ಆರ್‌ಸಿಬಿ vs ಡೆಲ್ಲಿ: ಈ ಸಲ ಡಬ್ಲ್ಯುಪಿಎಲ್‌ ಕಪ್‌ ಯಾರಿಗೆ?

KannadaprabhaNewsNetwork |  
Published : Mar 17, 2024, 01:47 AM ISTUpdated : Mar 17, 2024, 08:40 AM IST
ಟ್ರೋಫಿ ಜೊತೆ ಡೆಲ್ಲಿ-ಆರ್‌ಸಿಬಿ ನಾಯಕಿಯರು | Kannada Prabha

ಸಾರಾಂಶ

ಇಂದು 2ನೇ ಆವೃತ್ತಿ ಡಬ್ಲ್ಯುಪಿಎಲ್‌ ಫೈನಲ್. ನವದೆಹಲಿಯ ಜೇಟ್ಲಿ ಕ್ರೀಡಾಂಗಣ ಆತಿಥ್ಯ. ಚೊಚ್ಚಲ ಪ್ರಶಸ್ತಿಗಾಗಿ ಇತ್ತಂಡಗಳ ಫೈಟ್‌. ಕ್ಯಾಪಿಟಲ್ಸ್‌ಗೆ ಕಳೆದ ಬಾರಿ ಮಿಸ್‌ ಆಗಿದ್ದ ಟ್ರೋಫಿ ಈ ಬಾರಿ ಗೆಲ್ಲಲೇಬೇಕೆಂಬ ಛಲ. ‘ಈ ಸಲ ಕಪ್‌ ನಮ್ದೇ’ ಎನ್ನುತ್ತಿರುವ ಆರ್‌ಸಿಬಿ

ನವದೆಹಲಿ: ಒಂದೆಡೆ ‘ಈ ಸಲ ಕಪ್‌ ನಮ್ದೇ’ ಎನ್ನುತ್ತಿರುವ ಆರ್‌ಸಿಬಿ. ಮತ್ತೊಂದೆಡೆ ಕಳೆದ ಬಾರಿ ಫೈನಲ್‌ಗೇರಿ ಮಿಸ್‌ ಆಗಿದ್ದ ಟ್ರೋಫಿ ಈ ಬಾರಿ ಗೆದ್ದೇ ಬಿಡುತ್ತೇವೆ ಎಂಬ ಹುಮ್ಮಸ್ಸಿನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌. 

ಉಭಯ ತಂಡಗಳು ಭಾನುವಾರ ನಡೆಯಲಿರುವ 2ನೇ ಆವೃತ್ತಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನ ಫೈನಲ್‌ನಲ್ಲಿ ಪರಸ್ಪರ ಸೆಣಸಾಡಲಿವೆ. ಇತ್ತಂಡಗಳೂ ಚೊಚ್ಚಲ ಪ್ರಶಸ್ತಿ ಗೆಲ್ಲುವ ಕಾತರದಲ್ಲಿದ್ದು, ಪಂದ್ಯಕ್ಕೆ ಅರುಣ್ ಜೇಟ್ಲಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಪೆರ್ರಿಯೇ ಭರವಸೆ: ಈ ಬಾರಿ ಟೂರ್ನಿಗೆ ಬೆಂಗಳೂರು, ಡೆಲ್ಲಿ ಆತಿಥ್ಯ ವಹಿಸಿದ್ದು, ಈ 2 ನಗರಗಳ ತಂಡಗಳೇ ಫೈನಲ್‌ಗೇರಿದ್ದು ವಿಶೇಷ. ಸ್ಮೃತಿ ಮಂಧನಾ ನಾಯಕತ್ವದ ಆರ್‌ಸಿಬಿ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದೆ. 

ಲೀಗ್‌ ಹಂತದಲ್ಲಿ ಆಡಿರುವ 8 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 4ರಲ್ಲಿ ಸೋತಿದ್ದ ತಂಡ ಎಲಿಮಿನೇಟರ್‌ನಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ 5 ರನ್‌ ರೋಚಕ ಗೆಲುವು ಸಾಧಿಸಿತ್ತು. 

ಟೂರ್ನಿಯ ಗರಿಷ್ಠ ಸ್ಕೋರರ್‌ ಎಲೈಸಿ ಪೆರ್ರಿ ಅಭೂತಪೂರ್ವ ಲಯದಲ್ಲಿದ್ದು, ತಂಡ ಫೈನಲ್‌ಗೇರಿದ್ದರ ಹಿಂದೆ ಪೆರ್ರಿ ಕೊಡುಗೆ ಮಹತ್ವದ್ದು. ಫೈನಲ್‌ನಲ್ಲೂ ಅವರ ಪ್ರದರ್ಶನವೇ ನಿರ್ಣಾಯಕ ಎನಿಸಿಕೊಳ್ಳಲಿದೆ. 

