ಇಂಡಿಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್ - ಚಿರಾಗ್ ಶೆಟ್ಟಿ ಜೋಡಿ 2ನೇ ಸುತ್ತಿಗೆ ಲಗ್ಗೆ ಇಟ್ಟಿದೆ.ನವದೆಹಲಿ: ಇಂಡಿಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್ - ಚಿರಾಗ್ ಶೆಟ್ಟಿ ಜೋಡಿ 2ನೇ ಸುತ್ತಿಗೆ ಲಗ್ಗೆ ಇಟ್ಟಿದೆ. ವಿಶ್ವ ನಂ.2 ಭಾರತೀಯ ಜೋಡಿಯು ಚೈನೀಸ್ ತೈಪೆಯ ಫಾಂಗ್ ಚೆ ಲೀ-ಫಾಂಗ್ ಜೆನ್ ಲೀ ಜೋಡಿ ವಿರುದ್ಧ 21-15, 19-21, 21-16ರಿಂದ ಜಯ ಸಾಧಿಸಿತು. ಆದರೆ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್ ವಿಶ್ವ ನಂ.18, ಹಾಂಗ್‌ಕಾಂಗ್‌ನ ಲೀ ಚೆಕ್ ಯೂ ವಿರುದ್ಧ 22-24, 13-21ರಿಂದ ಸೋತು ಹೊರಬಿದ್ದಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ- ತನೀಶಾ ಕ್ರಾಸ್ಟೋ, ಅಶ್ವಿನಿ ಭಟ್- ಶಿಖಾ ಗೌತಮ್ ಹಾಗೂ ಪುರುಷರ ಡಬಲ್ಸ್‌ನಲ್ಲಿ ಕೃಷ್ಣ ಪ್ರಸಾದ ಗರಗ- ಸಾಯಿ ಪ್ರತೀಕ್ ಜೋಡಿಗಳು ಸೋತು ಟೂರ್ನಿಯಲ್ಲಿ ತಮ್ಮ ಅಭಿಯಾನ ಅಂತ್ಯಗೊಳಿಸಿವೆ. ನಾವು ನಡೆಸುವ ಕೂಟಕ್ಕಷ್ಟೇ
ಮಾನ್ಯತೆ: ಸ್ವತಂತ್ರ ಸಮಿತಿನವದೆಹಲಿ: ಭಾರತೀಯ ಒಲಿಂಪಿಕ್ ಸಮಿತಿಯು ಕುಸ್ತಿ ಫೆಡರೇಶನ್ ಮೇಲ್ವಿಚಾರಣೆಗೆ ನೇಮಿಸಿರುವ ಸ್ವತಂತ್ರ ಸಮಿತಿ ಆಯೋಜಿಸುವ ಕೂಟಗಳಿಗೆ ಮಾತ್ರ ಮಾನ್ಯತೆ ಇದೆ ಎಂದು ಸಮಿತಿಯ ಮುಖ್ಯಸ್ಥ ಭೂಪೇಂದ್ರ ಸಿಂಗ್ ಬಜ್ವಾ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟನೆ ನೀಡಿರುವ ಅವರು, ಸ್ವತಂತ್ರ ಸಮಿತಿ ಆಯೋಜಿಸುವ ಕೂಟದಲ್ಲಿ ಭಾಗಿಯಾಗುವ ಕ್ರೀಡಾಪಟುಗಳಿಗೆ ಮಾತ್ರ ಸರ್ಕಾರಿ ಸೌಲಭ್ಯಗಳು ಲಭ್ಯವಾಗಲಿವೆ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗಷ್ಟೇ ಕ್ರೀಡಾ ಸಚಿವಾಲಯಕ್ಕೆ ಸಡ್ಡು ಹೊಡೆದಿದ್ದ ಕುಸ್ತಿ ಸಂಸ್ಥೆ ಅಧ್ಯಕ್ಷ ಸಂಜಯ್ ಸಿಂಗ್, ನಮಗೆ ಕೂಟ ಆಯೋಜಿಸುವ ಸಾಂವಿಧಾನಿಕ ಹಕ್ಕು ಇದೆ. ಸ್ವತಂತ್ರ ಸಮಿತಿಗೆ ಇಲ್ಲ ಎಂದಿದ್ದರು.