ಅಂಡರ್‌-19 ಟಿ20 ವಿಶ್ವಕಪ್‌: ಭಾರತಕ್ಕೆ ರಾಜ್ಯದ ನಿಕಿ ನಾಯಕಿ

KannadaprabhaNewsNetwork |  
Published : Dec 25, 2024, 12:47 AM IST
ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ನಿಕಿ ಪ್ರಸಾದ್‌, ಮಿಥಿಲಾ ವಿನೋದ್‌.  | Kannada Prabha

ಸಾರಾಂಶ

ಕಿರಿಯರ ಟಿ20 ವಿಶ್ವಕಪ್‌:ಭಾರತ ತಂಡಕ್ಕೆ ರಾಜ್ಯದನಿಕಿ ಪ್ರಸಾದ್‌ ನಾಯಕಿ

ನವದೆಹಲಿ: ಜ.18ರಿಂದ ಫೆ.2ರ ವರೆಗೂ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆಯಲಿರುವ ಅಂಡರ್‌-19 ಮಹಿಳಾ ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟಗೊಂಡಿದ್ದು, ಕರ್ನಾಟಕದ ನಿಕಿ ಪ್ರಸಾದ್‌ ನಾಯಕಿಯಾಗಿ ನೇಮಕಗೊಂಡಿದ್ದಾರೆ. ಇತ್ತೀಚೆಗಷ್ಟೇ ನಿಕಿ ಅವರ ನಾಯಕತ್ವದಲ್ಲಿ ಭಾರತ ತಂಡ ಅಂಡರ್‌-19 ಏಷ್ಯಾಕಪ್‌ ಟಿ20 ಟೂರ್ನಿಯನ್ನು ಗೆದ್ದಿತ್ತು.

ಆ ತಂಡದಲ್ಲಿದ್ದ ರಾಜ್ಯದ ಮತ್ತೊಬ್ಬ ಆಟಗಾರ್ತಿ ಮಿಥಿಲಾ ವಿನೋದ್‌ ಸಹ ವಿಶ್ವಕಪ್‌ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಭಾರತ ತಂಡ ‘ಎ’ ಗುಂಪಿನಲ್ಲಿ ಮಲೇಷ್ಯಾ, ವಿಂಡೀಸ್‌, ಶ್ರೀಲಂಕಾ ಜೊತೆ ಸ್ಥಾನ ಪಡೆದಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜ.19ರಂದು ವಿಂಡೀಸ್‌ ವಿರುದ್ಧ ಆಡಲಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಟ್ವೆಂಟಿ -20 ಕ್ರಿಕೆಟ್‌ನ ಬದಲಾಗುತ್ತಿರುವ ವ್ಯಾಕರಣ
ಪ್ಯಾರಾ ಏಷ್ಯಾಡ್‌: 30 ಚಿನ್ನ ಸೇರಿ 114 ಪದಕ, ಇತಿಹಾಸದಲ್ಲೇ ಭಾರತದ ಶ್ರೇಷ್ಠ ಪ್ರದರ್ಶನ