ನೋಯ್ಡಾ: ಪ್ರೊ ಕಬಡ್ಡಿ 11ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ 7ನೇ ಸೋಲು ಅನುಭವಿಸಿದೆ. ಮಂಗಳವಾರ ನಡೆದ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧದ ಪಂದ್ಯದಲ್ಲಿ ಬುಲ್ಸ್ 32-39 ಅಂಕಗಳ ಅಂತರದಲ್ಲಿ ಸೋಲುಂಡಿತು.
ಅಲ್ಲದೇ 1 ಟ್ಯಾಕಲ್ ಅಂಕ ಸಹ ಗಳಿಸಿ ತಂಡವನ್ನು ಹುರಿದುಂಬಿಸಿದರು. ದ್ವಿತೀಯಾರ್ಧದಲ್ಲಿ 2 ಬಾರಿ ಆಲೌಟ್ ಆಗಿದ್ದು ಬುಲ್ಸ್‌ಗೆ ಮುಳುವಾಯಿತು. 9 ಪಂದ್ಯಗಳಲ್ಲಿ ಬುಲ್ಸ್ ಕೇವಲ 2 ಜಯ ಸಾಧಿಸಿದ್ದು ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲೇ ಉಳಿದಿದೆ.
ಇನ್ನು ಸೋಮವಾರ ಮತ್ತೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಹಾಗೂ ಪುಣೇರಿ ಪಲ್ಟನ್ ತಂಡಗಳು 38-38 ಅಂಕಗಳಲ್ಲಿ ಟೈಗೆ ತೃಪ್ತಿ ಪಟ್ಟವು.