ಆರ್‌ಸಿಬಿಗೆ ಮತ್ತೆ ಶಾಕ್‌: ಐಪಿಎಲ್‌ನಿಂದಲೇ ಬ್ರೇಕ್‌ ಪಡೆದ ಮ್ಯಾಕ್ಸ್‌ವೆಲ್‌!

KannadaprabhaNewsNetwork |  
Published : Apr 17, 2024, 01:17 AM IST
ಮ್ಯಾಕ್ಸ್‌ವೆಲ್‌ | Kannada Prabha

ಸಾರಾಂಶ

ಮಾನಸಿಕ, ದೈಹಿಕ ಆರೋಗ್ಯಕ್ಕಾಗಿ ಅನಿರ್ದಿಷ್ಟಾವಧಿ ವಿರಾಮ ಪಡೆದ ತಾರಾ ಆಲ್ರೌಂಡರ್‌. ಇದೇ ಕಾರಣಕ್ಕೆ 2019ರಲ್ಲೂ ಕೆಲ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಗ್ಲೆನ್‌ ಮ್ಯಾಕ್ಸ್‌ವೆಲ್‌.

ಬೆಂಗಳೂರು: 17ನೇ ಆವೃತ್ತಿ ಐಪಿಎಲ್‌ನಲ್ಲಿ ಸತತ ಸೋಲುಗಳಿಂದ ಕುಗ್ಗಿ ಹೋಗಿರುವ ಆರ್‌ಸಿಬಿಗೆ ಮತ್ತೊಂದು ಆಘಾತ ಎದುರಾಗಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯದ ಕಾರಣ ನೀಡಿ ತಂಡದ ತಾರಾ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಈ ಬಾರಿ ಐಪಿಎಲ್‌ನಿಂದ ಅನಿರ್ದಿಷ್ಟಾವಧಿಗೆ ವಿರಾಮ ಪಡೆದುಕೊಂಡಿದ್ದಾರೆ.ಸೋಮವಾರ ನಡೆದ ಸನ್‌ರೈಸರ್ಸ್‌ ವಿರುದ್ಧದ ಪಂದ್ಯಕ್ಕೆ ಮ್ಯಾಕ್ಸ್‌ವೆಲ್‌ ಅಲಭ್ಯರಾಗಿದ್ದರು. ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಮ್ಯಾಕ್ಸ್‌ವೆಲ್‌, ತಾವಾಗಿಯೇ ತಂಡದಿಂದ ಹೊರಗುಳಿಯಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ‘ನಾಯಕ ಡು ಪ್ಲೆಸಿ, ಕೋಚ್‌ ಜೊತೆ ಮಾತನಾಡಿ ಸ್ವತಃ ನಾನೇ ಪಂದ್ಯಕ್ಕೆ ಗೈರಾಗಿದ್ದೇನೆ. ಇದು ಇತರರಿಗೆ ಅವಕಾಶ ಮಾಡಿಕೊಡಲು ಸೂಕ್ತ ಸಮಯ. ಮಾನಸಿಕ, ದೈಹಿಕ ಆರೋಗ್ಯದ ಕಾರಣಕ್ಕೆ ವಿರಾಮ ಪಡೆಯುತ್ತಿದ್ದೇನೆ. ಶೀಘ್ರದಲ್ಲೇ ಮರಳಿ ತಂಡವನ್ನು ಕೂಡಿಕೊಳ್ಳಲಿದ್ದೇನೆ’ ಎಂದು ತಿಳಿಸಿದ್ದಾರೆ. ಮ್ಯಾಕ್ಸ್‌ವೆಲ್‌ ಮಾನಸಿಕ ಆರೋಗ್ಯ ಕಾರಣದಿಂದಾಗಿ 2019ರಲ್ಲೂ ಕೆಲ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು.ಮ್ಯಾಕ್ಸ್‌ವೆಲ್‌ಗೆ ಈ ಬಾರಿಯ ಐಪಿಎಲ್‌ನಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ನಿರಂತರವಾಗಿ ಅವರು ವಿಫಲರಾಗುತ್ತಿದ್ದಾರೆ. ಇದರ ಜೊತೆಗೆ ಮ್ಯಾಕ್ಸ್​ವೆಲ್​ ಅವರು ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದ ವೇಳೆ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಇದರಿಂದಾಗಿ ಅವರು ಕಳೆದ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಈ ಬಾರಿ ಐಪಿಎಲ್‌ನಲ್ಲಿ 6 ಪಂದ್ಯಗಳನ್ನಾಡಿರುವ 35ರ ಮ್ಯಾಕ್ಸ್‌ವೆಲ್ 5.33ರ ಸರಾಸರಿಯಲ್ಲಿ ಕೇವಲ 32 ರನ್‌ ಕಲೆಹಾಕಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!