ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌: ಟೀಂ ಇಂಡಿಯಾದ ನಂ.1 ಸ್ಥಾನ ಭದ್ರ

KannadaprabhaNewsNetwork |  
Published : Mar 10, 2024, 01:34 AM IST
ಟೀಂ ಇಂಡಿಯಾ | Kannada Prabha

ಸಾರಾಂಶ

ಭಾರತ ಕೆಲ ದಿನಗಳ ಹಿಂದೆ 2ನೇ ಸ್ಥಾನದಲ್ಲಿತ್ತು. ಆದರೆ ಇಂಗ್ಲೆಂಡ್‌ ವಿರುದ್ಧದ ಜಯದೊಂದಿಗೆ ಈಗ ಅಗ್ರಸ್ಥಾನ ಉಳಿಸಿಕೊಂಡಿದೆ. ಇನ್ನು 3ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ವಿರುದ್ಧ 2ನೇ ಪಂದ್ಯದಲ್ಲಿ ಗೆದ್ದರೆ 2ನೇ ಸ್ಥಾನಕ್ಕೇರಲಿದೆ. ಆಗ ಕಿವೀಸ್‌ 3ನೇ ಸ್ಥಾನಕ್ಕೆ ಕುಸಿಯಲಿದೆ.

ಧರ್ಮಶಾಲಾ: ಇಂಗ್ಲೆಂಡ್‌ ವಿರುದ್ಧದ 5ನೇ ಹಾಗೂ ಕೊನೆ ಟೆಸ್ಟ್‌ ಪಂದ್ಯದ ಗೆಲುವಿನೊಂದಿಗೆ ಭಾರತ ತಂಡ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಕಳೆದೆರಡು ಆವೃತ್ತಿಗಳಲ್ಲಿ ಫೈನಲ್‌ನಲ್ಲಿ ಸೋತು ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಭಾರತ ಈ ಬಾರಿ ಮತ್ತೆ ಫೈನಲ್‌ ಸ್ಥಾನದ ಮೇಲೆ ಕಣ್ಣಿಟ್ಟಿದೆ.ಸದ್ಯ ರೋಹಿತ್‌ ಶರ್ಮಾ ನಾಯಕತ್ವದ ಭಾರತ 2023-25ರ ಚಾಂಪಿಯನ್‌ಶಿಪ್‌ನಲ್ಲಿ 9 ಪಂದ್ಯಗಳನ್ನಾಡಿದ್ದು, 9 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ ಶೇ.68.51 ಗೆಲುವಿನ ಪ್ರತಿಶತ ಹೊಂದಿದೆ. ತಂಡ 2 ಪಂದ್ಯಗಳಲ್ಲಿ ಸೋಲನುಭವಿಸಿದ್ದರೆ 1 ಪಂದ್ಯ ಡ್ರಾಗೊಂಡಿದೆ.ಇನ್ನು ಚೊಚ್ಚಲ ಆವೃತ್ತಿಯ ಚಾಂಪಿಯನ್‌ ನ್ಯೂಜಿಲೆಂಡ್‌ ಈ ಬಾರಿ 5 ಪಂದ್ಯಗಳಲ್ಲಿ 3 ಗೆಲುವಿನೊಂದಿಗೆ ಶೇ.60 ಗೆಲುವಿನ ಪ್ರತಿಶತದೊಂದಿಗೆ 2ನೇ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ 11 ಪಂದ್ಯಗಳನ್ನಾಡಿದ್ದು, ಈ ಪೈಕಿ 7 ಪಂದ್ಯಗಳ ಜಯದೊಂದಿಗೆ ಶೇ.59.09 ಗೆಲುವಿನ ಪ್ರತಿಶತದೊಂದಿಗೆ 3ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್‌ ವಿರುದ್ಧ 2ನೇ ಪಂದ್ಯದಲ್ಲಿ ಗೆದ್ದರೆ ಆಸೀಸ್‌ 2ನೇ ಸ್ಥಾನಕ್ಕೇರಲಿದೆ. ಆಗ ಕಿವೀಸ್‌ 3ನೇ ಸ್ಥಾನಕ್ಕೆ ಕುಸಿಯಲಿದೆ. ಟಿಮ್‌ ಸೌಥಿ ನಾಯಕತ್ವದ ಕಿವೀಸ್‌ ಇತ್ತೀಚೆಗಷ್ಟೇ ಅಗ್ರಸ್ಥಾನದಲ್ಲಿತ್ತು. ಆದರೆ ಭಾರತದ ಗೆಲುವು ಹಾಗೂ ಆಸೀಸ್‌ ವಿರುದ್ಧ ತನ್ನ ಸೋಲಿನಿಂದಾಗಿ ಅಂಕಪಟ್ಟಿಯಲ್ಲಿ ಕೆಳಕ್ಕೆ ಜಾರಿದೆ. ಅತ್ತ ಇಂಗ್ಲೆಂಡ್‌ ಕೇವಲ ಶೇ.17.5 ಜಯದ ಪ್ರತಿಶತದೊಂದಿಗೆ 8ನೇ ಸ್ಥಾನದಲ್ಲೇ ಮುಂದುವರಿಸಿದೆ. 2023-25ರ ಟೂರ್ನಿಯಲ್ಲಿ ಇಂಗ್ಲೆಂಡ್‌ ಆಡಿರುವ 10 ಪಂದ್ಯದಲ್ಲಿ 6ರಲ್ಲಿ ಸೋತಿದೆ. ಇನ್ನು ಬಾಂಗ್ಲಾದೇಶ, ಪಾಕಿಸ್ತಾನ, ವೆಸ್ಟ್‌ಇಂಡೀಸ್‌, ದಕ್ಷಿಣ ಆಫ್ರಿಕಾ ಕ್ರಮವಾಗಿ 4, 5, 6 ಹಾಗೂ 7ನೇ ಸ್ಥಾನಗಳಲ್ಲಿವೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ವಿಶ್ವಕಪ್‌ ಪಂದ್ಯ ಬಹಿಷ್ಕಾರಕ್ಕಿದೆ ದೀರ್ಘ ಇತಿಹಾಸ
ರೋಲರ್‌ ಸ್ಕೇಟಿಂಗ್‌: ಮಂಗಳೂರು ಮೂಲದ ಅಹ್ಯಾನ್ ಅನ್ವರ್‌ಗೆ ಚಿನ್ನ