ಕಬಡ್ಡಿ ಸೆಮೀಸಲ್ಲಿ ಇಂದು ಭಾರತ vs ಪಾಕ್‌ ಕದನ!

KannadaprabhaNewsNetwork |  
Published : Oct 06, 2023, 01:15 AM IST

ಸಾರಾಂಶ

ಭಾರತದ ತಂಡ ಅಜೇಯವಾಗಿಯೇ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

7 ಬಾರಿ ಚಾಂಪಿಯನ್‌ ಭಾರತದ ಪುರುಷರ ತಂಡ ಮತ್ತೆ ಕಬಡ್ಡಿಯಲ್ಲಿ ಪ್ರಾಬಲ್ಯ ಸಾಧಿಸಿದ್ದು, ಅಜೇಯವಾಗಿಯೇ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಗುರುವಾರ ಗುಂಪು ಹಂತದ ಕೊನೆ 2 ಪಂದ್ಯಗಳಲ್ಲೂ ಭಾರತ ಜಯಗಳಿಸಿತು. ಚೈನೀಸ್‌ ತೈಪೆ ವಿರುದ್ಧ 50-27 ಹಾಗೂ ಜಪಾನ್‌ ವಿರುದ್ಧ 56-30 ಅಂಕಗಳಿಂದ ಗೆಲುವು ತನ್ನದಾಗಿಸಿಕೊಂಡಿತು. ಇದರೊಂದಿಗೆ ‘ಎ’ ಗುಂಪಿನಿಂದ ಅಗ್ರಸ್ಥಾನಿಯಾದ 2018ರ ಕಂಚು ವಿಜೇತ ಭಾರತ, ಶುಕ್ರವಾರ ಸೆಮಿಫೈನಲ್‌ನಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಮಹಿಳೆಯರ ವಿಭಾಗದ ಸೆಮೀಸ್‌ ಕೂಡಾ ಶುಕ್ರವಾರ ನಡೆಯಲಿದ್ದು, 2 ಬಾರಿ ಚಾಂಪಿಯನ್‌ ಭಾರತಕ್ಕೆ ನೇಪಾಳದ ಸವಾಲು ಎದುರಾಗಲಿದೆ.

PREV

Recommended Stories

ಸದ್ಯಕ್ಕೆ ನಿಲ್ಲಲ್ಲ ‘ನೋ ಶೇಕ್‌ ಹ್ಯಾಂಡ್‌’ ವಾರ್‌! ಪಾಕಿಸ್ತಾನ ಆಕ್ಷೇಪ
ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