ಬ್ಲೂಮ್‌ಫೌಂಟೇನ್: ದಾಖಲೆಯ 5 ಬಾರಿ ಚಾಂಪಿಯನ್ ಭಾರತ ಈ ಬಾರಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಸೂಪರ್-6 ಹಂತದ ಕೊನೆ ಪಂದ್ಯದಲ್ಲಿ ಟೀಂ ಇಂಡಿಯಾ, ನೇಪಾಳ ವಿರುದ್ಧ 132 ರನ್ ಭರ್ಜರಿ ಗೆಲುವು ಸಾಧಿಸಿತು.ಇದರೊಂದಿಗೆ ಗುಂಪು-1ರಲ್ಲಿ 4 ಪಂದ್ಯದಲ್ಲಿ 8 ಅಂಕಗಳೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದು, ಅಗ್ರ-2 ಸ್ಥಾನ ಖಚಿತಪಡಿಸಿ ಸೆಮೀಸ್‌ಗೇರಿತು. ಪಾಕಿಸ್ತಾನ 6, ಬಾಂಗ್ಲಾದೇಶ 4 ಅಂಕ ಹೊಂದಿದ್ದು, ಇತ್ತಂಡಕ್ಕೂ ತಲಾ ಒಂದೊಂದು ಪಂದ್ಯ ಬಾಕಿಯಿದೆ.
ಶುಕ್ರವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ನಾಯಕ ಉದಯ್ ಸಹರನ್ ಹಾಗೂ ಸಚಿನ್ ದಾಸ್ ಆಕರ್ಷಕ ಶತಕಗಳ ನೆರವಿನಿಂದ 50 ಓವರಲ್ಲಿ 5 ವಿಕೆಟ್‌ಗೆ 297 ರನ್ ಕಲೆಹಾಕಿತು. 62ಕ್ಕೆ 3 ವಿಕೆಟ್ ಕಳೆದುಕೊಂಡ ಬಳಿಕ 4ನೇ ವಿಕೆಟ್‌ಗೆ ಉದಯ್-ಸಚಿನ್ 215 ರನ್ ಜೊತೆಯಾಟವಾಡಿದರು. ಸಚಿನ್ 116ಕ್ಕೆ ಔಟಾದರೆ, ಉದಯ್ ಕೊಡುಗೆ ಭರ್ತಿ 100 ರನ್. ಗುಲ್ಶನ್ 3 ವಿಕೆಟ್ ಕಿತ್ತರು.ದೊಡ್ಡ ಗುರಿ ಬೆನ್ನತ್ತಿದ ನೇಪಾಳ, ಭಾರತೀಯರ ನಿಖರ ದಾಳಿಗೆ ತತ್ತರಿಸಿ 50 ಓವರಲ್ಲಿ 9 ವಿಕೆಟ್‌ಗೆ 165 ರನ್ ಗಳಿಸಿ ಸೋಲೊಪ್ಪಿಕೊಂಡಿತು. ವಿಕೆಟ್ ನಷ್ಟವಿಲ್ಲದೇ 48 ರನ್ ಗಳಿಸಿದ್ದ ನೇಪಾಳ, ಬಳಿತ ದಿಢೀಸ್ ಕುಸಿತಕ್ಕೊಳಗಾಗಿ 77ಕ್ಕೆ 7 ವಿಕೆಟ್ ನಷ್ಟಕ್ಕೊಳಗಾಯಿತು. ಸೌಮಿ ಪಾಂಡೆ 10 ಓವರಲ್ಲಿ 29 ರನ್‌ಗೆ 4 ವಿಕೆಟ್ ಕಬಳಿಸಿದರು.
ಸ್ಕೋರ್: ಭಾರತ 50 ಓವರಲ್ಲಿ 297/5(ಸಚಿನ್ 116, ಉದಯ್ 100, ಗುಲ್ಶಾನ್ 3-56), ನೇಪಾಳ 50 ಓವರಲ್ಲಿ 165/9 (ದೇವ್ 33, ಸೌಮಿ 4-29)-
ಸೆಮೀಸಲ್ಲಿ ಮಂಗಳವಾರದ.ಆಫ್ರಿಕಾ ಎದುರಾಳಿ?
ಭಾರತ ಗುಂಪು-1ರಲ್ಲಿ 8 ಅಂಕದೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಪಾಕಿಸ್ತಾನ 6 ಅಂಕ ಹೊಂದಿದ್ದು, ಕೊನೆ ಪಂದ್ಯ ಗೆದ್ದರೂ ಭಾರತವನ್ನು ನೆಟ್‌ರೇಟ್‌ನಲ್ಲಿ ಹಿಂದಿಕ್ಕುವ ಸಾಧ್ಯತೆ ಕಡಿಮೆ. ಹೀಗಾಗಿ ಭಾರತವೇ ಅಗ್ರಸ್ಥಾನಿಯಾಗಬಹುದು. ಹೀಗಾಗಿ ಗುಂಪು-2ರಲ್ಲಿ 2ನೇ ಸ್ಥಾನದಲ್ಲಿರುವ ದ.ಆಫ್ರಿಕಾ ವಿರುದ್ಧ ಮಂಗಳವಾರ ಭಾರತ ಸೆಮಿಫೈನಲ್‌ನಲ್ಲಿ ಆಡುವ ಸಾಧ್ಯತೆಯಿದೆ.