ಪ್ಯಾರಾ ಅಥ್ಲೀಟ್‌ಗೆ ಅವಾಚ್ಯವಾಗಿ ನಿಂದಿಸಿದ ಕೋಚ್‌ ಸತ್ಯನಾರಾಯಣ: ಆರೋಪ

KannadaprabhaNewsNetwork | Published : Aug 7, 2024 1:36 AM

ಸಾರಾಂಶ

ಕ್ರಮಕ್ಕೆ ರಾಜ್ಯ ವಿಕಲಾಂಗ ಕ್ರೀಡಾಪಟುಗಳ ಸಂಸ್ಥೆ ಆಗ್ರಹ. ಘಟನೆ ಬಗ್ಗೆ ಸ್ಪಷ್ಟನೆ ಕೇಳಲು ಸತ್ಯನಾರಾಯಣರನ್ನು ‘ಕನ್ನಡಪ್ರಭ’ ಸಂಪರ್ಕಿಸಲು ಪ್ರಯತ್ನಿಸಿದರೂ, ಅವರು ಕರೆ ಸ್ವೀಕರಿಸಿಲ್ಲ.

ಕನ್ನಡಪ್ರಭ ವಾರ್ತೆ ಬೆಂಗಳೂರುಅರ್ಜುನ ಪ್ರಶಸ್ತಿ ವಿಜೇತ ಪ್ಯಾರಾ ಈಜು ಪಟು ಪ್ರಶಾಂತ್‌ ಕರ್ಮಕಾರ್‌ ವಿರುದ್ಧ ಭಾರತೀಯ ಪ್ಯಾರಾಲಿಂಪಿಕ್ಸ್‌ ಸಮಿತಿ(ಪಿಸಿಐ)ಯ ಅಥ್ಲೆಟಿಕ್ಸ್‌ ವಿಭಾಗದ ಮುಖ್ಯಸ್ಥ, ಪ್ಯಾರಾ ಅಥ್ಲೆಟಿಕ್ಸ್‌ ಕೋಚ್‌ ಸತ್ಯನಾರಾಯಣ ಅವಾಚ್ಯ ಶಬ್ಧಗಳನ್ನು ಬಳಸಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಸತ್ಯ ವಿರುದ್ಧ ಕ್ರಮಕೈಗೊಳ್ಳಲು ಭಾರತೀಯ ಕ್ರೀಡಾ ಇಲಾಖೆ, ಪ್ಯಾರಾಲಿಂಪಿಕ್ಸ್‌ ಸಮಿತಿಗೆ ಕರ್ನಾಟಕ ರಾಜ್ಯ ವಿಕಲಾಂಗ ಕ್ರೀಡಾಪಟುಗಳ ಸಂಸ್ಥೆ(ಕೆಎಸ್‌ಎಪಿಎಚ್‌) ಆಗ್ರಹಿಸಿದೆ.‘ಅಧಿಕಾರ ದುರ್ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಹರ್ಯಾಣದ ಪ್ರಶಾಂತ್‌ ಅವರು ಸತ್ಯನಾರಾಯಣರನ್ನು ಪ್ರಶ್ನಿಸಿದ್ದರು. ಈ ವೇಳೆ ಪ್ರಶಾಂತ್‌, ಅವರ ಕುಟುಂಬಸ್ಥರ ಬಗ್ಗೆ ಸತ್ಯನಾರಾಯಣ ಹಾಗೂ ಪಿಸಿಐ ಜಂಟಿ ಕಾರ್ಯದರ್ಶಿ ದಿವಾಕರ್‌ ನಿಂದನಾತ್ಮಕ ಮಾತುಗಳನ್ನಾಡಿದ್ದಾರೆ ಎಂದು ಕೆಎಸ್‌ಎಪಿಎಚ್‌ ಅಧ್ಯಕ್ಷ, ಪದ್ಮಶ್ರೀ ವಿಜೇತ ಕೆ.ವೈ. ವೆಂಕಟೇಶ್‌ ಅವರು ದೂರಿದ್ದಾರೆ. ಅಲ್ಲದೆ ಸತ್ಯನಾರಾಯಣರನ್ನು ಕೆಎಸ್‌ಎಪಿಎಚ್‌ ಸದಸ್ಯ ಸ್ಥಾನದಿಂದ ಅಮಾನತುಗೊಳಿಸಿ, ನೋಟಿಸ್‌ ಜಾರಿಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸತ್ಯನಾರಾಯಣರನ್ನು ‘ಕನ್ನಡಪ್ರಭ’ ಸಂಪರ್ಕಿಸಲು ಪ್ರಯತ್ನಿಸಿದರೂ, ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.ಇಂದು ಮಹಿಳಾ ಗಾಲ್ಫ್‌ ಶುರು: ಅದಿತಿ ಆಕರ್ಷಣೆ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನಿಯಾಗಿ, ಐತಿಹಾಸಿಕ ಪದಕವನ್ನು ಅಲ್ಪದರಲ್ಲೇ ತಪ್ಪಿಸಿಕೊಂಡಿದ್ದ ತಾರಾ ಗಾಲ್ಫರ್‌, ಕರ್ನಾಟಕದ ಅದಿತಿ ಅಶೋಕ್‌ ಬುಧವಾರದಿಂದ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಅವರ ಜೊತೆ ಮಹಿಳಾ ವಿಭಾಗದದಲ್ಲಿ ಭಾರತದ ಮತ್ತೋರ್ವ ಸ್ಪರ್ಧಿ ದೀಕ್ಷಾ ಡಾಗರ್‌ ಕೂಡಾ ಸ್ಪರ್ಧಿಸುತ್ತಿದ್ದಾರೆ. ಅದಿತಿ 3 ವರ್ಷಗಳ ಹಿಂದಿನ ಕ್ರೀಡಾಕೂಟದಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದರೂ, ಕೊನೆ ಕ್ಷಣದಲ್ಲಿ ಪದಕ ವಂಚಿತರಾಗಿದ್ದರು. ಅವರು ಈ ಬಾರಿ ಭಾರತದ ಪ್ರಮುಖ ಪದಕ ಭರವಸೆಯಾಗಿದ್ದು, ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. 2ನೇ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ದೀಕ್ಷಾ ಮೇಲೂ ಭರವಸೆಯಿದೆ. ಒಟ್ಟು 4 ಸುತ್ತಿನ ಪಂದ್ಯಗಳು ನಡೆಯಲಿದ್ದು, ಶನಿವಾರ ಮುಕ್ತಾಯಗೊಳ್ಳಲಿದೆ.

Share this article