ಗೂಗಲ್‌ ಕ್ಲೌಡ್‌ ಜೊತೆ ಫಾರ್ಮುಲಾ-ಇ ತಂತ್ರಜ್ಞಾನ ಪಾಲುದಾರಿಕೆ

KannadaprabhaNewsNetwork |  
Published : Mar 16, 2024, 01:48 AM IST
ಫಾರ್ಮುಲಾ ಇ | Kannada Prabha

ಸಾರಾಂಶ

ಇದು ಬಹು ವರ್ಷಗಳ ಒಪ್ಪಂದವಾಗಿದ್ದು, ರೇಸ್‌ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಸುಧಾರಿತ ಡೇಟಾವನ್ನು ಬಳಸಿ ಕ್ರೀಡಾ ಅಭಿವೃದ್ಧಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಲು ಈ ಒಪ್ಪಂದ ಸಹಕಾರಿಯಾಗಲಿದೆ.

ಲಂಡನ್: ಸಾವೊ ಪೌಲೊದಲ್ಲಿ ಶನಿವಾರದಿಂದ ನಡೆಯಲಿರುವ ಚಾಂಪಿಯನ್‌ಶಿಪ್‌ಗೂ ಮುನ್ನ ಗೂಗಲ್‌ ಕ್ಲೌಡ್ ಜೊತೆ ಫಾರ್ಮುಲಾ-ಇ ತಂತ್ರಜ್ಞಾನ ಪಾಲುದಾರಿಕೆ ಮಾಡಿಕೊಂಡಿದೆ. ಇದು ಎಬಿಬಿ ಎಫ್‌ಐಎ ಫಾರ್ಮುಲಾ-ಇ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆನ್ ಫೀಲ್ಡ್‌ ಮತ್ತು ರೇಸ್‌ನ ಹೊರಗೂ ಮಹತ್ವದ ಬದಲಾವಣೆಗೆ ನಾಂದಿ ಹಾಡಲಿದೆ ಎಂದು ಫಾರ್ಮುಲಾ-ಇ ವಿಶ್ವಾಸ ವ್ಯಕ್ತಪಡಿಸಿದೆ.ಇದು ಬಹು ವರ್ಷಗಳ ಒಪ್ಪಂದವಾಗಿದ್ದು, ರೇಸ್‌ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಸುಧಾರಿತ ಡೇಟಾವನ್ನು ಬಳಸಿ ಕ್ರೀಡಾ ಅಭಿವೃದ್ಧಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಲು ಈ ಒಪ್ಪಂದ ಸಹಕಾರಿಯಾಗಲಿದೆ. ಈ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ ಕೂಡಾ ಸಾಧ್ಯವಾಗಲಿದೆ. ಅಲ್ಲದೆ ಅಭಿಮಾನಿಗಳ ನಡವಳಿಕೆ, ಆದ್ಯತೆಗಳನ್ನು ಮನಗಂಡು ರೇಸ್‌ನಲ್ಲಿ ಮಹತ್ತರ ಬದಲಾವಣೆ ತರಲು ಗೂಗಲ್‌ ಕ್ಲೌಡ್‌ ನೆರವಾಗಲಿದೆ. ಜೊತೆಗೆ ರೇಸನ್ನು ವಿಶ್ವದೆಲ್ಲೆಡೆಗೆ ತಲುಪಿಸಲು ಕೂಡಾ ಗೂಗಲ್‌ ಕ್ಲೌಡ್‌ ಪ್ರಮುಖ ಪಾತ್ರ ವಹಿಸುವ ಭರವಸೆಯನ್ನು ಫಾರ್ಮುಲಾ-ಇ ವ್ಯಕ್ತಪಡಿಸಿದೆ. ಇದರ ಜೊತೆಗೆ ವಿಡಿಯೋ ಗೇಮ್‌ ಆಧಾರಿತ ಆಶ್‌ಫಾಲ್ಟ್‌ 8 ಜೊತೆ ಫಾರ್ಮುಲಾ-ಇ ಶುಕ್ರವಾರ ತನ್ನ ಏಕೀಕರಣವನ್ನು ಘೋಷಿಸಿದೆ. GEN2 ರೇಸ್ ಕಾರ್‌ಅನ್ನು ಕೂಡಾ ಬಿಡುಗಡೆ ಮಾಡಲಾಗಿದೆ. ರೇಸ್‌ ಬ್ರೆಜಿಲ್‌ನ ಜನೈರೊ ಟ್ರ್ಯಾಕ್‌ನಲ್ಲಿ ಮಾ.12ರಿಂದ ಆರಂಭಗೊಂಡಿದ್ದು, ಮಾ.25ರ ವರೆಗೆ ನಡೆಯಲಿದೆ.ಎಬಿಬಿ ಎಫ್‌ಐಎ ಫಾರ್ಮುಲಾ ಇ ವರ್ಲ್ಡ್ ಚಾಂಪಿಯನ್‌ಶಿಪ್ ಹಲವು ರೇಸ್‌ಗಳನ್ನು ಒಳಗೊಂಡಿದ್ದು, ಪ್ರತಿ ರೇಸ್‌ಅನ್ನು ಇ-ಪ್ರಿಕ್ಸ್ ಎಂದು ಕರೆಯಲಾಗುತ್ತದೆ. ಇವುಗಳು ಜಗತ್ತಿನಾದ್ಯಂತ ಅನೇಕ ದೇಶಗಳು ಮತ್ತು ಕೆಲ ಖಂಡಗಳಲ್ಲಿ ನಡೆಯುತ್ತವೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಐಪಿಎಲ್‌ : ಗ್ರೀನ್‌ಗೆ ₹25.2, ಪತಿರನಗೆ ₹18 ಕೋಟಿ ಜಾಕ್‌ಪಾಟ್‌
ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