ಐಪಿಎಲ್‌ಗೆ ಹಲವು ಹೊಸ ತಾರೆಯರ ಸೇರ್ಪಡೆ : ಹೇಗಿದೆ ಐಪಿಎಲ್‌ ಬಲಿಷ್ಠಗೊಂಡ ತಂಡಗಳ ಬಲಾಬಲ?

KannadaprabhaNewsNetwork |  
Published : Nov 27, 2024, 01:04 AM ISTUpdated : Nov 27, 2024, 07:52 AM IST
ಮೊದಲ ಬಾರಿಗೆ ಅತ್ಯಂತ ಸಮತೋಲನದಿಂದ ಕೂಡಿರುವಂತೆ ಕಂಡು ಬರುತ್ತಿರುವ ಆರ್‌ಸಿಬಿ ತಂಡ.  | Kannada Prabha

ಸಾರಾಂಶ

ಐಪಿಎಲ್‌ಗೆ ಹಲವು ಹೊಸ ತಾರೆಯರ ಸೇರ್ಪಡೆ. ಬಲಿಷ್ಠಗೊಂಡ ತಂಡಗಳು. ಸಮತೋಲನದಿಂದ ಕೂಡಿರುವ ಆರ್‌ಸಿಬಿ ತಂಡ.

ಆರ್‌ಸಿಬಿ

ಹರಾಜಿಗೂ ಮುನ್ನ ಕೊಹ್ಲಿ, ಯಶ್‌ ದಯಾಳ್‌, ಪಾಟೀದಾರ್‌ರನ್ನು ಉಳಿಸಿಕೊಂಡಿದ್ದ ಆರ್‌ಸಿಬಿ, ಹರಾಜಿನಲ್ಲಿ ಬೌಲರ್‌ಗಳ ಖರೀದಿಗೆ ಹೆಚ್ಚು ಮಹತ್ವ ನೀಡಿತು. ಭುವನೇಶ್ವರ್‌, ಹೇಜಲ್‌ವುಡ್‌ ಸೇರ್ಪಡೆ ಬೌಲಿಂಗ್‌ ವಿಭಾಗಕ್ಕೆ ಬಲ ತುಂಬಲಿದೆ. ಇದೇ ಮೊದಲ ಬಾರಿಗೆ ಆರ್‌ಸಿಬಿ ಕೆಲವೇ ಕೆಲವರ ಮೇಲೆ ಅತಿಯಾಗಿ ಅವಲಂಬಿತಗೊಳ್ಳದೆ ಇರಬಹುದು ಎನಿಸುತ್ತಿದೆ. ಬೆಸ್ಟ್‌ ಪ್ಲೇಯಿಂಗ್‌ 12 (ಇಂಪ್ಯಾಕ್ಟ್‌ ಆಟಗಾರ ಸೇರಿ): ಕೊಹ್ಲಿ, ಸಾಲ್ಟ್‌, ಲಿವಿಂಗ್‌ಸ್ಟೋನ್‌, ಪಾಟೀದಾರ್‌, ಕೃನಾಲ್‌, ಜಿತೇಶ್‌ (ಕೀಪರ್‌), ಡೇವಿಡ್‌/ಬೆತ್‌ಹೆಲ್‌, ರಸಿಖ್‌, ಭುವಿ, ಹೇಜಲ್‌ವುಡ್‌, ದಯಾಳ್‌, ಸುಯಶ್‌/ಸ್ವಪ್ನಿಲ್‌.----

