ಬೆಂಗಳೂರಲ್ಲೇ ಐಪಿಎಲ್‌ ಉದ್ಘಾಟನೆ : ಮಾ.28ಕ್ಕೆ ಆರ್‌ಸಿಬಿ vs ಸನ್‌ರೈಸರ್ಸ್‌

Published : Mar 12, 2026, 12:12 PM IST
Topl IPL 2026 First Phase Matches

ಸಾರಾಂಶ

 ಪದೇ ಪದೇ ವಿಳಂಬವಾಗುತ್ತಿದ್ದ 2026ರ ಐಪಿಎಲ್‌ನ ಮೊದಲ ಹಂತದ ವೇಳಾಪಟ್ಟಿ ಕೊನೆಗೂ ಪ್ರಕಟಗೊಂಡಿದೆ. ಮಾ.28ರಂದು ಟೂರ್ನಿಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದ್ದು, ಹಾಲಿ ಚಾಂಪಿಯನ್‌ ಆರ್‌ಸಿಬಿ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಸೆಣಸಾಡಲಿವೆ.

ನವದೆಹಲಿ: ಪದೇ ಪದೇ ವಿಳಂಬವಾಗುತ್ತಿದ್ದ 2026ರ ಐಪಿಎಲ್‌ನ ಮೊದಲ ಹಂತದ ವೇಳಾಪಟ್ಟಿ ಕೊನೆಗೂ ಪ್ರಕಟಗೊಂಡಿದೆ. ಮಾ.28ರಂದು ಟೂರ್ನಿಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದ್ದು, ಹಾಲಿ ಚಾಂಪಿಯನ್‌ ಆರ್‌ಸಿಬಿ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಸೆಣಸಾಡಲಿವೆ.

ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳದ ಚುನಾವಣೆ ಇನ್ನೂ ಘೋಷಣೆಯಾಗಿಲ್ಲ. ಚುನಾವಣೆ ವೇಳೆ ಆ ನಗರಗಳಲ್ಲಿ ಪಂದ್ಯ ನಡೆಸುವುದು ಸೂಕ್ತವಲ್ಲದ ಕಾರಣ ಈಗ ಕೇವಲ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಐಪಿಎಲ್‌ ಆಡಳಿತ ಮಂಡಳಿ ಘೋಷಿಸಿದೆ. ಚುನಾವಣೆ ಘೋಷಣೆ ಬಳಿಕ ಇನ್ನುಳಿದ ಪಂದ್ಯಗಳ ಪಟ್ಟಿ ಪ್ರಕಟಿಸಲಿದೆ.

16 ದಿನ, 20 ಪಂದ್ಯ:

ಮೊದಲ ಹಂತದಲ್ಲಿ ಒಟ್ಟು 16 ದಿನಗಳ ಕಾಲ ಪಂದ್ಯಗಳು ನಡೆಯಲಿವೆ. ಈ ಪೈಕಿ 4 ಡಬಲ್‌ ಹೆಡರ್‌(ದಿನಕ್ಕೆ 2 ಪಂದ್ಯ) ಇರಲಿವೆ. ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ, 2ನೇ ಪಂದ್ಯ ಸಂಜೆ 7.30ಕ್ಕೆ ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ ಆರ್‌ಸಿಬಿ ತಂಡ ಬೆಂಗಳೂರಿನಲ್ಲಿ 2 ಪಂದ್ಯಗಳನ್ನಾಡಲಿದೆ. ಉದ್ಘಾಟನಾ ಪಂದ್ಯ ಹೊರತಾಗಿ ತನ್ನ ತವರಿನ 2ನೇ ಪಂದ್ಯದಲ್ಲಿ ಏ.5ರಂದು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಆಡಲಿದೆ.

