ದುಲೀಪ್‌ ಟ್ರೋಫಿ: ರಿಯಾನ್‌ ಪರಾಗ್‌, ರಾವತ್‌ ಅರ್ಧಶತಕ, ಭಾರತ ‘ಎ’ 333 ರನ್‌ ಲೀಡ್‌

KannadaprabhaNewsNetwork |  
Published : Sep 22, 2024, 02:01 AM ISTUpdated : Sep 22, 2024, 04:18 AM IST
ರಿಯಾನ್‌ ಪರಾಗ್‌ | Kannada Prabha

ಸಾರಾಂಶ

ದುಲೀಪ್ ಟ್ರೋಫಿಯಲ್ಲಿ ಮಯಾಂಕ್ ಅಗರ್‌ವಾಲ್ ನೇತೃತ್ವದ ಭಾರತ 'ಎ' ತಂಡವು ಭಾರತ 'ಸಿ' ವಿರುದ್ಧ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. 333 ರನ್‌ಗಳ ಬೃಹತ್ ಮುನ್ನಡೆಯೊಂದಿಗೆ, 'ಎ' ತಂಡವು ಪಂದ್ಯವನ್ನು ಗೆಲ್ಲುವ ಸ್ಥಿತಿಯಲ್ಲಿದೆ.

ಅನಂತಪುರ: ಈ ಬಾರಿ ದುಲೀಪ್‌ ಟ್ರೋಫಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಮಯಾಂಕ್‌ ಅಗರ್‌ವಾಲ್‌ ನಾಯಕತ್ವದ ಭಾರತ ‘ಎ’ ತಂಡ ಭಾರತ ‘ಸಿ’ ವಿರುದ್ಧ ದೊಡ್ಡ ಮುನ್ನಡೆ ಸಾಧಿಸಿದೆ. ಈಗಾಗಲೇ ಇನ್ನಿಂಗ್ಸ್‌ ಲೀಡ್‌ ಪಡೆದಿದ್ದ ತಂಡ ಸದ್ಯ 333 ರನ್‌ಗಳ ದೊಡ್ಡ ಮುನ್ನಡೆ ಪಡೆದಿದ್ದು, ಪಂದ್ಯದ ಕೊನೆ ದಿನವಾದ ಭಾನುವಾರ ಉತ್ತಮ ಪ್ರದರ್ಶನ ನೀಡಿ ಗೆಲ್ಲುವ ಕಾತರದಲ್ಲಿದೆ.

ಭಾರತ 2 ತಂಡದ 297 ರನ್‌ಗೆ ಉತ್ತರವಾಗಿ 2ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 216 ರನ್‌ ಗಳಿಸಿದ್ದ ಸಿ ತಂಡ ಶನಿವಾರ ಕೇವಲ 18 ರನ್‌ ಸೇರಿಸಿತು. ಪುಲ್ಕಿತ್‌ ನಾರಂಗ್‌ 41 ರನ್‌ ಗಳಿಸಿ ಔಟಾದರು. ವಿಜಯ್‌ಕುಮಾರ್‌ ವೈಶಾಖ್‌ 18 ರನ್‌ ಕೊಡುಗೆ ನೀಡಿದರು. ತಂಡದ 234 ರನ್‌ಗೆ ಗಂಟುಮೂಟೆ ಕಟ್ಟಿತು. ಆವೇಶ್‌ ಖಾನ್‌ ಹಾಗೂ ಆಖಿಬ್‌ ಖಾನ್‌ ತಲಾ 3 ವಿಕೆಟ್‌ ಕಿತ್ತರು.63 ರನ್‌ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿರುವ ‘ಎ’ ತಂಡ 3ನೇ ದಿನದಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು 270 ರನ್‌ ಗಳಿಸಿದೆ. ಮಯಾಂಕ್‌(34) ಮತ್ತೊಮ್ಮೆ ದೊಡ್ಡ ಇನ್ನಿಂಗ್ಸ್‌ ಕಟ್ಟಲು ವಿಫಲರಾದರು.

 94ಕ್ಕೆ 3 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ರಿಯಾನ್‌ ಪರಾಗ್‌ ಹಾಗೂ ಶಾಶ್ವತ್‌ ರಾವತ್‌ ಆಸರೆಯಾದರು. ಈ ಜೋಡಿ 4ನೇ ವಿಕೆಟ್‌ಗೆ 105 ರನ್‌ ಜೊತೆಯಾಟವಾಡಿತು. 73 ರನ್‌ ಗಳಿಸಿದ್ದ ರಿಯಾನ್‌ ಪರಾಗ್‌ಗೆ ಗೌರವ್‌ ಯಾದವ್‌ ಪೆವಿಲಿಯನ್‌ ಹಾದಿ ತೋರಿದರೆ, 53 ರನ್‌ ಗಳಿಸಿದ್ದ ಶಾಶ್ವತ್‌ ರಾವತ್‌ರನ್ನು ಮಾನವ್‌ ಸುತಾರ್‌ ಬೌಲ್ಡ್‌ ಮಾಡಿದರು. ಕುಮಾರ್‌ ಕುಶಾಗ್ರ(40) 4ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಅನ್ಶುಲ್‌, ಗೌರವ್‌, ಮಾನವ್‌ ತಲಾ 2 ವಿಕೆಟ್‌ ಪಡೆದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ವಿಶ್ವಕಪ್‌ ಪಂದ್ಯ ಬಹಿಷ್ಕಾರಕ್ಕಿದೆ ದೀರ್ಘ ಇತಿಹಾಸ
ರೋಲರ್‌ ಸ್ಕೇಟಿಂಗ್‌: ಮಂಗಳೂರು ಮೂಲದ ಅಹ್ಯಾನ್ ಅನ್ವರ್‌ಗೆ ಚಿನ್ನ