ಮುಂಬೈ ಇಂಡಿಯನ್ಸ್‌

ಹರಾಜಿಗೂ ಮುನ್ನ 75 ಕೋಟಿ ರು. ವೆಚ್ಚ ಮಾಡಿ 5 ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದ್ದ ಮುಂಬೈ, ಹರಾಜಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಖರೀದಿ ಮಾಡಲಿಲ್ಲ. ಬೌಲ್ಟ್‌ ಹಾಗೂ ಸ್ಯಾಂಟ್ನರ್‌ ಹೊರತುಪಡಿಸಿ ಅನುಭವಿ ವಿದೇಶಿ ಆಟಗಾರರು ತಂಡದಲ್ಲಿಲ್ಲ. ಹಲವು ಯುವ ಪ್ರತಿಭೆಗಳ ಮೇಲೆ ವಿಶ್ವಾಸವಿಟ್ಟು ಫ್ರಾಂಚೈಸಿಯು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಬೆಸ್ಟ್‌ ಪ್ಲೇಯಿಂಗ್‌ 12: ರೋಹಿತ್‌, ರಿಕೆಲ್ಟನ್ (ಕೀಪರ್‌), ತಿಲಕ್‌, ಸೂರ್ಯ, ವಿಲ್‌ ಜ್ಯಾಕ್ಸ್‌, ಹಾರ್ದಿಕ್‌, ನಮನ್‌/ಮಿನ್ಜ್‌, ದೀಪಕ್‌ ಚಹರ್‌, ಘಜನ್ಫರ್‌/ಸ್ಯಾಂಟ್ನರ್‌, ಕರ್ಣ್‌, ಬೂಮ್ರಾ, ಬೌಲ್ಟ್‌.

----ಚೆನ್ನೈ ಸೂಪರ್‌ ಕಿಂಗ್ಸ್‌

ಹರಾಜಿನಲ್ಲಿ ಚೆನ್ನೈ ತನ್ನ ಹಳೆಯ ಆಟಗಾರರನ್ನು ಖರೀದಿಸುವತ್ತ ಹೆಚ್ಚು ಗಮನ ಹರಿಸಿತು. 10 ವರ್ಷ ಬಳಿಕ ಆರ್‌.ಅಶ್ವಿನ್‌ ತಂಡಕ್ಕೆ ಮರಳಿದರು. ಕಾನ್‌ವೇ, ರಚಿನ್‌, ಕರ್ರನ್‌ ಬಹಳ ಕಡಿಮೆ ಮೊತ್ತಕ್ಕೆ ಸಿಕ್ಕರು. ತಂಡದಲ್ಲಿರುವ ತ್ರಿಪಾಠಿ, ವಿಜಯ್‌ ಶಂಕರ್‌, ನಾಗರಕೋಟಿ, ಹೂಡಾ, ಶ್ರೇಯಸ್‌ ಗೋಪಾಲ್‌ ಐಪಿಎಲ್‌ನಲ್ಲಿ ‘ಮರುಜನ್ಮ’ಕ್ಕಾಗಿ ಎದುರು ನೋಡುತ್ತಿದ್ದಾರೆ. ಬೆಸ್ಟ್‌ ಪ್ಲೇಯಿಂಗ್‌ 12: ಋತುರಾಜ್‌, ಕಾನ್‌ವೇ/ರಚಿನ್‌, ತ್ರಿಪಾಠಿ, ಶಿವಂ ದುಬೆ, ಸ್ಯಾಮ್‌ ಕರ್ರನ್‌, ವಿಜಯ್‌ ಶಂಕರ್‌, ಜಡೇಜಾ, ಧೋನಿ (ಕೀಪರ್‌), ಅಶ್ವಿನ್‌, ನೂರ್‌ ಅಹ್ಮದ್‌/ಎಲ್ಲೀಸ್‌, ಖಲೀಲ್‌/ಗುರ್ಜಪ್ನೀತ್‌, ಪತಿರನ.-----ಸನ್‌ರೈಸರ್ಸ್‌ ಹೈದ್ರಾಬಾದ್‌

