ಗಾಬಾದಲ್ಲೂ ಭಾರತಕ್ಕೆ ಬೌನ್ಸರ್ ಟೆಸ್ಟ್‌: 3ನೇ ಟೆಸ್ಟ್‌ನ ಪಿಚ್‌ನಲ್ಲಿ ಹೆಚ್ಚಿನ ವೇಗ, ಬೌನ್ಸರ್‌!

KannadaprabhaNewsNetwork |  
Published : Dec 12, 2024, 12:33 AM ISTUpdated : Dec 12, 2024, 04:20 AM IST
ಗಾಬಾ | Kannada Prabha

ಸಾರಾಂಶ

ಕಳೆದ ಪ್ರವಾಸದಲ್ಲಿ ಐತಿಹಾಸಿಕ ಜಯ ಸಾಧಿಸಿದ್ದ ಭಾರತಕ್ಕೆ ಈ ಬಾರಿ ಕಠಿಣ ಸವಾಲು. 3ನೇ ಟೆಸ್ಟ್‌ಗಾಗಿ ಭಾರತೀಯ ಆಟಗಾರರು ಬುಧವಾರ ಬ್ರಿಸ್ಬೇನ್‌ಗೆ ಬಂದಿಳಿದರು. ಡಿ.14ರಿಂದ ಟೆಸ್ಟ್‌ ಆರಂಭಗೊಳ್ಳಲಿದೆ.

ಬ್ರಿಸ್ಬೇನ್‌: ಅಡಿಲೇಡ್‌ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವೇಗಿಗಳ ಮುಂದೆ ತತ್ತರಿಸಿ, ಹೀನಾಯ ಸೋಲಿನ ಮುಖಭಂಗಕ್ಕೊಳಗಾಗಿದ್ದ ಭಾರತ ತಂಡಕ್ಕೆ ಬ್ರಿಸ್ಬೇನ್‌ ಟೆಸ್ಟ್‌ನಲ್ಲೂ ಕಠಿಣ ಸವಾಲು ಎದುರಾಗುವುದು ಖಚಿತ. ಉಭಯ ತಂಡಗಳ ನಡುವಿನ 3ನೇ ಟೆಸ್ಟ್‌ಗೆ ಆತಿಥ್ಯ ವಹಿಸಲಿರುವ ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದ ಪಿಚ್‌ ಹೆಚ್ಚಿನ ವೇಗ ಹಾಗೂ ಬೌನ್ಸರ್‌ ಹೊಂದಿರಲಿದೆ ಎಂದು ಪಿಚ್‌ ಕ್ಯುರೇಟರ್‌ ಮಾಹಿತಿ ನೀಡಿದ್ದಾರೆ.

ಕಳೆದ ಬಾರಿ ಅಂದರೆ 2021ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಗಾಬಾ ಟೆಸ್ಟ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿತ್ತು. ಆಸೀಸ್‌ನ ಭದ್ರಕೋಟೆ ಎನಿಸಿಕೊಂಡಿದ್ದ ಗಾಬಾದಲ್ಲಿ ಭಾರತ ಅಭೂತಪೂರ್ವ ಜಯ ದಾಖಲಿಸಿತ್ತು. ಈ ಗೆಲುವನ್ನು ಭಾರತದ ಯಾವುದೇ ಕ್ರಿಕೆಟ್‌ ಅಭಿಮಾನಿಯೂ ಮರೆಯಲಿಕ್ಕಿಲ್ಲ. ಆದರೆ ಭಾರತಕ್ಕೆ ಈ ಬಾರಿಯೂ ಗಾಬಾದಲ್ಲಿ ಕಠಿಣ ಸವಾಲು ಎದುರಾಗಲಿದೆ.

