ಇಂದಿನಿಂದ 3 ದಿನ ಬೆಂಗಳೂರಿನಲ್ಲಿ ಅಂ.ರಾ.ಪ್ಯಾರಾ ಅಥ್ಲೆಟಿಕ್ಸ್‌ ಕಲರವ

KannadaprabhaNewsNetwork |  
Published : May 26, 2026, 01:15 AM IST
Sports

ಸಾರಾಂಶ

ಭಾರತೀಯ ಪ್ಯಾರಾಲಿಂಪಿಕ್ಸ್‌ ಸಮಿತಿ(ಪಿಸಿಐ) ಆಯೋಜಿಸುತ್ತಿರುವ 8ನೇ ಆವೃತ್ತಿಯ ಇಂಡಿಯನ್‌ ಓಪನ್‌ ಪ್ಯಾರಾ ಅಥ್ಲೆಟಿಕ್ಸ್ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಮಂಗಳವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಲಿದೆ.

  ಬೆಂಗಳೂರು :  ಭಾರತೀಯ ಪ್ಯಾರಾಲಿಂಪಿಕ್ಸ್‌ ಸಮಿತಿ(ಪಿಸಿಐ) ಆಯೋಜಿಸುತ್ತಿರುವ 8ನೇ ಆವೃತ್ತಿಯ ಇಂಡಿಯನ್‌ ಓಪನ್‌ ಪ್ಯಾರಾ ಅಥ್ಲೆಟಿಕ್ಸ್ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಮಂಗಳವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಲಿದೆ. 3 ದಿನಗಳ ಕಾಲ ನಡೆಯಲಿರುವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 341 ಮಂದಿ ಸೇರಿ ಒಟ್ಟು 5 ರಾಷ್ಟ್ರಗಳ 350 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. 

155 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ

ಕೂಟದಲ್ಲಿ ಒಟ್ಟು 155 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಈ ಕೂಟವು ಅಕ್ಟೋಬರ್‌ 18ರಿಂದ 24ರ ವರೆಗೂ ಜಪಾನ್‌ನ ಐಚಿ-ನಗೊಯಾದಲ್ಲಿ ನಡೆಯಲಿರುವ 5ನೇ ಪ್ಯಾರಾ ಏಷ್ಯನ್‌ ಗೇಮ್ಸ್‌ಗೆ ಅರ್ಹತಾ ಕೂಟವಾಗಿರಲಿದೆ. 155 ವಿಭಾಗಗಳ ಪೈಕಿ 89 ವಿಭಾಗಗಳಲ್ಲಿ ಪುರುಷ ಅಥ್ಲೀಟ್‌ಗಳು, 66 ವಿಭಾಗಗಳಲ್ಲಿ ಮಹಿಳಾ ಅಥ್ಲೀಟ್‌ಗಳಿಗೆ ಸ್ಪರ್ಧೆಗಳು ನಡೆಯಲಿವೆ. 

ಭಾರತದ 341 ಅಥ್ಲೀಟ್‌ಗಳು ಪೈಕಿ 66 ಮಂದಿಗೆ ಪ್ಯಾರಾ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ

 ಭಾರತದ 341 ಅಥ್ಲೀಟ್‌ಗಳು ಪೈಕಿ 66 ಮಂದಿಗೆ ಪ್ಯಾರಾ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ದೊರೆಯಲಿದೆ. ವಿದೇಶಿಗರ ಪೈಕಿ ಶ್ರೀಲಂಕಾದ ಮೂವರು, ಕಿರ್ಗಿಸ್ತಾನದ ಇಬ್ಬರು, ಥಾಯ್ಲೆಂಡ್‌ ಹಾಗೂ ಫಿಲಿಪ್ಪೀನ್ಸ್‌ನ ತಲಾ ಒಬ್ಬರು ಇದ್ದಾರೆ. ಅಫ್ಘಾನಿಸ್ತಾನದ ಇಬ್ಬರು ಆಗಮಿಸುವ ನಿರೀಕ್ಷೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ. ಸದ್ಯ ಪಟ್ಟಿಯಲ್ಲಿರುವ ಅಥ್ಲೀಟ್‌ಗಳ ಪೈಕಿ 30 ಮಂದಿ ತಲಾ 3 ಸ್ಪರ್ಧೆಗಳಲ್ಲಿ ಪಾಲ್ಗೊಂಡು ಗಮನ ಸೆಳೆಯಲಿದ್ದಾರೆ.

