ಬೆಂಗಳೂರು : ಮುಶೀರ್ ಖಾನ್ ಭರ್ಜರಿ ಬ್ಯಾಟಿಂಗ್ ಹಾಗೂ ನವ್‌ದೀಪ್ ಸೈನಿ ತೋರಿದ ಅಪ್ರತಿಮ ಹೋರಾಟದಿಂದಾಗಿ ದುಲೀಪ್ ಟ್ರೋಫಿ ಕ್ರಿಕೆಟ್‌ನಲ್ಲಿ ಭಾರತ ‘ಎ’ ವಿರುದ್ಧ ಭಾರತ ‘ಬಿ’ ತಂಡ 321 ರನ್ ಕಲೆಹಾಕಿದೆ. ಇದಕ್ಕೆ ಉತ್ತರವಾಗಿ ಇನ್ನಿಂಗ್ಸ್ ಆರಂಭಿಸಿರುವ ಭಾರತ ‘ಬಿ’ 2ನೇ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 134 ರನ್ ಗಳಿಸಿದ್ದು, ಇನ್ನೂ 181 ರನ್ ಹಿನ್ನಡೆಯಲ್ಲಿದೆ.
ಮೊದಲ ದಿನವೇ 94ಕ್ಕೆ 7 ವಿಕೆಟ್ ಕಳೆದುಕೊಂಡಿದ್ದರೂ 8ನೇ ವಿಕೆಟ್‌ಗೆ ಜೊತೆಯಾದ ಮುಶೀರ್ ಹಾಗೂ ನವ್‌ದೀಪ್ ಭರ್ಜರಿ ಜೊತೆಯಾಟದ ಮೂಲಕ ತಂಡವನ್ನು ಕಾಪಾಡಿದರು. ಮೊದಲ ದಿನ 7 ವಿಕೆಟ್‌ಗೆ 202 ರನ್ ಕಲೆಹಾಕಿದ್ದ ತಂಡ ಶುಕ್ರವಾರವೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಮುಶೀರ್ 373 ಎಸೆತಗಳಲ್ಲಿ 181 ರನ್ ಸಿಡಿಸಿ ಔಟಾದರೆ, 9ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದಿದ್ದ ಸೈನಿ 144 ಎಸೆತಗಳಲ್ಲಿ 56 ರನ್ ಸಿಡಿಸಿದರು.
ಈ ಜೋಡಿ 205 ರನ್ ಜೊತೆಯಾಟವಾಡಿತು. ಆಕಾಶ್‌ದೀಪ್ 4 ವಿಕೆಟ್ ಕಬಳಿಸಿದರು.ಬಳಿಕ ಭಾರತ ‘ಎ’ ತಂಡ ಸಾಧಾರಣ ಆರಂಭ ಪಡೆಯಿತು. ಆರಂಭಿಕರಾದ ಮಯಾಂಕ್ ಅಗರ್‌ವಾಲ್ ಹಾಗೂ ನಾಯಕ ಶುಭ್‌ಮನ್ ಗಿಲ್ ಮೊದಲ ವಿಕೆಟ್‌ಗೆ 57 ರನ್ ಜೊತೆಯಾಟವಾಡಿದರು. 36 ರನ್ ಗಳಿಸಿದ್ದ ಮಯಾಂಕ್ ಹಾಗೂ 25 ರನ್ ಬಾರಿಸಿದ್ದ ಗಿಲ್‌ರನ್ನು ಸೈನಿ ಪೆವಿಲಿಯನ್‌ಗೆ ಅಟ್ಟಿದರು.
ರಿಯಾನ್ ಪರಾಗ್(27) ಹಾಗೂ ಕೆ.ಎಲ್.ರಾಹುಲ್(23) 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.ಸ್ಕೋರ್: ಭಾರತ ‘ಬಿ’ ಮೊದಲ ಇನ್ನಿಂಗ್ಸ್ 321/10 (ಮುಶೀರ್ 181, ಸೈನಿ 56, ಆಕಾಶ್‌ದೀಪ್ 4/60), ಭಾರತ ‘ಎ’ 134/2(2ನೇ ದಿನದಂತ್ಯಕ್ಕೆ) (ಮಯಾಂಕ್ 36, ರಿಯಾನ್ 27*, ಸೈನಿ 2/36)