ಐಪಿಎಲ್‌ ವೇಳಾಪಟ್ಟಿ(20 ಪಂದ್ಯ)

ದಿನಾಂಕ ಪಂದ್ಯ ನಗರ ಸಮಯ

ಮಾ.28 ಆರ್‌ಸಿಬಿ-ಚೆನ್ನೈ ಬೆಂಗಳೂರು ಸಂಜೆ 7.30

ಮಾ.29 ಮುಂಬೈ-ಕೆಕೆಆರ್‌ ಮುಂಬೈ ಸಂಜೆ 7.30

ಮಾ.30 ರಾಜಸ್ಥಾನ-ಚೆನ್ನೈ ಗುವಾಹಟಿ ಸಂಜೆ 7.30

ಮಾ.31 ಪಂಜಾಬ್‌-ಗುಜರಾತ್ ನವ ಚಂಡೀಗಢ ಸಂಜೆ 7.30

ಏ.1 ಸನ್‌ರೈಸರ್ಸ್‌-ಡೆಲ್ಲಿ ಲಖನೌ ಸಂಜೆ 7.30

ಏ.2 ಕೆಕೆಆರ್‌-ಸನ್‌ರೈಸರ್ಸ್‌ ಕೋಲ್ಕತಾ ಸಂಜೆ 7.30

ಏ.3 ಚೆನ್ನೈ-ಪಂಜಾಬ್‌ ಚೆನ್ನೈ ಸಂಜೆ 7.30

ಏ.4 ಡೆಲ್ಲಿ-ಮುಂಬೈ ನವದೆಹಲಿ ಮಧ್ಯಾಹ್ನ 3.30

ಏ.4 ಗುಜರಾತ್‌-ರಾಜಸ್ಥಾನ ಅಹ್ಮದಾಬಾದ್‌ ಸಂಜೆ 7.30

ಏ.5 ಸನ್‌ರೈಸರ್ಸ್‌-ಲಖನೌ ಹೈದರಾಬಾದ್‌ ಮಧ್ಯಾಹ್ನ 3.30

ಏ.5 ಆರ್‌ಸಿಬಿ-ಚೆನ್ನೈ ಬೆಂಗಳೂರು ಸಂಜೆ 7.30

ಏ.6 ಕೆಕೆಆರ್‌-ಪಂಜಾಬ್‌ ಕೋಲ್ಕತಾ ಸಂಜೆ 7.30

ಏ.7 ರಾಜಸ್ಥಾನ-ಮುಂಬೈ ಗುವಾಹಟಿ ಸಂಜೆ 7.30

ಏ.8 ಡೆಲ್ಲಿ-ಗುಜರಾತ್‌ ನವದೆಹಲಿ ಸಂಜೆ 7.30

ಏ.9 ಕೆಕೆಆರ್‌-ಲಖನೌ ಕೋಲ್ಕತಾ ಸಂಜೆ 7.30

ಏ.10 ರಾಜಸ್ಥಾನ-ಆರ್‌ಸಿಬಿ ಗುವಾಹಟಿ ಸಂಜೆ 7.30

ಏ.11 ಪಂಜಾಬ್‌-ಸನ್‌ರೈಸರ್ಸ್‌ ನವಚಂಡೀಗಢ ಮಧ್ಯಾಹ್ನ 3.30

ಏ.11 ಚೆನ್ನೈ-ಡೆಲ್ಲಿ ಚೆನ್ನೈ ಸಂಜೆ 7.30

ಏ.12 ಲಖನೌ-ಗುಜರಾತ್‌ ಲಖನೌ ಮಧ್ಯಾಹ್ನ 3.30

ಏ.12 ಮುಂಬೈ-ಆರ್‌ಸಿಬಿ ಮುಂಬೈ ಸಂಜೆ 7.30

18 ವರ್ಷಗಳ ಬಳಿಕ ಚಿನ್ನಸ್ವಾಮಿಯಲ್ಲಿ

ಉದ್ಘಾಟನಾ ಪಂದ್ಯ

ಬೆಂಗಳೂರಿನಲ್ಲಿ ಬರೋಬ್ಬರಿ 18 ವರ್ಷಗಳ ಬಳಿಕ ಐಪಿಎಲ್‌ನ ಉದ್ಘಾಟನಾ ಪಂದ್ಯ ನಡೆಯಲಿದೆ. 2008ರ ಚೊಚ್ಚಲ ಆವೃತ್ತಿಯ ಆರಂಭಿಕ ಪಂದ್ಯ ಬೆಂಗಳೂರಿನಲ್ಲೇ ನಡೆದಿತ್ತು. ಆ ಬಳಿಕ ಇದೇ ಮೊದಲ ಬಾರಿ ಇಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಇಲ್ಲಿ 2014, 2016ರಲ್ಲಿ ಫೈನಲ್‌ ಪಂದ್ಯ ನಡೆದಿವೆ.

