ಐಪಿಎಲ್‌ ಸರ್ವಕಾಲಿಕ ಶ್ರೇಷ್ಠ ತಂಡಕ್ಕೆ ಧೋನಿ ನಾಯಕ

KannadaprabhaNewsNetwork |  
Published : Feb 19, 2024, 01:31 AM IST
ಐಪಿಎಲ್‌ ಸರ್ವಕಾಲಿಕ ಸರ್ವಕಾಲಿಕ ಶ್ರೇಷ್ಠ ತಂಡಕ್ಕೆ ಧೋನಿ ನಾಯಕ | Kannada Prabha

ಸಾರಾಂಶ

17ನೇ ಆವೃತ್ತಿಯ ಐಪಿಎಲ್‌ ಮುಂದಿನ ತಿಂಗಳು ಆರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಈ ಹಿಂದಿನ 16 ಆವೃತ್ತಿಗಳನ್ನು ನೆನಪಿಸಿಕೊಳ್ಳುವ ಸಲುವಾಗಿ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯು ಸಾರ್ವಕಾಲಿಕ ಶ್ರೇಷ್ಠ ತಂಡವೊಂದನ್ನು ಪ್ರಕಟಿಸಿದೆ.

ನವದೆಹಲಿ: 17ನೇ ಆವೃತ್ತಿಯ ಐಪಿಎಲ್‌ ಮುಂದಿನ ತಿಂಗಳು ಆರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಈ ಹಿಂದಿನ 16 ಆವೃತ್ತಿಗಳನ್ನು ನೆನಪಿಸಿಕೊಳ್ಳುವ ಸಲುವಾಗಿ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯು ಸಾರ್ವಕಾಲಿಕ ಶ್ರೇಷ್ಠ ತಂಡವೊಂದನ್ನು ಪ್ರಕಟಿಸಿದೆ. ಈ ತಂಡಕ್ಕೆ 5 ಬಾರಿ ಪ್ರಶಸ್ತಿ ಗೆದ್ದಿರುವ ಚೆನ್ನೈ ಸೂಪರ್‌ ಕಿಂಗ್ಸ್‌ನ ಎಂ.ಎಸ್‌.ಧೋನಿ ನಾಯಕರಾಗಿ ಆಯ್ಕೆಯಾಗಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ಆಯ್ಕೆ ಮಾಡಲು ಮಾಜಿ ಕ್ರಿಕೆಟಿಗರಾದ ಪಾಕಿಸ್ತಾನದ ವಾಸೀಂ ಅಕ್ರಂ, ದಕ್ಷಿಣ ಆಫ್ರಿಕಾದ ಡೇಲ್‌ ಸ್ಟೇಯ್ನ್‌, ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್‌ ಮತ್ತು ಟಾಮ್‌ ಮೂಡಿ ನೇತೃತ್ವದಲ್ಲಿ 70 ಮಂದಿ ಕ್ರೀಡಾ ಪತ್ರಕರ್ತರನ್ನು ಒಳಗೊಂಡಂತೆ ಸಮಿತಿಯೊಂದನ್ನು ರಚಿಸಿತ್ತು. ಆನ್‌ಲೈನ್‌ನಲ್ಲಿ ವೋಟಿಂಗ್‌ ನಡೆಯಿತು.ತಂಡ: ಧೋನಿ (ನಾಯಕ), ಗೇಲ್‌, ವಾರ್ನರ್‌, ರೈನಾ, ವಿಲಿಯರ್ಸ್‌, ಸೂರ್ಯ, ಹಾರ್ದಿಕ್‌, ಜಡೇಜಾ, ಪೊಲ್ಲಾರ್ಡ್‌, ರಶೀದ್‌ ಖಾನ್‌, ನರೈನ್‌, ಚಹಲ್‌, ಮಾಲಿಂಗ, ಬೂಮ್ರಾ. ಶ್ರೇಷ್ಠ ಕೋಚ್‌: ಫ್ಲೆಮಿಂಗ್‌.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಚಿನ್ನಸ್ವಾಮಿಯಲ್ಲಿ ಕೊಹ್ಲಿ-ಪಡಿಕ್ಕಲ್‌ ಗ್ರೇಟ್‌ ಚೇಸ್‌! ಆರ್‌ಸಿಬಿಗೆ 5 ವಿಕೆಟ್‌ ಗೆಲುವು
ತವರಿನಲ್ಲಿ ಆರ್‌ಸಿಬಿಗಿಂದು ಕೊನೆ ಲೀಗ್‌ ಪಂದ್ಯ