ಸ್ಮೃತಿ ಮಂಧನಾ, ರಿಚ್‌ ಘೋಷ್‌ ಬ್ಯಾಟಿಂಗ್‌ ಆಧಾರಸ್ತಂಭಗಳಾಗಿದ್ದು, ಯುವ ಸ್ಟಾರ್‌ ಶ್ರೇಯಾಂಕ ಪಾಟೀಲ್‌, ಆಶಾ ಶೋಭನಾ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದಾರೆ.

ಡೆಲ್ಲಿ ಓಟಕ್ಕಿಲ್ಲ ಬ್ರೇಕ್‌: ಕಳೆದ ಬಾರಿ ರನ್ನರ್‌-ಅಪ್‌ ಡೆಲ್ಲಿ ಈ ಬಾರಿಯೂ ಸಂಘಟಿತ ಪ್ರದರ್ಶನ ತೋರಿದ್ದು, ಲೀಗ್‌ ಹಂತದಲ್ಲಿ ಆಡಿರುವ 8 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ನೇರವಾಗಿ ಫೈನಲ್‌ ಪ್ರವೇಶಿಸಿತ್ತು. 

ನಾಯಕಿ ಮೆಗ್‌ ಲ್ಯಾನಿಂಗ್‌ 8 ಪಂದ್ಯಗಳಲ್ಲಿ 308 ರನ್‌ ಕಲೆಹಾಕಿದ್ದು, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗ್ಸ್‌ ಕೂಡಾ ಅಬ್ಬರಿಸುತ್ತಿದ್ದಾರೆ. ಮರಿಯಾನೆ ಕಾಪ್‌, ಜೆಸ್‌ ಜೊನಾಸೆನ್‌, ಶಿಖಾ ಪಾಂಡೆ ಬೌಲಿಂಗ್‌ನಲ್ಲಿ ಎದುರಾಳಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.30ಕ್ಕೆ, ನೇರಪ್ರಸಾರ: ಸ್ಪೋರ್ಟ್ಸ್‌ 18, ಜಿಯೋ ಸಿನಿಮಾ

ಡೆಲ್ಲಿ ವಿರುದ್ಧ ಗೆದ್ದ ಇಲ್ಲ ಆರ್‌ಸಿಬಿ!
ಆರ್‌ಸಿಬಿ ಈ ವರೆಗೂ ಡೆಲ್ಲಿ ವಿರುದ್ಧ 4 ಪಂದ್ಯಗಳನ್ನಾಡಿದೆ. ಕಳೆದ ಆವೃತ್ತಿಯಲ್ಲಿ ಹಾಗೂ ಈ ಬಾರಿ ಲೀಗ್‌ ಹಂತದಲ್ಲಿ ತಲಾ 2 ಬಾರಿ ಆಡಿದೆ.

ಆದರೆ ಎಲ್ಲಾ 4 ಪಂದ್ಯಗಳಲ್ಲೂ ಆರ್‌ಸಿಬಿ ಸೋತಿದೆ. ಹೀಗಾಗಿ ಫೈನಲ್‌ನಲ್ಲಿ ಡೆಲ್ಲಿ ವಿರುದ್ಧ ಆರ್‌ಸಿಬಿ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬ ಕುತೂಹಲವಿದೆ.

ಐಪಿಎಲ್‌ನಲ್ಲೂ ಕಪ್‌ ಗೆಲ್ಲದ 2 ತಂಡಗಳು!
ಐಪಿಎಲ್‌ನಲ್ಲೂ ಈ 2 ಫ್ರಾಂಚೈಸಿಗಳ ತಂಡಗಳು ಆಡುತ್ತಿದ್ದು, 2 ತಂಡಕ್ಕೂ ಈ ವರೆಗೆ ಪ್ರಶಸ್ತಿ ಗೆಲ್ಲಲಾಗಲಿಲ್ಲ. ಡೆಲ್ಲಿ ತಂಡ 2022ರಲ್ಲಿ ಫೈನಲ್‌ಗೇರಿತ್ತು. 

ಆರ್‌ಸಿಬಿ 2009, 2011 ಹಾಗೂ 2016ರಲ್ಲಿ ಪ್ರಶಸ್ತಿ ಸುತ್ತಿಗೇರಿದ್ದರೂ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿ 2 ತಂಡಗಳ ಪೈಕಿ 1 ತಂಡ ಪ್ರಶಸ್ತಿ ಬರ ನೀಗಿಸಲಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಟಿ20 ವಿಶ್ವಕಪ್‌ನಿಂದ ಉಪನಾಯಕ ಗಿಲ್‌ಗೆ ಗೇಟ್‌ಪಾಸ್‌, ಕಿಶನ್ ಆಯ್ಕೆ!
ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!