‘ಗಾಬಾ ಪಿಚ್‌ ವಿಭಿನ್ನವಾಗಿದೆ. ವರ್ಷದ ವಿವಿಧ ಸಂದರ್ಭಗಳಲ್ಲಿ ವಿವಿಧ ರೀತಿ ವರ್ತಿಸುತ್ತದೆ. ಸಾಮಾನ್ಯವಾಗಿ ವೇಗ ಹಾಗೂ ಬೌನ್ಸ್‌ ಇರುವ ಪಿಚ್‌ಗಳನ್ನೇ ನಾವು ಪ್ರತಿ ವರ್ಷವೂ ಸಿದ್ಧಪಡಿಸುತ್ತೇವೆ. ಈ ಬಾರಿಯೂ ಸಾಂಪ್ರದಾಯಿಕವಾಗಿ ವೇಗಿಗಳಿಗೆ ನೆರವಾಗುವ ಪಿಚ್‌ ನಿರೀಕ್ಷಿಸುತ್ತಿದ್ದೇವೆ’ ಎಂದು ಕ್ಯುರೇಟರ್‌ ಡೇವಿಡ್‌ ಸುಂಡುರ್ಸ್ಕಿ ಹೇಳಿದ್ದಾರೆ. 

ಈ ಕ್ರೀಡಾಂಗಣದಲ್ಲಿ ಕಳೆದ ತಿಂಗಳು ನಡೆಸಿದ್ದ ದೇಸಿ ಕ್ರಿಕೆಟ್‌ ಪಂದ್ಯದ ಮೊದಲ ದಿನ 15 ವಿಕೆಟ್‌ ಉರುಳಿದ್ದವು. ಭಾರತ-ಆಸ್ಟ್ರೇಲಿಯಾ ಟೆಸ್ಟ್‌ಗೂ ಇದೇ ರೀತಿಯ ಪಿಚ್‌ ಸಿದ್ಧಪಡಿಸುವ ಬಗ್ಗೆ ಕ್ಯುರೇಟ್‌ ಸುಳಿವು ನೀಡಿದ್ದಾರೆ.ಉಭಯ ತಂಡಗಳ ನಡುವಿನ 5 ಪಂದ್ಯಗಳ ಪೈಕಿ 2 ಪಂದ್ಯಗಳು ಮುಕ್ತಾಯಗೊಂಡಿವೆ. ಸಿಡ್ನಿ ಟೆಸ್ಟ್‌ನಲ್ಲಿ ಭಾರತ ಗೆದ್ದಿದ್ದರೆ, ಅಡಿಲೇಡ್‌ನ ಹಗಲು-ರಾತ್ರಿ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯಭೇರಿ ಬಾರಿಸಿತ್ತು. ಸದ್ಯ ಸರಣಿ 1-1 ಸಮಬಲಗೊಂಡಿವೆ.

ಬ್ರಿಸ್ಬೇನ್‌ಗೆ ಬಂದ ಟೀಂ ಇಂಡಿಯಾ

3ನೇ ಟೆಸ್ಟ್‌ಗಾಗಿ ಭಾರತೀಯ ಆಟಗಾರರು ಬುಧವಾರ ಬ್ರಿಸ್ಬೇನ್‌ಗೆ ಬಂದಿಳಿದರು. ಡಿ.8ರಂದೇ ಅಡಿಲೇಡ್‌ ಟೆಸ್ಟ್‌ ಮುಕ್ತಾಯಗೊಂಡಿತ್ತು. ಬಳಿಕ ಆಸ್ಟ್ರೇಲಿಯಾ ಆಟಗಾರರು ಬ್ರಿಸ್ಬೇನ್‌ ಆಗಮಿಸಿದ್ದರೂ, ಭಾರತೀಯ ಆಟಗಾರರು ಅಡಿಲೇಡ್‌ನಲ್ಲೇ ಉಳಿದುಕೊಂಡಿದ್ದರು. ಬಹುತೇಕ ಆಟಗಾರರು ಅಲ್ಲೇ ನೆಟ್ಸ್‌ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಬುಧವಾರ ಬ್ರಿಸ್ಬೇನ್‌ಗೆ ಆಗಮಿಸಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ರೋಲರ್‌ ಸ್ಕೇಟಿಂಗ್‌: ಮಂಗಳೂರು ಮೂಲದ ಅಹ್ಯಾನ್ ಅನ್ವರ್‌ಗೆ ಚಿನ್ನ
ಕ್ರಿಕೆಟಿಂದಲೇ ಪಾಕ್‌ ಹೊರಗಟ್ಟುವ ಟೈಂ ಬಂತಾ?