 ಭಾರತದ 19 ರಾಜ್ಯ ಹಾಗೂ ಸರ್ವಿಸಸ್‌ನ ಅಥ್ಲೀಟ್‌ಗಳು ಕಣಕ್ಕಿಳಿಯಲಿದ್ದಾರೆ. ಕರ್ನಾಟಕದ 15 ಅಥ್ಲೀಟ್‌ಗಳಿದ್ದರೆ, ಅತಿಹೆಚ್ಚು ಅಥ್ಲೀಟ್‌ಗಳು ಹರ್ಯಾಣ ರಾಜ್ಯದವರಾಗಿದ್ದಾರೆ. ಹರ್ಯಾಣದ 84 ಮಂದಿ ಸ್ಪರ್ಧೆಗಿಳಿಯಲಿದ್ದಾರೆ. ಗೋವಾದ ಏಕೈಕ ಪ್ಯಾರಾ ಅಥ್ಲೀಟ್‌ ಪಾಲ್ಗೊಳ್ಳುತ್ತಿರುವುದು ಕೂಡ ವಿಶೇಷ.

ಮೇ 28ರ ವರೆಗೂ ನಡೆಯಲಿರುವ ಕೂಟಕ್ಕೆ ಭಾರತೀಯ ಪ್ಯಾರಾ ಅಥ್ಲೆಟಿಕ್ಸ್‌ ಸಂಸ್ಥೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಅಥ್ಲೀಟ್‌ಗಳಿಗೆ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಮುಂಬರುವ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ದಾಖಲೆಯ ಪದಕಗಳನ್ನು ಗೆಲ್ಲಲು ಈ ಕೂಟ ಮೊದಲ ಹೆಜ್ಜೆ ಆಗಲಿದೆ ಎಂದು ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿಯ ಮುಖ್ಯಸ್ಥ ಡಾ.ಸತ್ಯನಾರಾಯಣ ಅವರು ತಿಳಿಸಿದ್ದಾರೆ.

ಇಂಡಿಯನ್‌ ಓಪನ್‌ ಪ್ಯಾರಾ ಅಥ್ಲೆಟಿಕ್ಸ್‌ನ ಪ್ರಮುಖಾಂಶ * 350 ಪ್ಯಾರಾ ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ * ಒಟ್ಟು 155 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ* ಪುರುಷ ಅಥ್ಲೀಟ್‌ಗಳು 89 ವಿಭಾಗಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ * ಮಹಿಳಾ ಅಥ್ಲೀಟ್‌ಗಳು 66 ವಿಭಾಗಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ * ಭಾರತದ 341 ಅಥ್ಲೀಟ್‌ಗಳು ಕಣಕ್ಕಿಳಿಯಲಿದ್ದಾರೆ  

* 30 ಅಥ್ಲೀಟ್‌ಗಳು ತಲಾ 3 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ * ಸರ್ವಿಸಸ್‌ ತಂಡ, ಭಾರತದ 19 ರಾಜ್ಯಗಳ ಸ್ಪರ್ಧಿಗಳಿದ್ದಾರೆ * ಹರ್ಯಾಣದಿಂದ ಬರೋಬ್ಬರಿ 84 ಅಥ್ಲೀಟ್‌ಗಳ ಆಗಮನ * ಶ್ರೀಲಂಕಾ, ಕಿರ್ಗಿಸ್ತಾನ, ಥಾಯ್ಲೆಂಡ್‌, ಫಿಲಿಪ್ಪೀನ್ಸ್‌ನ ಅಥ್ಲೀಟ್‌ಗಳೂ ಭಾಗಿ* ಅಫ್ಘಾನಿಸ್ತಾನ ಅಥ್ಲೀಟ್‌ಗಳೂ ಪಾಲ್ಗೊಳ್ಳುವ ನಿರೀಕ್ಷೆ * ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ 3 ದಿನಗಳ ಕೂಟ

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಮತ್ತೆ ಬಂತು ಮಿನಿ ಒಲಿಂಪಿಕ್ಸ್‌ ಇಂದಿನಿಂದ ಕಾಮನ್‌ವೆಲ್ತ್‌ ಗೇಮ್ಸ್‌ 2026
ಜು.22ರಿಂದ ಮಹಾರಾಣಿ ಟ್ರೋಫಿ ಟಿ20: ಮೈಸೂರು ವಾರಿಯರ್ಸ್‌ಗೆ ಶುಭಾ ಸತೀಶ್ ನಾಯಕಿ