ಕಳೆದ ಐಪಿಎಲ್‌ನಲ್ಲಿ ‘ಬೆಂಕಿ’ ಆಟವಾಡಿದ್ದ ಸನ್‌ರೈಸರ್ಸ್‌, ಮುಂದಿನ ವರ್ಷ ಮತ್ತಷ್ಟು ಪ್ರಚಂಡ ಪ್ರದರ್ಶನ ತೋರುವ ನಿರೀಕ್ಷೆ ಮೂಡಿಸಿದೆ. ಅಗ್ರ-5 ಕ್ರಮಾಂಕದಲ್ಲಿ ಆಡುವ ಆಟಗಾರರು ಹಾಗೂ ಬೌಲರ್‌ಗಳು ಬಲಿಷ್ಠವಾಗಿದ್ದಾರೆ. ಆದರೆ ಕೆಳ ಮಧ್ಯಮ ಕ್ರಮಾಂಕದಲ್ಲಿ ಅನುಭವ ಕಡಿಮೆ ಇದ್ದಂತೆ ಕಾಣುತ್ತಿದೆ. ಆದರೂ ಮೇಲ್ನೋಟಕ್ಕೆ ತಂಡ ಅಪಾಯಕಾರಿಯಾಗಿ ತೋರುತ್ತಿದೆ. ಬೆಸ್ಟ್‌ ಪ್ಲೇಯಿಂಗ್‌ 12: ಹೆಡ್‌, ಅಭಿಷೇಕ್‌, ಇಶಾನ್‌ ಕಿಶನ್‌(ಕೀಪರ್‌), ನಿತೀಶ್‌ ರೆಡ್ಡಿ, ಕ್ಲಾಸೆನ್‌, ಅನಿಕೇತ್‌ ವರ್ಮಾ, ಅಭಿನವ್‌ ಮನೋಹರ್‌, ಕಮಿನ್ಸ್‌, ಹರ್ಷಲ್‌, ರಾಹುಲ್‌ ಚಹರ್‌, ಶಮಿ, ಆ್ಯಡಂ ಜಂಪಾ.

----ಕೋಲ್ಕತಾ ನೈಟ್ ರೈಡರ್ಸ್‌

2024ರಲ್ಲಿ ಟ್ರೋಫಿ ಗೆದ್ದ ತಂಡದಲ್ಲಿದ್ದ 6 ಆಟಗಾರರನ್ನು ರಿಟೈನ್‌ ಮಾಡಿಕೊಂಡಿದ್ದ ಕೆಕೆಆರ್‌, ಇನ್ನೂ 6 ಆಟಗಾರರನ್ನು ಹರಾಜಿನಲ್ಲಿ ಖರೀದಿಸಿತು. ವೆಂಕಿ ಅಯ್ಯರ್‌ಗೆ ₹23.75 ಕೋಟಿ ನೀಡಿದ್ದು ಅಚ್ಚರಿ ಮೂಡಿಸಿತು. ಅವರೇ ನಾಯಕರಾಗಬಹುದು. ಸಾಲ್ಟ್‌, ಸ್ಟಾರ್ಕ್‌ ಬದಲು ಡಿ ಕಾಕ್‌, ನೋಕಿಯ/ಸ್ಪೆನ್ಸರ್‌ರನ್ನು ಖರೀದಿಸಿದ್ದು ಅಷ್ಟೇನೂ ಉತ್ತಮ ಎನಿಸಲಿಲ್ಲ. ಬೆಸ್ಟ್‌ ಪ್ಲೇಯಿಂಗ್‌ 12: ನರೈನ್‌, ಡಿ ಕಾಕ್‌/ಗುರ್ಬಾಜ್‌(ಕೀಪರ್‌), ರಘುವಂಶಿ/ರಹಾನೆ, ವೆಂಕಿ ಅಯ್ಯರ್‌, ರಿಂಕು ಸಿಂಗ್, ರಸೆಲ್‌, ರಮಣ್‌ದೀಪ್‌, ಹರ್ಷಿತ್‌, ವರುಣ್‌ ಚಕ್ರವರ್ತಿ, ವೈಭವ್‌, ನೋಕಿಯ/ಸ್ಪೆನ್ಸರ್‌, ಮನೀಶ್‌ ಪಾಂಡೆ.