ಬೆಂಗಳೂರಲ್ಲಿ ಪಂದ್ಯ ನಡೆಯುವ ಬಗ್ಗೆ ನಾಳೆ ಅಂತಿಮ ಪರಿಶೀಲನೆ

ಬೆಂಗಳೂರಿನಲ್ಲಿ ಪಂದ್ಯ ನಡೆಸಲು ಸರ್ಕಾರ ಈಗ ನೀಡಿರುವುದು ಷರತ್ತುಬದ್ಧ ಅನುಮತಿ. ಕ್ರೀಡಾಂಗಣದಲ್ಲಿ ಆಗಬೇಕಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದ ಬಳಿಕವೇ ಷರತ್ತಿಲ್ಲದ ಅನುಮತಿ ಪತ್ರ ನೀಡುವುದಾಗಿ ಸರ್ಕಾರ ತಿಳಿಸಿತ್ತು. ಸರ್ಕಾರ ನಿಯೋಜಿಸಿದ ತಜ್ಞರ ಸಮಿತಿಯು ಮಾ.13ರಂದು ಕ್ರೀಡಾಂಗಣದಲ್ಲಿ ಅಂತಿಮ ಸುತ್ತಿನ ಪರಿಶೀಲನೆ ನಡೆಸಿ, ಅದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಅದನ್ನು ಅವಲೋಕಿಸಿ ಸರ್ಕಾರ ಅನುಮತಿ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಯಾವುದೇ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಬೇಕಿದ್ದರೆ ಅಲ್ಲಿನ ರಾಜ್ಯ ಸರ್ಕಾರದ ಷರತ್ತುರಹಿತ ಅನುಮತಿಯನ್ನು ಪಡೆದಿರಬೇಕು ಎಂಬುದು ಬಿಸಿಸಿಐ ನಿಯಮ.

ಆರ್‌ಸಿಬಿ ಸೇರಿ 3 ಟೀಂಗೆ ಈ ಬಾರಿ ಎರಡು ತವರು

ಆರ್‌ಸಿಬಿ ಲೀಗ್‌ ಹಂತದಲ್ಲಿ ಬೆಂಗಳೂರಿನಲ್ಲಿ 5, ರಾಯ್ಪುರದಲ್ಲಿ 2 ಪಂದ್ಯಗಳನ್ನಾಡಲಿವೆ. ಪಂಜಾಬ್‌ ತನ್ನ 4 ಪಂದ್ಯಗಳನ್ನು ನವಚಂಡೀಗಢ, 3 ಪಂದ್ಯವನ್ನು ಧರ್ಮಶಾಲಾದಲ್ಲಿ ಆಡಲಿದೆ. ರಾಜಸ್ಥಾನ ತಂಡ ಗುವಾಹಟಿಯಲ್ಲಿ 3, ಜೈಪುರದಲ್ಲಿ 4 ಪಂದ್ಯಗಳನ್ನಾಡಲಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಟಿ20 ವಿಶ್ವಕಪ್‌ ವಿಜೇತ ಭಾರತಕ್ಕೆ ಬಿಸಿಸಿಐ ₹ 131 ಕೋಟಿ ಬಂಪರ್‌!
ಕ್ರಿಕೆಟ್‌ ‘ವಿಶ್ವ’ ಯುದ್ಧ ಗೆಲ್ಲೋರ್‍ಯಾರು..?