ಕನ್ನಡಪ್ರಭ ವಾರ್ತೆ ಬೆಂಗಳೂರು
ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮಾಜಿ ಆಟಗಾರ ಹಾಗೂ ಕೋಚ್ ಓಲೆ ಗುನ್ನಾರ್ ಸೋಲ್ಸೆಕ್‌ಜಾರ್ ಅವರು ತಮ್ಮ ಬಹು ನಿರೀಕ್ಷಿತ ಚೊಚ್ಚಲ ಭಾರತ ಪ್ರವಾಸ ಆರಂಭಿಸಿದ್ದು, ಶುಕ್ರವಾರ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಸಂವಾದ ನಡೆಸಿದರು.
ಏಸ್ ಆಫ್ ಪಬ್ಸ್ ಸಂಸ್ಥಾಪಕ ತಿಲಕ್ ಗೌರಂಗ್ ಶಾ ಆಯೋಜಿಸಿದ್ದ ಮೂರು ದಿನಗಳ ಭಾರತ ಭೇಟಿ ಶುಕ್ರವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಪ್ರಾರಂಭವಾಯಿತು.
ಅಂಕಿ ಅಂಶಗಳ ಪ್ರಕಾರ ಮ್ಯಾಂಚೆಸ್ಟರ್ ಯುನೈಟೆಡ್‌ನ ಜಾಗತಿಕ ಅಭಿಮಾನಿ ಬಳಗದ ಶೇ.38ರಷ್ಟು ಭಾರತಲ್ಲಿರುವುದರಿಂದ, ಗುನ್ನಾರ್ ಅವರ ಭೇಟಿಯು ತಂಡಕ್ಕೆ ಹಾಗೂ ಭಾರತದ ಅಭಿಮಾನಿಗಳ ಪಾಲಿಗೆ ಅತ್ಯಂತ ಮಹತ್ವದ್ದು ಎನಿಸಿದೆ.
ಈ ಬಗ್ಗೆ ತಮ್ಮ ಉತ್ಸಾಹವನ್ನು ಹಂಚಿಕೊಂಡ ಗುನ್ನಾರ್, ‘ಭಾರತಕ್ಕೆ ಆಗಮಿಸಿ ಮ್ಯಾಂಚೆಸ್ಟರ್ ಯುನೈಟೆಡ್ ಅಭಿಮಾನಿಗಳನ್ನು ಭೇಟಿಯಾಗಿದ್ದರಿಂದ ನಾನು ನಿಜವಾಗಿಯೂ ರೋಮಾಂಚನಗೊಂಡಿದ್ದೇನೆ.
ಈ ಪ್ರವಾಸವು ಅಭಿಮಾನಿಗಳಿಗೆ ಮಾತ್ರವಲ್ಲ, ನನಗೂ ಸ್ಮರಣೀಯ ಕ್ಷಣ, ಏಕೆಂದರೆ ನಾನು ಭಾರತಕ್ಕೆ ಇದೇ ಮೊದಲ ಬಾರಿ ಆಗಮಿಸುತ್ತಿದ್ದೇನೆ. ಬೆಂಗಳೂರಿನಲ್ಲಿ ನನಗೆ ದೊರೆತ ಆತ್ಮೀಯ ಸ್ವಾಗತಕ್ಕಾಗಿ ಧನ್ಯವಾದಗಳು. ದೆಹಲಿ ಮತ್ತು ಮುಂಬೈನಲ್ಲಿ ಅಭಿಮಾನಿಗಳನ್ನು ಭೇಟಿಯಾಗಲು ಕುತೂಹಲದಿಂದ ಕಾಯುತ್ತಿದ್ದೇನೆ’ ಎಂದಿದ್ದಾರೆ.
ತನ್ನ ಗಮನಾರ್ಹ ವೃತ್ತಿ ಜೀವನ ಮತ್ತು ಮೈದಾನದಲ್ಲಿನ ಅಪ್ರತಿಮ ಕ್ಷ ಣಗಳಿಗೆ ಹೆಸರುವಾಸಿಯಾದ ಗುನ್ನಾರ್, ಮ್ಯಾಂಚೆಸ್ಟರ್ ಯುನೈಟೆಡ್‌ನ ತವರು ಮೈದಾನ ಓಲ್ಡ್ ಟ್ರಾಫರ್ಡ್‌ನಲ್ಲಿನ ತಮ್ಮ ನೆನಪು, ಅನುಭವಗಳನ್ನು ಹಂಚಿಕೊಂಡರು.
ಎರಡೂ ಬದಿಗಳಲ್ಲಿ ಫುಟ್ಬಾಲ್‌ನ ಮ್ಯಾಜಿಕ್ ಅನ್ನು ಅನುಭವಿಸುವ ಸೌಭಾಗ್ಯ ನನಗೆ ಸಿಕ್ಕಿದೆ. ಆದ್ದರಿಂದ ಮರೆಯಲಾಗ ್ಳಕ್ಷಣಗಳನ್ನು ಅಭಿಮಾನಿಗಳೊಂದಿಗೆ ನೆನಪಿಸಿಕೊಳ್ಳಲು ಸಾಧ್ಯವಾಗುವುದು ಯಾವಾಗಲೂ ಸಂತೋಷದ ಸಂಗತಿ.
ಮ್ಯಾಂಚೆಸ್ಟರ್ ಯುನೈಟೆಡ್ ಬಗ್ಗೆ ಭಾರತೀಯರ ಭಕ್ತಿಯ ಬಗ್ಗೆ ಮಾತ್ರ ನಾನು ಕೇಳಿದ್ದರೂ, ಇಂದು ಅದನ್ನು ನೇರವಾಗಿ ಅನುಭವಿಸುವ ಅವಕಾಶವನ್ನು ಪಡೆದಿದ್ದೇನೆ’ ಎಂದು ಹೇಳಿದರು.
ಏಸ್ ಆಫ್ ಪಬ್ಸ್ ಸಂಸ್ಥಾಪಕ ತಿಲಕ್ ಗೌರಂಗ್ ಶಾ ಮಾತನಾಡಿ, ಗುನ್ನಾರ್ ಅವರ ಈ ಪ್ರವಾಸದ ಮೂಲಕ ಅವರ ಬೆಂಬಲಿಗರ ಜೀವಮಾನದ ಕನಸುಗಳನ್ನು ಈಡೇರಿಸುವ ಗುರಿಯನ್ನು ನಾವು ಹೊಂದಿದ್ದೇವೆ ಮತ್ತು ಮುಂಬರುವ ವರ್ಷಗಳಲ್ಲಿ ಅವರು ಪ್ರೀತಿಸುವ ಅಮೂಲ್ಯ ಫುಟ್ಬಾಲ್ ವಸ್ತುಗಳನ್ನು ಅವರಿಗೆ ಒದಗಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಫೆ.10ರಂದು ಮುಂಬೈ, ಫೆ.11ರಂದು ನವದೆಹಲಿಗೆ ಗುನ್ನಾರ್ ಭೇಟಿ ನೀಡಲಿದ್ದಾರೆ.