ನವದೆಹಲಿ: 2036ರ ಒಲಿಂಪಿಕ್ಸ್ ಆತಿಥ್ಯ ಪಡೆಯಲು ಭಾರಿ ಪ್ರಯತ್ನ ನಡೆಸುತ್ತಿರುವ ಭಾರತ, ಆತಿಥ್ಯ ಹಕ್ಕು ಲಭಿಸಿದರೆ ಕ್ರೀಡಾಕೂಟದಲ್ಲಿ ಭಾರತದ ಸಾಂಪ್ರದಾಯಿಕ ಕ್ರೀಡೆಗಳನ್ನು ಸೇರ್ಪಡೆಗೊಳಿಸುವ ಯೋಜನೆ ಹಾಕಿಕೊಂಡಿದೆ.
ಈ ಬಗ್ಗೆ ಭಾರತ ಕ್ರೀಡಾ ಪ್ರಾಧಿಕಾರದ ಮಿಷನ್ ಒಲಿಂಪಿಕ್ ಸೆಲ್(ಎಂಒಸಿ) ಅಧಿಕಾರಿಗಳು ವರದಿ ಸಿದ್ಧಪಡಿಸಿ, ನೂತನ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ಸಲ್ಲಿಸಿದ್ದಾರೆ.
ವರದಿಯಲ್ಲಿ ಯೋಗ, ಖೋ-ಖೋ, ಕಬಡ್ಡಿ, ಚೆಸ್, ಟಿ20 ಕ್ರಿಕೆಟ್ ಹಾಗೂ ಸ್ಕ್ಯಾಶ್ ಸೇರ್ಪಡೆ ಬಗ್ಗೆ ಉಲ್ಲೇಖಿಸಲಾಗಿದೆ. 2036ರ ಒಲಿಂಪಿಕ್ಸ್ ಆತಿಥ್ಯ ರಾಷ್ಟ್ರವನ್ನು ಮುಂದಿನ ವರ್ಷ ಘೋಷಿಸುವ ಸಾಧ್ಯತೆಯಿದೆ. ಒಂದು ವೇಳೆ ಭಾರತಕ್ಕೆ ಆತಿಥ್ಯ ಹಕ್ಕು ಲಭಿಸಿದರೆ, ಪ್ರಸ್ತಾವಿತ 6 ಕ್ರೀಡೆಗಳನ್ನು 2032ರ ಬ್ರಿಸ್ಬೇನ್ ಗೇಮ್ಸ್‌ನಲ್ಲಿ ಪ್ರದರ್ಶನ ಕಾರ್ಯಕ್ರಮಗಳಾಗಿ ಪರಿಚಯಿಸಬೇಕಾಗುತ್ತದೆ.
ಸೂಪರ್-8ರ ಮೊದಲ ಜಯಕ್ಕೆ ವಿಂಡೀಸ್ vs ಅಮೆರಿಕ ಫೈಟ್
ಬ್ರಿಡ್ಜ್‌ಟೌನ್(ಬಾರ್ಬಡೊಸ್): ಸೂಪರ್-8ರ ಮೊದಲ ಪಂದ್ಯಗಳಲ್ಲಿ ಸೋಲನುಭವಿಸಿರುವ ಆತಿಥೇಯ ರಾಷ್ಟ್ರಗಳಾದ ವೆಸ್ಟ್‌ಇಂಡೀಸ್ ಹಾಗೂ ಅಮೆರಿಕ ತಂಡಗಳು ಶನಿವಾರ ಪರಸ್ಪರ ಮುಖಾಮುಖಿಯಾಗಲಿದ್ದು, ಮೊದಲ ಜಯದ ಕಾತರದಲ್ಲಿದೆ.2 ಬಾರಿ ಚಾಂಪಿಯನ್ ವಿಂಡೀಸ್ ತಂಡ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಪರಾಭವಗೊಂಡಿತ್ತು.
180 ರನ್ ಕಲೆಹಾಕಿದ ಹೊರತಾಗಿಯೂ 51 ಎಸೆತಗಳಲ್ಲಿ ರನ್ ಗಳಿಸಲು ವಿಫಲವಾಗಿದ್ದ ತಂಡ ಅದಕ್ಕೆ ತಕ್ಕ ಬೆಲೆ ತೆರುವಂತಾಗಿತ್ತು. ಈ ಪಂದ್ಯದಲ್ಲಿ ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾತರದಲ್ಲಿರುವ ವಿಂಡೀಸ್, ಜಯದೊಂದಿಗೆ ಸೆಮಿಫೈನಲ್ ರೇಸ್‌ನಲ್ಲಿ ಉಳಿದುಕೊಳ್ಳುವ ವಿಶ್ವಾಸದಲ್ಲಿದೆ.
ಮತ್ತೊಂದೆಡೆ ಟೂರ್ನಿಯಲ್ಲಿ ತನ್ನ ಅತ್ಯುತ್ತಮ ಪ್ರದರ್ಶನದ ಮೂಲಕವೇ ಎಲ್ಲರ ಗಮನ ಸೆಳೆದಿರುವ ಅಮೆರಿಕ, ವಿಂಡೀಸ್‌ಗೂ ಆಘಾತ ನೀಡುವ ಗುರಿ ಇಟ್ಟುಕೊಂಡಿದೆ. ಆದರೆ ತಂಡ ಕಳೆದ 3 ಪಂದ್ಯಗಳಲ್ಲಿ ಗೆಲುವನ್ನೇ ಕಂಡಿಲ್ಲ. ಸೂಪರ್-8ರ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿರುವ ಯುಎಸ್‌ಎ, ಈ ಪಂದ್ಯದ ಮೂಲದ ಜಯದ ಹಳಿಗೆ ಮರಳುವ ಕಾತರದಲ್ಲಿದೆ. ಸೋತರೆ ತಂಡ ಸೆಮಿಫೈನಲ್ ರೇಸ್‌ನಿಂದ ಹೊರಬೀಳುವುದು ಬಹುತೇಕ ಖಚಿತ.
ಪಂದ್ಯ: ಬೆಳಗ್ಗೆ 6 ಗಂಟೆಗೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಹಾಟ್‌ಸ್ಟಾರ್.