ಹಾಲಿ ಚಾಂಪಿಯನ್‌ ಭಾರತ, 2026ರ ಐಸಿಸಿ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಆಘಾತಕ್ಕೊಳಗಾಗುವ ಆತಂಕಕ್ಕೆ ಸಿಲುಕಿತ್ತು. ಅಮೆರಿಕ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಭಾರತಕ್ಕೆ ನಾಯಕ ಸೂರ್ಯಕುಮಾರ್‌ ಯಾದವ್‌ ಆಸರೆಯಾದರು

 ಮುಂಬೈ: ಹಾಲಿ ಚಾಂಪಿಯನ್‌ ಭಾರತ, 2026ರ ಐಸಿಸಿ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಆಘಾತಕ್ಕೊಳಗಾಗುವ ಆತಂಕಕ್ಕೆ ಸಿಲುಕಿತ್ತು. ಅಮೆರಿಕ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಭಾರತಕ್ಕೆ ನಾಯಕ ಸೂರ್ಯಕುಮಾರ್‌ ಯಾದವ್‌ ಆಸರೆಯಾದರು. ಅವರ ತೋರಿದ ಸಾಹಸದಿಂದಾಗಿ, ಭಾರತ 00 ರನ್ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಟಾಸ್‌ ಸೋತು ಬ್ಯಾಟಿಂಗ್‌ಗಿಳಿದ ಭಾರತ

ಟಾಸ್‌ ಸೋತು ಬ್ಯಾಟಿಂಗ್‌ಗಿಳಿದ ಭಾರತ 77 ರನ್‌ಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಭಿಷೇಕ್‌ 0, ಕಿಶನ್‌ 20, ದುಬೆ 0, ರಿಂಕು 6, ಹಾರ್ದಿಕ್‌ 5 ನಿರಾಸೆ ಮೂಡಿಸಿದರು. ತಿಲಕ್‌ 25 ರನ್‌ ಕೊಡುಗೆ ನೀಡಿದರೂ, ನಾಯಕನ ಜೊತೆ ಕ್ರೀಸ್‌ನಲ್ಲಿ ನೆಲೆಯೂರಲಿಲ್ಲ.

7ನೇ ವಿಕೆಟ್‌ ಪತನಗೊಂಡಾಗ ತಂಡದ ಮೊತ್ತ 118 ರನ್‌. ಆದರೆ, ಸೂರ್ಯಕುಮಾರ್‌ ತಮ್ಮ ಅನುಭವ ಬಳಸಿ 49 ಎಸೆತದಲ್ಲಿ 10 ಬೌಂಡರಿ, 4 ಸಿಕ್ಸರ್‌ನೊಂದಿಗೆ ಔಟಾಗದೆ 84 ರನ್‌ ಸಿಡಿಸಿ ತಂಡವನ್ನು ಸುರಕ್ಷಿತ ಮೊತ್ತ ತಲುಪಿಸಿದರು. ಭಾರತ 20 ಓವರಲ್ಲಿ 9 ವಿಕೆಟ್‌ಗೆ 161 ರನ್‌ ಕಲೆಹಾಕಿತು.

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಅಮೆರಿಕ, ಆರಂಭಿಕ ಆಘಾತಕ್ಕೆ ಒಳಗಾಯಿತು. 13 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಮಿಲಿಂದ್‌ ಕುಮಾರ್‌ ಹಾಗೂ ಬೆಂಗಳೂರು ಮೂಲದ ಸಂಜಯ್‌ ಕೃಷ್ಣಮೂರ್ತಿ ಚೇತರಿಕೆ ನೀಡಿದರು. ಇವರಿಬ್ಬರು 4ನೇ ವಿಕೆಟ್‌ಗೆ 58 ರನ್‌ ಸೇರಿಸಿದರು. ಮಿಲಿಂದ್‌ 34, ಸಂಜಯ್‌ 37 ರನ್‌ ಗಳಿಸಿ ಔಟಾದ ಬಳಿಕ ಅಮೆರಿಕದ ಸೋಲು ಬಹುತೇಕ ಖಚಿತವಾಯಿತು. ಕೊನೆಗೆ 20 ಓವರಲ್ಲಿ ತಂಡ 9 ವಿಕೆಟ್‌ ನಷ್ಟಕ್ಕೆ 000 ರನ್‌ ಗಳಿಸಿ ಸೋಲಿಗೆ ಶರಣಾಯಿತು. ಭಾರತ ಪರ ಅರ್ಶ್‌ದೀಪ್‌, ಸಿರಾಜ್‌, ಅಕ್ಷರ್‌ ತಲಾ 2 ವಿಕೆಟ್‌ ಕಿತ್ತರು.

ಸ್ಕೋರ್‌: ಭಾರತ 20 ಓವರಲ್ಲಿ 161/9 (ಸೂರ್ಯ 84*, ತಿಲಕ್‌ 25, ಶ್ಯಾಡ್ಲೆ 4-25), ಅಮೆರಿಕ 20 ಓವರಲ್ಲಿ 000/0 (ಶುಭಂ ಸಂಜಯ್‌ 37, ಮಿಲಿಂದ್‌ 34, ಅರ್ಶ್‌ದೀಪ್‌ 2-18, ಅಕ್ಷರ್‌ 2-24) ಪಂದ್ಯಶ್ರೇಷ್ಠ: ಸೂರ್ಯಕುಮಾರ್‌

ಅಮೆರಿಕ ತಂಡದಲ್ಲಿ ಬೆಂಗಳೂರು ಮೂಲದ ಸಂಜಯ್‌ ಕೃಷ್ಣಮೂರ್ತಿ!

ಅಮೆರಿಕದ ವಿಶ್ವಕಪ್‌ ತಂಡದಲ್ಲಿ ಬೆಂಗಳೂರು ಮೂಲದ, 22 ವರ್ಷ ವಯಸ್ಸಿನ ಸಂಜಯ್‌ ಕೃಷ್ಣಮೂರ್ತಿ ಆಡುತ್ತಿದ್ದಾರೆ. ಅಮೆರಿಕದ ಆರ್ಲಿಯಾನ್ಸ್‌ನಲ್ಲಿ ಜನಿಸಿದ್ದ ಸಂಜಯ್, ಕರ್ನಾಟಕ ಪರ ಅಂಡರ್‌-16 ಕ್ರಿಕೆಟ್‌ ಆಡಿದ್ದಾರೆ.