲಕ ಕ್ರಿಕೆಟ್ ಮೈದಾನದಲ್ಲಿ ಮತ್ತು ಹೊರಗೆ ಶಾಶ್ವತವಾದ ಒಂದು ಪರಂಪರೆಯನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೆ ನಾವು ಕ್ರಿಕೆಟ್ ಮತ್ತು ಜಾಗತಿಕ ವ್ಯಾಪಾರ ಎರಡನ್ನೂ ಕ್ರಾಂತಿಕಾರಕವಾಗಿ ಮುಂದುವರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ ಮತ್ತು ಸಾಧ್ಯವಾದಷ್ಟೂ ಪ್ರತಿಯೊಬ್ಬರಿಗೂ ಅನುಕೂಲವಾಗುವ ರೀತಿಯಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು.ಈ ಹೊಸ ಪಾಲುದಾರಿಕೆ ಬಗ್ಗೆ ಮಾತನಾಡಿದ ದೆಹಲಿ ಕ್ಯಾಪಿಟಲ್ಸ್ ಸಿಇಒ ಸುಖವಿಂದರ್ ಸಿಂಗ್ ಅವರು, ‘ನಮ್ಮ ಮಹಿಳಾ ತಂಡಕ್ಕೆ ಡಿಪಿ ವರ್ಲ್ಡ್ ಟೈಟಲ್ ಪಾಲುದಾರ ಸಂಸ್ಥೆಯಾಗುತ್ತಿರುವುದಕ್ಕೆ ನಮಗೆ ಅತೀವ ಸಂತಸವಾಗುತ್ತಿದೆ. ಮಹಿಳೆಯರನ್ನು ಕ್ರೀಡೆಯ ಕಡೆಗೆ ಆಸಕ್ತಿ ತೋರುವಂತೆ ಮಾಡುವ ಬದ್ಧತೆಯನ್ನು ಹೊಂದಿರುವ ಡಿಪಿ ವರ್ಲ್ಡ್ ನ ದೀರ್ಘಾವಧಿಯ ಬದ್ಧತೆಯು ಶ್ಲಾಘನೀಯವಾಗಿದೆ ಮತ್ತು ಈ ಪಾಲುದಾರಿಕೆಯ ಬಗ್ಗೆ ನಾವು ಹೆಚ್ಚು ಉತ್ಸುಕರಾಗಿದ್ದೇವೆ ಎಂದರು.ನಮ್ಮ ಐಪಿಎಲ್ ತಂಡದೊಂದಿಗೆ ಯಶಸ್ವಿ ಇನ್ನಿಂಗ್ಸ್ ನಂತರ ಈ ಸಹಯೋಗವು ಒಂದು ಸಹಜ ಪ್ರಕ್ರಿಯೆಯಾಗಿದೆ. ಎರಡೂ ತಂಡಗಳಿಗೆ ಇದೊಂದು ಮೈಲಿಗಲ್ಲಿನ ಕ್ಷಣವಾಗಿದೆ. ಈ ಪಾಲುದಾರಿಕೆ ಮೂಲಕ ದೆಹಲಿ ಕ್ಯಾಪಿಟಲ್ಸ್ ಮತ್ತು ಡಿಪಿ ವರ್ಲ್ಡ್ ಒಟ್ಟಾಗಿ ಕ್ರಿಕೆಟ್ ಋತುವನ್ನು ಆರಂಭಿಸುವುದನ್ನು ಎದುರು ನೋಡುತ್ತಿದ್ದೇವೆ ಎಂದರು.ಈ ಪಾಲುದಾರಿಕೆಯ ಭಾಗವಾಗಿ ಲಾಜಿಸ್ಟಿಕ್ಸ್ ನಲ್ಲಿ ಮುಂಚೂಣಿಯಲ್ಲಿರುವ ಡಿಪಿ ವರ್ಲ್ಡ್ ನ ಬಿಯಾಂಡ್ ಬೌಂಡರೀಸ್ ಉಪಕ್ರಮವನ್ನು ಬೆಂಬಲಿಸಲು ದೆಹಲಿ ಕ್ಯಾಪಿಟಲ್ಸ್ ಡಿಪಿ ವರ್ಲ್ಡ್ ಜೊತೆ ಸೇರಿ ಕೆಲಸ ಮಾಡಲಿದೆ. ಈ ಉಪಕ್ರಮವು ಡಿಪಿ ವರ್ಲ್ಡ್ ತನ್ನ ಜಾಗತಿಕ ಜಾಲ ಮತ್ತು ಸ್ಮಾರ್ಟ್ ಲಾಜಿಸ್ಟಿಕ್ಸ್ ಸಾಮರ್ಥ್ಯಗಳನ್ನು ವಿನ್ಯಾಸಗೊಳಿಸಲು ಹಾಗೂ ಪ್ರಪಂಚದಾದ್ಯಂತ ಕೆಳಮಟ್ಟದ ಕ್ರಿಕೆಟ್ ಕ್ಲಬ್‌ಗಳಿಗೆ ಐವತ್ತು ಮರುಬಳಕೆಯ ಶಿಪ್ಪಿಂಗ್ ಕಂಟೇನರ್ ಗಳನ್ನು ವಿನ್ಯಾಸಗೊಳಿಸಿ ವಿತರಣೆ ಮಾಡಲಿದೆ. ಈ ಕಂಟೇನರ್ ಗಳಲ್ಲಿ ಕ್ರಿಕೆಟ್ ಗೆ ಅಗತ್ಯವಿರುವ ಎಲ್ಲಾ ಪರಿಕರಗಳನ್ನು ಇರಲಿವೆ ಎಂದು ತಿಳಿಸಿದರು.