ನವದೆಹಲಿ: ಹಾಲಿ ಚಾಂಪಿಯನ್ ಭಾರತ ಜು.19ರಂದು ಮಹಿಳಾ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಏಷ್ಯಾ ಕ್ರಿಕೆಟ್ ಸಮಿತಿಯು ಮಂಗಳವಾರ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಿತು.ಜು.19ರಿಂದ 28ರ ವರೆಗೂ ಶ್ರೀಲಂಕಾದ ದಾಂಬುಲಾದಲ್ಲಿ ಟೂರ್ನಿ ನಡೆಯಲಿದ್ದು 8 ತಂಡಗಳು ಪಾಲ್ಗೊಳ್ಳಲಿವೆ. ತಲಾ 4 ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು, ಗುಂಪಿನಲ್ಲಿ ಅಗ್ರ-2 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ಟೂರ್ನಿಯಲ್ಲಿ ಕಾರ್ಯನಿರ್ವಹಿಸಲಿರುವ ಎಲ್ಲಾ ಅಧಿಕಾರಿಗಳು (ಅಂಪೈರ್, ರೆಫ್ರಿ) ಮಹಿಳೆಯರೇ ಆಗಿರಲಿದ್ದಾರೆ ಎನ್ನುವುದು ವಿಶೇಷ.2012ರಲ್ಲಿ ಆರಂಭಗೊಂಡಿದ್ದ ಟೂರ್ನಿಯು ಟಿ20 ಮಾದರಿಯಲ್ಲೇ ನಡೆದುಕೊಂಡು ಬಂದಿದ್ದು, ಭಾರತ 7 ಬಾರಿ ಪ್ರಶಸ್ತಿ ಗೆದ್ದು ಟೂರ್ನಿಯ ಅತ್ಯಂತ ಯಶಸ್ವಿ ತಂಡ ಎನಿಸಿದೆ.