‘ನನ್ನ ಮಗಳು ಎಷ್ಟು ಜನರೊಂದಿಗೆ ಬೇಕಿದ್ರೂ ಡೇಟಿಂಗ್ ಮಾಡಲಿ’

Published : May 16, 2026, 12:17 PM IST
Kiara Advani

ಸಾರಾಂಶ

ಟಾಕ್ಸಿಕ್‌ ನಾಯಕ ನಟಿ ಕಿಯಾರಾ ಅಡ್ವಾಣಿ ತನ್ನ ಮಗಳ ಡೇಟಿಂಗ್‌, ಮದುವೆ ವಿಚಾರಕ್ಕೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದಿದ್ದಾರೆ. ಈ ಕುರಿತು ಕಿಯಾರಾ, ‘ನನ್ನ ಅಪ್ಪ ಅಮ್ಮ ತಮ್ಮ ಬದುಕಲ್ಲಿ ಬಂದ ಮೊದಲ ಹುಡುಗ ಅಥವಾ ಹುಡುಗಿಯನ್ನೇ ಆಯ್ಕೆ ಮಾಡಿ ಪ್ರೇಮಿಸಿ ಮದುವೆ ಆದರು.

  ಸಿನಿವಾರ್ತೆ

ಟಾಕ್ಸಿಕ್‌ ನಾಯಕ ನಟಿ ಕಿಯಾರಾ ಅಡ್ವಾಣಿ ತನ್ನ ಮಗಳ ಡೇಟಿಂಗ್‌, ಮದುವೆ ವಿಚಾರಕ್ಕೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದಿದ್ದಾರೆ.

ಈ ಕುರಿತು ಕಿಯಾರಾ, ‘ನನ್ನ ಅಪ್ಪ ಅಮ್ಮ ತಮ್ಮ ಬದುಕಲ್ಲಿ ಬಂದ ಮೊದಲ ಹುಡುಗ ಅಥವಾ ಹುಡುಗಿಯನ್ನೇ ಆಯ್ಕೆ ಮಾಡಿ ಪ್ರೇಮಿಸಿ ಮದುವೆ ಆದರು. ಅದನ್ನು ನೋಡಿ ಬೆಳೆದ ನಾನು ಡೇಟಿಂಗ್‌ ಮಾಡುತ್ತಿದ್ದ ಮೊದಲ ಹುಡುಗನನ್ನೇ ಲೈಫ್‌ ಪಾರ್ಟನರ್‌ ಥರ ನೋಡಿದ್ದೆ. ಆಮೇಲೆ ಡೇಟ್‌ ಮಾಡಿದ ಪ್ರತೀ ಹುಡುಗರನ್ನೂ ಅದೇ ದೃಷ್ಟಿಕೋನದಲ್ಲಿ ನೋಡಿದ್ದೆ. 

ಅವಳು ಎಷ್ಟು ಜನರ ಜೊತೆಗೆ ಬೇಕಿದ್ದರೂ ಡೇಟಿಂಗ್‌ ಮಾಡಲಿ

ಆದರೆ ಕೊನೆಗೆ ಬೇರೆಯವರನ್ನು ಮದುವೆಯಾದೆ. ಇದೆಲ್ಲ ಆದದ್ದು ಎಷ್ಟು ಒಳ್ಳೆಯದಾಯಿತು ಅಂತ ಈಗ ಅನಿಸುತ್ತದೆ. ನನ್ನ ಮಗಳಿಗೆ ಮುಕ್ತ ಸ್ವಾತಂತ್ರ್ಯ ಕೊಡುತ್ತೇನೆ. ಅವಳು ಎಷ್ಟು ಜನರ ಜೊತೆಗೆ ಬೇಕಿದ್ದರೂ ಡೇಟಿಂಗ್‌ ಮಾಡಲಿ. ಡೇಟಿಂಗ್‌ ಮಾಡುವಾಗ ಮುಂದೇನಾಗುತ್ತೋ ಎಂಬ ಆತಂಕ ಅವಳಿಗೆ ಇರಬಾರದು. ಸಾಕಷ್ಟು ಆಯ್ಕೆಗಳ ಬಳಿಕ ಸರಿಯಾದ ವ್ಯಕ್ತಿಯನ್ನೇ ಅವಳು ಲೈಫ್‌ ಪಾರ್ಟನರ್‌ ಆಗಿ ಆಯ್ಕೆ ಮಾಡಿಕೊಳ್ಳಲಿ’ ಎಂದು ಬೋಲ್ಡ್‌ ಸ್ಟೇಟ್‌ಮೆಂಟ್‌ ನೀಡಿದ್ದಾರೆ.

ನನ್ನ ಮಗಳು ಫುಲ್‌ ಲೈಫ್‌ ನೋಡಬೇಕು

‘ನನ್ನ ಮಗಳು ಫುಲ್‌ ಲೈಫ್‌ ನೋಡಬೇಕು ಎಂಬುದು ನನ್ನ ಆಸೆ. ನನ್ನ ಹಾಗೆ ಜನರನ್ನು ಸಂತೋಷ ಪಡಿಸಲು ತನ್ನ ಖುಷಿಯನ್ನು ತ್ಯಾಗ ಮಾಡಬಾರದು. ತನಗನಿಸಿದ್ದನ್ನು ನೇರವಾಗಿ ಹೇಳು ಧೈರ್ಯ ಇರಬೇಕು. ಎಲ್ಲ ವಿಚಾರಗಳನ್ನೂ ನಿರ್ಭೀತಿಯಿಂದ ಹಂಚಿಕೊಳ್ಳಬೇಕು. ಆ ರೀತಿ ಮಗಳನ್ನು ಬೆಳೆಸುತ್ತೇನೆ’ ಎಂದು ಹೇಳಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಚೆನ್ನೈ ಪ್ಲೇ-ಆಫ್‌ ಆಸೆಗೆ ಲಖನೌ ಪೆಟ್ಟು!
ಪ್ಲೇ-ಆಫ್‌ ಮೇಲೆ ಆರ್‌ಸಿಬಿ ಕಣ್ಣು