ಈ ವ್ಯವಸ್ಥೆಯನ್ನು 2023 ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸಂದರ್ಭದಲ್ಲಿ ಆರಂಭಿಸಲಾಗಿತ್ತು. ಡಿಪಿ ವರ್ಲ್ಡ್ ಪ್ರತಿ 100 ರನ್ ಗಳಿಗೆ 10 ಕಿಟ್ ಗಳನ್ನು ನೀಡುವ ವಾಗ್ದಾನ ಮಾಡಿತ್ತು. ಇಲ್ಲಿಯವರೆಗೆ ನಾಲ್ಕು ಬೆಸ್ಟೋಕ್ ಕಂಟೇನರ್ ಗಳ ಮೂಲಕ ತಳಮಟ್ಟದ ಕ್ರಿಕೆಟ್ ಕ್ಲಬ್ ಮತ್ತು ತಂಡಗಳಿಗೆ 2,800 ಕ್ಕೂ ಹೆಚ್ಚು ಕಿಟ್ ಗಳನ್ನು ವಿತರಣೆ ಮಾಡಿದೆ ಎಂದರು.ಡಿಪಿ ವರ್ಲ್ಡ್‌ನ ಈ ಹೊಸ ಪಾಲುದಾರಿಕೆಯು ಮಹಿಳಾ ಕ್ರೀಡೆಯನ್ನು ಬೆಂಬಲಿಸುವ ಬದ್ಧತೆಗೆ ಸಾಕ್ಷಿಯಾಗಿದೆ. ಕ್ರಿಕೆಟ್‌ನಲ್ಲಿ ಡಿಪಿ ವರ್ಲ್ಡ್ ಜೋಹನ್ಸ್ ಬರ್ಗ್ ಮೂಲದ ಸೆಂಟ್ರಲ್ ಲಯನ್ಸ್ ಪುರುಷರ ಮತ್ತು ಮಹಿಳೆಯರ ತಂಡಗಳಿಗೆ ಪ್ರಮುಖ ಪಾಲುದಾರ ಸಂಸ್ಥೆಯಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಗ್ಲೋಬಲ್ ಲಾಜಿಸ್ಟಿಕ್ಸ್ ಪಾರ್ಟ್ನರ್ ಆಗಿದೆ. ಈ ಮೂಲಕ 2024 ರ ಮಹಿಳಾ ಟಿ20 ವಿಶ್ವಕಪ್ ಗೆ ಬೆಂಬಲವಾಗಿ ನಿಲ್ಲಲಿದೆ. 2023 ರಲ್ಲಿ ಡಿಪಿ ವರ್ಲ್ಡ್ ಆಸ್ಟ್ರೇಲಿಯಾದ ಫುಟ್ಬಾಲ್ ಕ್ಲಬ್ ಫ್ರೀಮ್ಯಾಂಟಲ್ ಡಾಕರ್ಸ್‌ನ ಪುರುಷ ಮತ್ತು ಮಹಿಳಾ ತಂಡಗಳಿಗೆ ಪ್ಲಾಟಿನಂ ಪಾಲುದಾರ ಸಂಸ್ಥೆಯಾಗಿ ಘೋಷಣೆಯಾಗಿದೆ.ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡವು ಫೆಬ್ರವರಿ 23 ರಂದು ಮುಂಬೈ ಇಂಡಿಯನ್ಸ್ ತಂಡದ ವಿರುದ್ಧದ ಪಂದ್ಯವನ್ನು ಆಡಲಿದ್ದು, ಈ ಮೂಲಕ ಡಿಪಿ ವರ್ಲ್ಡ್ ಈ ಸಾಲಿನ ಮಹಿಳಾ ಪ್ರೀಮಿಯರ್ ಲೀಗ್ ಪಯಣವನ್ನು ಆರಂಭಿಸಲಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಚಿನ್ನಸ್ವಾಮಿಯಲ್ಲಿ ಕೊಹ್ಲಿ-ಪಡಿಕ್ಕಲ್‌ ಗ್ರೇಟ್‌ ಚೇಸ್‌! ಆರ್‌ಸಿಬಿಗೆ 5 ವಿಕೆಟ್‌ ಗೆಲುವು
ತವರಿನಲ್ಲಿ ಆರ್‌ಸಿಬಿಗಿಂದು ಕೊನೆ ಲೀಗ್‌ ಪಂದ್ಯ