ಅಹಮದಾಬಾದ್: 17ನೇ ಆವೃತ್ತಿ ಐಪಿಎಲ್‌ನಲ್ಲಿ ಅಸ್ಥಿರ ಆಟಕ್ಕೆ ಹೆಸರುವಾಸಿಯಾಗಿರುವ 2 ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಬುಧವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಇತ್ತಂಡಗಳೂ ಗೆಲುವಿನ ಓಟ ಮುಂದುವರಿಸುವ ಕಾತರದಲ್ಲಿವೆ.ಶುಭ್‌ಮನ್ ಗಿಲ್ ನಾಯಕತ್ವದೊಂದಿಗೆ ಕಣಕ್ಕಿಳಿದಿರುವ ಗುಜರಾತ್ 6ರಲ್ಲಿ ತಲಾ 3 ಗೆಲುವು, ಸೋಲು ಕಂಡಿದೆ. ಅತ್ತ ಡೆಲ್ಲಿ 6 ಪಂದ್ಯಗಳಲ್ಲಿ ಕೇವಲ 2 ಗೆಲುವು ಸಾಧಿಸಿವೆ. ಶುಭ್‌ಮನ್ ಮಿಂಚುತ್ತಿದ್ದರೂ ಇತರರು ಕೈಕೊಡುತ್ತಿರುವುದು ತಂಡದ ತಲೆನೋವಿಗೆ ಕಾರಣವಾಗಿದೆ. ಶಮಿ ಅನುಪಸ್ಥಿತಿಯಲ್ಲಿ ಬೌಲಿಂಗ್ ವಿಭಾಗ ಸೊರಗಿದಂತೆ ಕಾಣುತ್ತಿದ್ದು, ಉಮೇಶ್ ಯಾದವ್, ಮೋಹಿತ್ ಶರ್ಮಾ ಸ್ಥಿರ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ರಶೀದ್ ಖಾನ್‌ರ ಪ್ರದರ್ಶನ ನಿರ್ಣಾಯಕ ಎನಿಸಿದ್ದು, ಯುವ ಬ್ಯಾಟರ್ ಸಾಯಿ ಸುದರ್ಶನ್ ದೊಡ್ಡ ಇನ್ನಿಂಗ್ಸ್ ಕಟ್ಟಬೇಕಾಗಿದೆ.ಮತ್ತೊಂದೆಡೆ ರಿಷಭ್ ಪಂತ್ ಸಾರಥ್ಯದ ಡೆಲ್ಲಿ ಫಿಟ್ನೆಸ್, ಗಾಯಾಳುಗಳ ಸಮಸ್ಯೆಯಿಂದ ಬಳಲುತ್ತಿದೆ. ರಿಷಭ್ ಲಯಕ್ಕೆ ಮರಳಿದ್ದು ಪ್ಲಸ್ ಪಾಯಿಂಟ್ ಆಗಿದ್ದರೂ ಇತರರ ಪ್ರದರ್ಶನವೂ ತಂಡದ ಗೆಲುವಿಗೆ ಅಗತ್ಯವಿದೆ. ಡೇವಿಡ್ ವಾರ್ನರ್ ಕಳಪೆ ಪ್ರದರ್ಶನ ನೀಡುತ್ತಿರುವುದು ತಂಡದ ಹಿನ್ನಡೆಗೆ ಕಾರಣ. ಸ್ಪಿನ್ನರ್ ಕುಲ್ದೀಪ್ ಯಾದವ್ ಮತ್ತೊಮ್ಮೆ ಎದುರಾಳಿಗಳನ್ನು ಕಟ್ಟಿಹಾಕಲು ಎದುರು ನೋಡುತ್ತಿದ್ದಾರೆ.
ಸಂಭವನೀಯ ಆಟಗಾರರ ಪಟ್ಟಿ
ಪಂದ್ಯ: ಸಂಜೆ 7.30ಕ್ಕೆ