ಟೀಂ ಇಂಡಿಯಾ ಕೋಚ್‌ ಹುದ್ದೆಗೆ ನೋ ಎಂದ ಪಾಂಟಿಂಗ್‌, ಫ್ಲವರ್‌

KannadaprabhaNewsNetwork |  
Published : May 24, 2024, 12:47 AM ISTUpdated : May 24, 2024, 04:19 AM IST
ರಿಕಿ ಪಾಂಟಿಂಗ್‌ | Kannada Prabha

ಸಾರಾಂಶ

ಭಾರತ ತಂಡದ ಕೋಚ್‌ ಆಯ್ಕೆ ವಿಚಾರದಲ್ಲಿ ಮುಂದುವರಿದ ಕುತೂಹಲ. ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27ಕ್ಕೆ ಡೆಡ್‌ಲೈನ್‌ ವಿಧಿಸಿರುವ ಬಿಸಿಸಿಐ

ನವದೆಹಲಿ: ಟೀಂ ಇಂಡಿಯಾದ ನೂತನ ಕೋಚ್‌ ಆಯ್ಕೆ ವಿಚಾರದಲ್ಲಿ ಕುತೂಹಲ ಮುಂದುವರಿದಿದೆ. ಕೋಚ್‌ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ರಿಕಿ ಪಾಂಟಿಂಗ್‌ ಹಾಗೂ ಜಿಂಜಾಬ್ವೆಯ ಆ್ಯಂಡಿ ಫ್ಲವರ್‌ ಆಫರ್‌ ತಿರಸ್ಕರಿಸಿದ್ದು, ಸೂಕ್ತ ಕೋಚ್‌ಗಾಗಿ ಬಿಸಿಸಿಐ ಹುಡುಕಾಟ ಮುಂದುವರಿಸಿದೆ.

ಹಾಲಿ ಕೋಚ್‌ ರಾಹುಲ್‌ ದ್ರಾವಿಡ್‌ ಅವಧಿ ಈ ಬಾರಿ ಐಸಿಸಿ ಟಿ20 ವಿಶ್ವಕಪ್‌ಗೆ ಕೊನೆಗೊಳ್ಳಲಿದೆ. ಹೀಗಾಗಿ ಬಿಸಿಸಿಐ ಇತ್ತೀಚೆಗೆ ನೂತನ ಕೋಚ್‌ಗಾಗಿ ಅರ್ಜಿ ಆಹ್ವಾನಿಸಿತ್ತು.

 ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27 ಕೊನೆ ದಿನವಾಗಿದೆ. ಈ ನಡುವೆ ಕೋಚ್‌ ಹುದ್ದೆಗೆ ಸದ್ಯ ಡೆಲ್ಲಿ ಕ್ಯಾಪಿಟಲ್ಸ್‌ ಕೋಚ್‌ ಆಗಿರುವ ಪಾಂಟಿಂಗ್‌, ಆರ್‌ಸಿಬಿ ಕೋಚ್‌ ಆಗಿರುವ ಫ್ಲವರ್‌, ಆಸ್ಟ್ರೇಲಿಯಾದ ಜಸ್ಟಿನ್‌ ಲ್ಯಾಂಗರ್‌, ಸ್ಟೀಫನ್‌ ಫ್ಲೆಮಿಂಗ್, ಭಾರತದ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಹೆಸರು ಕೇಳಿಬಂದಿದ್ದವು.

 ಸದ್ಯ ಪಾಂಟಿಂಗ್‌ ಇದನ್ನು ತಿರಸ್ಕರಿಸಿದ್ದಾರೆ. ‘ಭಾರತ ತಂಡದ ಕೋಚ್‌ ಹುದ್ದೆ ಅಲಂಕರಿಸುವಂತೆ ಆಫರ್‌ ಬಂದಿದ್ದು ನಿಜ. ಆದರೆ ಕೋಚ್‌ ಹುದ್ದೆಗೆ ಆಸಕ್ತಿ ತೋರಿಲ್ಲ. ಐಪಿಎಲ್‌ ವೇಳೆ ನೇರವಾಗಿ ನನ್ನನ್ನು ಸಂಪರ್ಕಿಸಲಾಗಿತ್ತು.

 ರಾಷ್ಟ್ರೀಯ ತಂಡಕ್ಕೆ ಕೋಚ್‌ ಆಗುವುದು ನನಗೆ ಇಷ್ಟವಿದೆ. ಆದರೆ ಭಾರತ ತಂಡಕ್ಕೆ ಕೋಚ್‌ ಆದರೆ 10-11 ತಿಂಗಳು ತಂಡದ ಜೊತೆಗಿರಬೇಕಾಗುತ್ತದೆ. ಇದು ನನ್ನ ಜೀವನಕ್ರಮಕ್ಕೆ ಸೂಕ್ತವಲ್ಲ. ಅಲ್ಲದೆ ಐಪಿಎಲ್‌ ಕೋಚ್‌ ಸ್ಥಾನವನ್ನೂ ತ್ಯಜಿಸಬೇಕಾಗುತ್ತದೆ. ಹೀಗಾಗಿ ಆಸಕ್ತಿ ತೋರಿಲ್ಲ’ ಎಂದಿದ್ದಾರೆ. 

ಅರ್ಜಿ ಸಲ್ಲಿಸಲ್ಲ: ಫ್ಲವರ್‌

ಜಿಂಬಾಬ್ವೆ ಮಾಜಿ ನಾಯಕ ಆ್ಯಂಡ್ರಿ ಫ್ಲವರ್‌ ಹೆಸರು ಕೂಡಾ ಭಾರತ ತಂಡದ ಕೋಚ್‌ ಹುದ್ದೆಗೆ ಕೇಳಿಬರುತ್ತಿದ್ದರೂ, ಅದನ್ನು ಸ್ವತಃ ಫ್ಲವರ್‌ ನಿರಾಕರಿಸಿದ್ದಾರೆ. ‘ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸುವುದಿಲ್ಲ. ಫ್ರಾಂಚೈಸಿ ಲೀಗ್‌ನಲ್ಲೇ ಕೋಚ್‌ ಆಗಿರುವುದು ನನಗೆ ಇಷ್ಟ’ ಎಂದಿದ್ದಾರೆ. ಫ್ಲವರ್‌ ಇಂಗ್ಲೆಂಡ್‌ ಟೆಸ್ಟ್‌ ತಂಡಕ್ಕೆ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದಾರೆ.

PREV

Recommended Stories

ರಜತ್‌, ಯಶ್‌ ಶತಕ: ದುಲೀಪ್‌ ಟ್ರೋಫಿ ಫೈನಲ್‌ನಲ್ಲಿ ಕೇಂದ್ರ ವಲಯಕ್ಕೆ ಭರ್ಜರಿ ಮುನ್ನಡೆ
ನಾಳೆಯಿಂದ ಟೋಕಿಯೋದಲ್ಲಿ ವಿಶ್ವ ಅಥ್ಲೆಟಿಕ್ಸ್‌ ಶುರು : ಭಾರತದಿಂದ ನೀರಜ್‌ ಒಬ್ಬರೇ ಪದಕ ಭರವಸೆ