ಬೆಂಗಳೂರು: ಏಷ್ಯಾ ಫೆಸಿಪಿಕ್ ಹಾಗೂ ಮಧ್ಯ ಪ್ರಾಚ್ಯ ದೇಶಗಳಲ್ಲಿ ಪ್ರಮುಖ ಪ್ರತಿಭಾ ವೇದಿಕೆಯಾಗಿರುವ ಫೌಂಡ್‌ಇಟ್ ಸಂಸ್ಥೆಯ ಜೊತೆಗೆ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್(ಬಿಡಬ್ಲ್ಯುಎಫ್) ತನ್ನ ಪಾಲುದಾರಿಕೆಯನ್ನು ಘೋಷಿಸಿದೆ. ಇನ್ನು ಬಿಡಬ್ಲ್ಯುಎಫ್‌ನ ಅಧಿಕೃತ ಟ್ಯಾಲೆಂಟ್ ಪಾಲುದಾರರಾಗಿ ಫೌಂಡ್‌ಇಟ್ ಕಾರ್ಯಾಚರಿಸಲಿದೆ.ಫೌಂಡ್‌ಇಟ್ ಸಂಸ್ಥಾಪಕ ಶೇಖರ್ ಗರಿಸಾ, ಫೌಂಡ್‌ಇಟ್‌ನ ಮುಖ್ಯ ಮಾರ್ಕೆಂಟಿಂಗ್ ಅಧಿಕಾರಿ ಸೌರಭ್ ಶ್ರೀವಾತ್ಸವ, ಬಿಡಬ್ಲ್ಯುಎಫ್‌ನ ಪ್ರಧಾನ ಕಾರ್ಯದರ್ಶಿ ಥಾಮಸ್ ಲಂಡ್, ಬಿಡಬ್ಲ್ಯುಎಫ್ ಕಮರ್ಷಿಯಲ್ ಮತ್ತು ಕಮ್ಯುನಿಕೇಶನ್ ನಿರ್ದೇಶಕ ಒವೆನ್ ಲೀಡ್ ಅವರು ವರ್ಚುವಲ್ ಸಮಾರಂಭದಲ್ಲಿ ಪಾಲುದಾರಿಕೆಯನ್ನು ಘೋಷಿಸಿದರು. ಬ್ಯಾಡ್ಮಿಂಟನ್‌ನ ಜಾಗತಿಕ ಆಡಳಿತ ಮಂಡಳಿಯಾಗಿರುವ ಬಿಡಬ್ಲ್ಯುಎಫ್, ಥಾಮಸ್ ಕಪ್, ಉಬೆರ್ ಕಪ್, ಸುಧೀರ್‌ಮನ್ ಕಪ್, ವರ್ಲ್ಡ್ ಟೂರ್ ಟೂರ್ನಿಗಳನ್ನು ಆಯೋಜಿಸುತ್ತಿದ್ದು, ವಿಶ್ವದಾದ್ಯಂತ 700 ಮಿಲಿಯನ್ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.ಬಿಡಬ್ಲ್ಯುಎಫ್ ಜೊತೆಗಿನ ಈ ಸಹಯೋಗದ ಮೂಲಕ, ವಿಶ್ವದಾದ್ಯಂತ ಬ್ಯಾಡ್ಮಿಂಟನ್ ಬಗ್ಗೆ ಇರುವ ಉತ್ಸಾಹ ಹಾಗೂ ಅಭಿಮಾನವನ್ನು ಹೆಚ್ಚಿಸುವ ಗುರಿಯನ್ನು ಫೌಂಡ್ಇಟ್ ಹೊಂದಿದೆ. ಈ ಪಾಲುದಾರಿಕೆಯು ಫೌಂಡಟ್‌ನ ಬ್ರ್ಯಾಂಡ್ ಮೌಲ್ಯ ಕೂಡಾ ಹೆಚ್ಚಿಸಲಿದೆ. ಅಲ್ಲದೆ ವಿವಿಧ ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರ ಜೊತೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ. ಬಹು ನಿರೀಕ್ಷಿತ ಥಾಮಸ್ ಮತ್ತು ಉಬರ್ ಕಪ್, ಆಲ್ ಇಂಗ್ಲೆಂಡ್ ಓಪನ್, ಮಲೇಷ್ಯಾ ಓಪನ್, ಸಿಂಗಾಪುರ್ ಓಪನ್ ಮತ್ತು ಇಂಡಿಯಾ ಓಪನ್ ಸೇರಿದಂತೆ 20 ಮಹತ್ವದ ಚಾಂಪಿಯನ್ಶಿಪ್ಗಳಿಗೆ ಫೌಂಡ್ಇಟ್ ಅಧಿಕೃತ ಟ್ಯಾಲೆಂಟ್ ಪಾಲುದಾರರಾಗಿರುತ್ತದೆ.ಅಲ್ಲದೆ ಭಾರತ, ಸಿಂಗಾಪುರ, ಮಲೇಷ್ಯಾ, ಫಿಲಿಫೀನ್ಸ್ ಮತ್ತು ಆಗ್ನೇಯ ಏಷ್ಯಾದಾದ್ಯಂತ ಲಕ್ಷಾಂತರ ಪ್ರತಿಭಾವಂತ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ಈ ಪಾಲುದಾರಿಕೆ ನೆರವಾಗಲಿದೆ. ಜೊತೆಗೆ ಭಾರತ ಮತ್ತು ಆಗ್ನೇಯ ಏಷ್ಯಾ ಭಾಗದಲ್ಲಿ ಬ್ಯಾಡ್ಮಿಂಟನ್ ಆಟಗಾರರು ಮತ್ತು ತಳಮಟ್ಟದ ಅಕಾಡೆಮಿಗಳನ್ನು ಬೆಂಬಲಿಸುವ ಗುರಿಯನ್ನು ಫೌಂಡ್‌ಇಟ್ ಇಟ್ಟುಕೊಂಡಿದೆ.