ನವದೆಹಲಿ: ವಿರಾಟ್ ಕೊಹ್ಲಿ ತಮಗೆ 2ನೇ ಮಗು ಆಗಿದೆ ಎಂದು ಘೋಷಿಸಿದ ಬೆನ್ನಲ್ಲೇ ಸಾಮಾಜಿಕ ತಾಣಗಳಲ್ಲಿ ಅವರ ಮಗ ಅಕಾಯ್ ಹೆಸರಲ್ಲಿ ನೂರಾರು ನಕಲಿ ಖಾತೆಗಳು ಹುಟ್ಟಿಕೊಂಡಿವೆ.
ಕಿಡಿಗೇಡಿಗಳು ಇನ್‌ಸ್ಟಾಗ್ರಾಂನಲ್ಲಿ ಅಕಾಯ್ ಹೆಸರಿನಲ್ಲಿ ಖಾತೆ ತೆರೆದು ಸಂದೇಶಗಳನ್ನು ಪೋಸ್ಟ್ ಮಾಡಲು ಶುರು ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರಿ ಟೀಕೆ ಸಹ ವ್ಯಕ್ತವಾಗಿದೆ. ಸಾಮಾಜಿಕ ತಾಣಗಳ ದುರ್ಬಳಕೆ ಮಾಡದಂತೆ ಅನೇಕರು ಮನವಿ ಸಹ ಮಾಡಿದ್ದಾರೆ.
ಸಂತೋಷ್ ಟ್ರೋಫಿ: ಇಂದುಕರ್ನಾಟಕ vs ದೆಹಲಿ
ಯೂಪಿಯಾ(ಅರುಣಾಚಲಪ್ರದೇಶ): 77ನೇ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ಫೈನಲ್ ಸುತ್ತಿನ ಮೊದಲ ಪಂದ್ಯದಲ್ಲಿ ಗುರುವಾರ ಹಾಲಿ ಚಾಂಪಿಯನ್ ಕರ್ನಾಟಕ ತಂಡ ದೆಹಲಿ ಸವಾಲನ್ನು ಎದುರಿಸಲಿದೆ.
ಕಳೆದ ಬಾರಿ ಚಾಂಪಿಯನ್ ಆದ ಕಾರಣ ಈ ಸಲ ನೇರವಾಗಿ ಫೈನಲ್ ಹಂತಕ್ಕೆ ಅರ್ಹತೆ ಪಡೆದಿದ್ದ ರಾಜ್ಯ ತಂಡವು ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.
ಇನ್ನು ಬುಧವಾರ ನಡೆದ ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಸರ್ವೀಸಸ್ 1-0 ಗೆಲುವು ಸಾಧಿಸಿದರೆ, ಅಸ್ಸಾಂ ವಿರುದ್ಧ ಕೇರಳ 3-1ರಲ್ಲಿ ಜಯಿಸಿತು.