4 ಓವರಲ್ಲಿ 73 ರನ್‌ ಚಚ್ಚಿಸಿಕೊಂಡ ಮೋಹಿತ್‌ ಶರ್ಮಾ: ಐಪಿಎಲ್‌ ಇತಿಹಾಸದಲ್ಲೇ ಅತಿಹೆಚ್ಚು!

KannadaprabhaNewsNetwork |  
Published : Apr 25, 2024, 01:00 AM ISTUpdated : Apr 25, 2024, 04:18 AM IST
4 ಓವರಲ್ಲಿ 73 ರನ್ ಚಚ್ಚಿಸಿಕೊಂಡು ಐಪಿಎಲ್‌ ಇತಿಹಾಸದಲ್ಲೇ ಅತಿ ದುಬಾರಿ ಸ್ಪೆಲ್‌ ಎಸೆದ ಬೌಲರ್‌ ಎನ್ನುವ ಅಪಖ್ಯಾತಿ ಗಳಿಸಿದ ಮೋಹಿತ್‌ ಶರ್ಮಾ.  | Kannada Prabha

ಸಾರಾಂಶ

ಐಪಿಎಲ್‌ ಇತಿಹಾಸದಲ್ಲೇ 4 ಓವರ್‌ಗಳ ಸ್ಪೆಲ್‌ನಲ್ಲಿ ಅತಿಹೆಚ್ಚು ರನ್‌ ಬಿಟ್ಟುಕೊಟ್ಟ ಅಪಖ್ಯಾತಿಗೆ ಗುರಿಯಾದ ಮೋಹಿತ್‌ ಶರ್ಮಾ. ಡೆಲ್ಲಿ ವಿರುದ್ಧ 4 ಓವರಲ್ಲಿ 73 ರನ್‌ ಚಚ್ಚಿಸಿಕೊಂಡ ಗುಜರಾತ್‌ ಬೌಲರ್‌. ಬಸಿಲ್‌ ಥಂಪಿ ಹೆಸರಿನಲ್ಲಿದ್ದ 70 ರನ್‌ ದಾಖಲೆ ಮುರಿದ ಮೋಹಿತ್‌.

ನವದೆಹಲಿ: ಐಪಿಎಲ್‌ನಲ್ಲಿ ಬೌಲರ್‌ವೊಬ್ಬ 4 ಓವರ್‌ ಸ್ಪೆಲ್‌ನಲ್ಲಿ ಅತಿಹೆಚ್ಚು ರನ್‌ ಬಿಟ್ಟುಕೊಟ್ಟ ಅಪಖ್ಯಾತಿಗೆ ಗುಜರಾತ್‌ ಟೈಟಾನ್ಸ್‌ ತಂಡದ ಮೋಹಿತ್‌ ಶರ್ಮಾ ಗುರಿಯಾಗಿದ್ದಾರೆ.

ಬುಧವಾರ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಮೋಹಿತ್‌ 4 ಓವರಲ್ಲಿ ಬರೋಬ್ಬರಿ 73 ರನ್‌ ಬಿಟ್ಟುಕೊಟ್ಟರು.

ಇನ್ನಿಂಗ್ಸ್‌ನ ಕೊನೆಯ ಓವರಲ್ಲಿ 31 ರನ್‌ ನೀಡಿದ ಮೋಹಿತ್‌, ಒಟ್ಟಾರೆ 4 ಬೌಂಡರಿ ಹಾಗೂ 7 ಸಿಕ್ಸರ್‌ಗಳನ್ನು ಚಚ್ಚಿಸಿಕೊಂಡರು. ಇದಕ್ಕೂ ಮುನ್ನ ಐಪಿಎಲ್‌ನಲ್ಲಿ ಅತಿಹೆಚ್ಚು ರನ್‌ ಬಿಟ್ಟುಕೊಟ್ಟ ಅನಗತ್ಯ ದಾಖಲೆ ಸನ್‌ರೈಸರ್ಸ್‌ನ ಬಸಿಲ್‌ ಥಂಪಿ ಹೆಸರಲ್ಲಿತ್ತು.

ಐಪಿಎಲ್‌: ದುಬಾರಿ 4 ಓವರ್‌ ಸ್ಪೆಲ್‌

ಬೌಲರ್‌ತಂಡವಿರುದ್ಧನೀಡಿದ ರನ್‌ ವರ್ಷ

-ಮೋಹಿತ್‌ ಶರ್ಮಾಗುಜರಾತ್‌ಡೆಲ್ಲಿ732024

ಬಸಿಲ್‌ ಥಂಪಿಸನ್‌ರೈಸರ್ಸ್‌ಆರ್‌ಸಿಬಿ702018

ಯಶ್‌ ದಯಾಳ್‌ಗುಜರಾತ್‌ಕೆಕೆಆರ್‌692023

ರೀಸ್‌ ಟಾಪ್ಲಿಆರ್‌ಸಿಬಿಸನ್‌ರೈಸರ್ಸ್‌682024

ಇಶಾಂತ್‌ ಶರ್ಮಾಸನ್‌ರೈಸರ್ಸ್‌ಚೆನ್ನೈ662013

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!