ಆರ್‌ಸಿಬಿಗೆ ಕ್ವಾಲಿಫೈಯರ್‌-1 ಟಾರ್ಗೆಟ್‌

Published : May 22, 2026, 12:02 PM IST
Virat Kohli RCB

ಸಾರಾಂಶ

ಈ ಬಾರಿ ಐಪಿಎಲ್‌ನಲ್ಲಿ ಅಗ್ರ-2 ಸ್ಥಾನ ಪಡೆದು ಕ್ವಾಲಿಫೈಯರ್‌-1ರಲ್ಲಿ ಆಡುವ ಅವಕಾಶಕ್ಕಾಗಿ ಕಾಯುತ್ತಿರುವ ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡ ಶುಕ್ರವಾರ ಲೀಗ್‌ ಹಂತದ ತನ್ನ ಕೊನೆ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಸೆಣಸಾಡಲಿದೆ.

ಹೈದರಾಬಾದ್‌: ಈ ಬಾರಿ ಐಪಿಎಲ್‌ನಲ್ಲಿ ಅಗ್ರ-2 ಸ್ಥಾನ ಪಡೆದು ಕ್ವಾಲಿಫೈಯರ್‌-1ರಲ್ಲಿ ಆಡುವ ಅವಕಾಶಕ್ಕಾಗಿ ಕಾಯುತ್ತಿರುವ ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡ ಶುಕ್ರವಾರ ಲೀಗ್‌ ಹಂತದ ತನ್ನ ಕೊನೆ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಸೆಣಸಾಡಲಿದೆ.

ಆರ್‌ಸಿಬಿ ಆಡಿರುವ 13 ಪಂದ್ಯಗಳ ಪೈಕಿ 9ರಲ್ಲಿ ಗೆದ್ದಿದ್ದು, 18 ಅಂಕಗಳೊಂದಿಗೆ ಈಗಾಗಲೇ ಪ್ಲೇ-ಆಫ್‌ ಸ್ಥಾನ ಖಚಿತಪಡಿಸಿಕೊಂಡಿದೆ. ಆದರೆ ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನದಲ್ಲಿ ಉಳಿದು ಕ್ವಾಲಿಫೈಯರ್‌-1 ಪ್ರವೇಶಿಸುವುದು ಆರ್‌ಸಿಬಿಯ ಪ್ರಮುಖ ಗುರಿ. ಕ್ವಾಲಿಫೈಯರ್‌-1ರಲ್ಲಿ ಗೆದ್ದರೆ ನೇರವಾಗಿ ಫೈನಲ್‌ಗೇರಲಿದ್ದು, ಸೋತರೆ ಮತ್ತೊಂದು ಅವಕಾಶ ಸಿಗಲಿದೆ. ಹೀಗಾಗಿಯೇ ತಂಡ ಅಗ್ರ-2 ಸ್ಥಾನದಲ್ಲೇ ಉಳಿಯಲು ಹೋರಾಡಲಿದೆ.

ಸನ್‌ರೈಸರ್ಸ್‌ ವಿರುದ್ಧ ಗೆದ್ದರೆ ಆರ್‌ಸಿಬಿ 20 ಅಂಕದೊಂದಿಗೆ ನಂ.1 ಸ್ಥಾನ ಪಡೆದುಕೊಳ್ಳಲಿದೆ. ಒಂದು ವೇಳೆ ಸೋತರೂ ತಂಡದ ನೆಟ್‌ ರನ್‌ರೇಟ್‌(+1.065) ಉತ್ತಮವಾಗಿರುವುದರಿಂದ ಅಗ್ರಸ್ಥಾನ ಅಥವಾ 2ನೇ ಸ್ಥಾನದಲ್ಲೇ ಇದ್ದು ಪ್ಲೇ-ಆಫ್‌ ಪ್ರವೇಶಿಸುವ ಸಾಧ್ಯತೆಯಿದೆ.

ಮತ್ತೊಂದೆಡೆ ಸನ್‌ರೈಸರ್ಸ್‌ 13 ಪಂದ್ಯಗಳಲ್ಲಿ 8ರಲ್ಲಿ ಗೆದ್ದಿದ್ದು, 16 ಅಂಕದೊಂದಿಗೆ 3ನೇ ಸ್ಥಾನದಲ್ಲಿದೆ. ತಂಡ ಈಗಾಗಲೇ ಪ್ಲೇ-ಆಫ್‌ ಪ್ರವೇಶಿಸಿದ್ದರೂ ಅಗ್ರ-2 ಸ್ಥಾನದ ಮೇಲೆ ಕಣ್ಣಿಟ್ಟಿದೆ. ಇದಕ್ಕಾಗಿ ತಂಡ ಆರ್‌ಸಿಬಿ ವಿರುದ್ಧ ಗೆಲ್ಲಲೇಬೇಕಿದೆ. ಒಂದು ವೇಳೆ ಸೋತರೆ ತಂಡ 3ನೇ ಸ್ಥಾನಿಯಾಗಿ ಪ್ಲೇ-ಆಫ್‌ ಪ್ರವೇಶಿಸಿ, ಎಲಿಮಿನೇಟರ್‌ನಲ್ಲಿ ಆಡಬೇಕಾಗುತ್ತದೆ. ಎಲಿಮಿನೇಟರ್‌ನಲ್ಲಿ ಸೋಲುವ ತಂಡ ಟೂರ್ನಿಯಿಂದಲೇ ಹೊರಬೀಳಲಿದೆ.

ಇಂದು ಆರ್‌ಸಿಬಿ ಗೆದ್ದರೆ...

1. 2011ರ ಬಳಿಕ ಇದೇ ಮೊದಲ ಬಾರಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ.

2. ಐಪಿಎಲ್‌ನ ಲೀಗ್‌ ಹಂತದಲ್ಲಿ ಇದೇ ಮೊದಲ ಬಾರಿ 10 ಪಂದ್ಯಗಳಲ್ಲಿ ಗೆಲುವು.

3. ಮೊದಲ ಬಾರಿ 20+ ಅಂಕ ಗಳಿಸಿದ ಸಾಧನೆ. 2011, 2025ರಲ್ಲಿ ತಲಾ 19 ಅಂಕ.

4. ಐಪಿಎಲ್‌ ಇತಿಹಾಸದಲ್ಲೇ 4ನೇ ಬಾರಿ ಅಗ್ರ-2 ಸ್ಥಾನಿಯಾಗಿ ಕ್ವಾಲಿಫೈಯರ್‌-1ಗೆ ಅರ್ಹತೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಕೆಕೆಆರ್‌ ಆಸೆ ಇನ್ನೂ ಜೀವಂತ
‘ನನ್ನ ಮಗಳು ಎಷ್ಟು ಜನರೊಂದಿಗೆ ಬೇಕಿದ್ರೂ ಡೇಟಿಂಗ್ ಮಾಡಲಿ’