3ನೇ ಏಕದಿನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ವನಿತೆಯರಿಗೆ 0-3 ವೈಟ್‌ವಾಶ್‌ ಮುಖಭಂಗ!

KannadaprabhaNewsNetwork |  
Published : Dec 12, 2024, 12:30 AM ISTUpdated : Dec 12, 2024, 04:21 AM IST
ಸ್ಮೃತಿ ಮಂಧನಾ | Kannada Prabha

ಸಾರಾಂಶ

3ನೇ ಏಕದಿನದಲ್ಲಿ ಭಾರತಕ್ಕೆ 83 ರನ್ ಸೋಲು. ಭಾರತ ಪರ ಅರುಂಧತಿ ರೆಡ್ಡಿ 4 ವಿಕೆಟ್‌ ಕಿತ್ತರು. ಸ್ಮೃತಿ ಮಂಧನಾ 109 ಎಸೆತಗಳಲ್ಲಿ 105 ರನ್‌ ಸಿಡಿಸಿದರೂ, ಇತರರು ಕೈಕೊಟ್ಟರು.

ಪರ್ತ್‌: ಆಸ್ಟ್ರೇಲಿಯಾ ವಿರುದ್ಧ ಭಾರತ ಮಹಿಳಾ ತಂಡ 3 ಪಂದ್ಯಗಳ ಏಕದಿನ ಸರಣಿಯಲ್ಲಿ 0-3 ವೈಟ್‌ವಾಶ್‌ ಮುಖಭಂಗಕ್ಕೆ ಒಳಗಾಗಿದೆ. 

ಬುಧವಾರ 3ನೇ ಪಂದ್ಯದಲ್ಲಿ ಭಾರತ 83 ರನ್‌ಗಳಿಂದ ಪರಾಭವಗೊಂಡಿತು.ಮೊದಲು ಬ್ಯಾಟ್‌ ಮಾಡಿದ ಆಸೀಸ್‌ 6 ವಿಕೆಟ್‌ಗೆ 298 ರನ್‌ ಕಲೆಹಾಕಿತು. ಅನಾಬೆಲ್‌ ಸುಥರ್‌ಲೆಂಡ್‌ 95 ಎಸೆತಗಳಲ್ಲಿ 110 ರನ್‌ ಸಿಡಿಸಿದರೆ, ಆ್ಯಶ್ಲೆ ಗಾರ್ಡ್ನರ್‌ 50, ನಾಯಕಿ ತಹಿಲಾ ಮೆಗ್ರಾಥ್‌ ಔಟಾಗದೆ 56 ರನ್‌ ಸಿಡಿಸಿದರು. 

ಭಾರತ ಪರ ಅರುಂಧತಿ ರೆಡ್ಡಿ 4 ವಿಕೆಟ್‌ ಕಿತ್ತರು.ದೊಡ್ಡ ಗುರಿ ಪಡೆದ ಭಾರತ ಮತ್ತೆ ಬ್ಯಾಟಿಂಗ್‌ ವೈಫಲ್ಯಕ್ಕೆ ಒಳಗಾಗಿ, 45.1 ಓವರ್‌ಗಳಲ್ಲಿ 215 ರನ್‌ಗೆ ಆಲೌಟಾಯಿತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ 109 ಎಸೆತಗಳಲ್ಲಿ 105 ರನ್‌ ಸಿಡಿಸಿದರೂ, ಇತರರು ಕೈಕೊಟ್ಟರು. ಹರ್ಲಿನ್‌ ಡಿಯೋಲ್‌ 39 ರನ್‌ ಗಳಿಸಿದ್ದು ಬಿಟ್ಟರೆ ಇತರರಿಂದ ಸೂಕ್ತ ಬೆಂಬಲ ಸಿಗಲಿಲ್ಲ. 

ಗಾರ್ಡ್ನರ್‌ 5 ವಿಕೆಟ್‌ ಪಡೆದರು.ಸ್ಕೋರ್‌: ಆಸ್ಟ್ರೇಲಿಯಾ 50 ಓವರಲ್ಲಿ 298/6 (ಸುಥರ್‌ಲೆಂಡ್‌ 110, ತಹಿಲಾ 56*, ಗಾರ್ಡ್ನರ್‌ 50, ಅರುಂಧತಿ 4-26), ಭಾರತ 45.1 ಓವರಲ್ಲಿ 215/10 (ಸ್ಮೃತಿ 105, ಹರ್ಲೀನ್‌ 39, ಗಾರ್ಡ್ನರ್‌ 5-30) ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಅನಾಬೆಲ್‌ ಸುಥರ್‌ಲೆಂಡ್‌

ವರ್ಷದಲ್ಲಿ 4 ಶತಕ: ಸ್ಮೃತಿ ದಾಖಲೆ

ಸ್ಮೃತಿ ಈ ವರ್ಷ ಏಕದಿನದಲ್ಲಿ 4 ಶತಕ ಬಾರಿಸಿದ್ದಾರೆ. ಕ್ಯಾಲೆಂಡರ್‌ ವರ್ಷದಲ್ಲಿ 4 ಶತಕ ಬಾರಿಸಿದ ಮೊದಲ ಮಹಿಳಾ ಕ್ರಿಕೆಟರ್‌. ಒಟ್ಟಾರೆ ಏಕದಿನದಲ್ಲಿ ಗರಿಷ್ಠ ಶತಕ ಸಿಡಿಸಿದವರ ಪಟ್ಟಿಯಲ್ಲಿ ಸ್ಮೃತಿ ಜಂಟಿ 3ನೇ ಸ್ಥಾನಕ್ಕೇರಿದ್ದಾರೆ. ಅವರು 5 ಶತಕ ಬಾರಿಸಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ರೋಲರ್‌ ಸ್ಕೇಟಿಂಗ್‌: ಮಂಗಳೂರು ಮೂಲದ ಅಹ್ಯಾನ್ ಅನ್ವರ್‌ಗೆ ಚಿನ್ನ
ಕ್ರಿಕೆಟಿಂದಲೇ ಪಾಕ್‌ ಹೊರಗಟ್ಟುವ ಟೈಂ ಬಂತಾ?