ಇಂದೋರ್: ಸಾಂಘಿಕ ಪ್ರದರ್ಶನದೊಂದಿಗೆ ಆರಂಭಿಕ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಹೊಸಕಿ ಹಾಕಿದ್ದ ಟೀಂ ಇಂಡಿಯಾ, ಪ್ರವಾಸಿ ತಂಡದ ವಿರುದ್ಧ ಭಾನುವಾರ 2ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದೆ.
ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆಲ್ಲಲು ಭಾರತ ಯೋಜನೆ ರೂಪಿಸಿದ್ದರೆ, ಆಫ್ಘನ್ ಕಮ್‌ಬ್ಯಾಕ್ ಮೂಲಕ ಸರಣಿ ಸಮಬಲಗೊಳಿಸುವ ನಿರೀಕ್ಷೆಯಲ್ಲಿದೆ. ಪಂದ್ಯಕ್ಕೆ ಇಂದೋರ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
14 ತಿಂಗಳ ಬಳಿಕ ಅಂ.ರಾ. ಟಿ20 ಕ್ರಿಕೆಟ್‌ಗೆ ಮರಳಿದ್ದ ನಾಯಕ ರೋಹಿತ್ ಶರ್ಮಾ ಆರಂಭಿಕ ಪಂದ್ಯದಲ್ಲಿ ಶೂನ್ಯ ಸುತ್ತಿದ್ದರು. ಹೀಗಾಗಿ ವಿಶ್ವಕಪ್‌ಗೂ ಮುನ್ನ ತಮ್ಮ ಸಾಮರ್ಥ್ ಸಾಬೀತುಪಡಿಸಲು ಅವರಿಗೆ ಮತ್ತೊಂದು ಅವಕಾಶ ಸಿಗಲಿದ್ದು, ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದ್ದಾರೆ.
ಮೊದಲ ಪಂದ್ಯದಲ್ಲಿ ಗೈರಾಗಿದ್ದ ವಿರಾಟ್ ಕೊಹ್ಲಿ ಈ ಪಂದ್ಯಕ್ಕೆ ಲಭ್ಯರಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ. ಆದರೆ ಇಬ್ಬರಿಂದಲೂ ಸ್ಫೋಟಕ ಆಟದ ಅಗತ್ಯವಿದೆ. ಯುವ ತಾರೆಗಳಾದ ಜಿತೇಶ್ ಶರ್ಮಾ, ಶಿವಂ ದುಬೆ, ರಿಂಕು ಸಿಂಗ್‌ಮತ್ತೊಮ್ಮೆ ಅಬ್ಬರಿಸುವ ಕಾತರದಲ್ಲಿದ್ದಾರೆ.
ಮತ್ತೊಂದೆಡೆ ಆಫ್ಘನ್ ಯಾವುದೇ ತಂಡವನ್ನೂ ಸೋಲಿಸಬಲ್ಲ ಸಾಮರ್ಥ್ಯ ಹೊಂದಿದ್ದು, ಈ ಪಂದ್ಯದಲ್ಲಿ ಭಾರತಕ್ಕೆ ತಿರುಗೇಟು ನೀಡಲು ಕಾಯುತ್ತಿದೆ. ಹೆಚ್ಚಾಗಿ ರಹ್ಮಾನುಲ್ಲಾ ಗುರ್ಬಾಜ್, ಜದ್ರಾನ್, ಮೊಹಮದ್ ನಬಿ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದ್ದು, ಸ್ಪಿನ್ನರ್‌ಗಳು ಮಿಂಚಿದರಷ್ಟೇ ತಂಡಕ್ಕೆ ಗೆಲುವು ಸಾಧ್ಯವಿದೆ.
ಒಟ್ಟು ಮುಖಾಮುಖಿ: 06 ಪಂದ್ಯ ಭಾರತ: 05ಅಫ್ಘಾನಿಸ್ತಾನ: 00ಫಲಿತಾಂಶವಿಲ್ಲ: 01
ಸಂಭವನೀಯ ಆಟಗಾರರ ಪಟ್ಟಿಭಾರತ: ರೋಹಿತ್(ನಾಯಕ), ಯಶಸ್ವಿ/ಶುಭ್‌ಮನ್, ಕೊಹ್ಲಿ, ತಿಲಕ್, ರಿಂಕು ಸಿಂಗ್, ದುಬೆ, ಜಿತೇಶ್, ಅಕ್ಷರ್, ಕುಲ್ದೀಪ್/ಬಿಷ್ಣೋಯ್, ಅರ್ಶ್‌ದೀಪ್, ಆವೇಶ್/ಮುಕೇಶ್.
ಆಫ್ಘನ್: ಹಜ್ರತುಲ್ಲಾ/ರಹ್ಮತ್, ರಹಮಾನುಲ್ಲಾ, ಇಬ್ರಾಹಿಂ(ನಾಯಕ), ಅಜ್ಮತುಲ್ಲಾ, ನಜೀಬುಲ್ಲಾ, ನಬಿ, ಕರೀಂ, ಗುಲ್ಬದಿನ್, ಮುಜೀಬ್, ನವೀನ್, ಫಜಲ್.
ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