----ಪಂಜಾಬ್‌

ಕೇವಲ ಇಬ್ಬರು ಅನ್‌ಕ್ಯಾಪ್ಡ್‌ ಆಟಗಾರರನ್ನು ಉಳಿಸಿಕೊಂಡಿದ್ದ ಪಂಜಾಬ್‌, ಹರಾಜಿನಲ್ಲಿ ಭರ್ಜರಿ ಖರೀದಿ ನಡೆಸಿತು. ಶ್ರೇಯಸ್‌ ಅಯ್ಯರ್‌ರನ್ನು ₹26.75 ಕೋಟಿಗೆ ಖರೀದಿಸಿತು. ಪಾಂಟಿಂಗ್‌ ಕೋಚ್‌ ಆಗಿರುವ ಕಾರಣ 8ರ ಪೈಕಿ 5 ವಿದೇಶಿಗರು ಆಸ್ಟ್ರೇಲಿಯಾದವರು. ತಂಡದಲ್ಲಿ ಕೆಲ ಸ್ಫೋಟಕ ಆಟಗಾರರಿದ್ದು, ಸುಧಾರಿತ ಪ್ರದರ್ಶನ ನಿರೀಕ್ಷೆ ಮಾಡಬಹುದು. ಬೆಸ್ಟ್‌ ಪ್ಲೇಯಿಂಗ್‌ 12: ಜೋಶ್‌ ಇಂಗ್ಲಿಸ್‌ (ಕೀಪರ್‌), ಪ್ರಭ್‌ಸಿಮ್ರನ್‌, ಸ್ಟೋಯ್ನಿಸ್‌, ಶ್ರೇಯಸ್‌, ಮ್ಯಾಕ್ಸ್‌ವೆಲ್‌, ವಧೇರಾ, ಶಶಾಂಕ್‌, ಯಾನ್ಸನ್‌, ಹರ್ಪ್ರೀತ್‌, ಯಶ್‌/ಕುಲ್ದೀಪ್‌ ಸೇನ್‌/ವೈಶಾಖ್‌, ಅರ್ಶ್‌ದೀಪ್‌, ಚಹಲ್‌.

---ಲಖನೌ

ರಿಷಭ್‌ ಪಂತ್‌ರನ್ನು ₹27 ಕೋಟಿಗೆ ಖರೀದಿಸಿದ ಲಖನೌ ಅವರನ್ನೇ ನಾಯಕನನ್ನಾಗಿ ನೇಮಿಸಲಿದೆ. ತಂಡದ ಅಗ್ರ-6 ಆಟಗಾರರು ಟಿ20ಯಲ್ಲಿ ಸ್ಫೋಟಕ ಬ್ಯಾಟರ್ಸ್‌ ಎಂದೇ ಹೆಸರುವಾಸಿ. ಆದರೆ ಭಾರತೀಯ ಆರಂಭಿಕ ಬ್ಯಾಟರ್‌ ಕೊರತೆ ಇದೆ. ಬೌಲಿಂಗ್‌ನಲ್ಲೂ ಉತ್ತಮ ಆಯ್ಕೆಗಳಿದ್ದು, ಮುಂದಿನ ಐಪಿಎಲ್‌ನಲ್ಲಿ ಲಖನೌ ತಂಡದ ಮೇಲೆ ಎಲ್ಲರ ಕಣ್ಣಿರಲಿದೆ. ಬೆಸ್ಟ್‌ ಪ್ಲೇಯಿಂಗ್‌ 12: ಮಿಚೆಲ್‌ ಮಾರ್ಷ್‌, ಮಾರ್ಕ್‌ರಮ್‌, ಪಂತ್‌, ಪೂರನ್‌, ಬದೋನಿ, ಮಿಲ್ಲರ್‌, ಶಾಬಾಜ್‌, ಅಬ್ದುಲ್‌ ಸಮದ್‌, ಬಿಷ್ಣೋಯಿ, ಆವೇಶ್‌, ಮೊಹ್ಸಿನ್‌ ಖಾನ್‌, ಮಯಾಂಕ್‌ ಯಾದವ್‌.

ಡೆಲ್ಲಿ ಕ್ಯಾಪಿಟಲ್ಸ್‌

ತಮ್ಮ ಸ್ಟಾರ್‌ ಆಟಗಾರ ಪಂತ್‌ರನ್ನು ಕೈಬಿಟ್ಟು ಅವರಿಗೆ ಸಿಕ್ಕಿದ್ದಕ್ಕಿಂತ ಅರ್ಧದಷ್ಟು ಬೆಲೆಗೆ (₹14 ಕೋಟಿ) ರಾಹುಲ್‌ರನ್ನು ಖರೀದಿಸಿದ ಡೆಲ್ಲಿ, ಈ ಬಾರಿ ಬ್ಯಾಟಿಂಗ್‌ ಜೊತೆ ಬೌಲಿಂಗ್‌ ಪಡೆಯನ್ನೂ ಬಲಿಷ್ಠಗೊಳಿಸಿಕೊಂಡಿದೆ. ಮೇಲ್ನೋಟಕ್ಕೆ ತಂಡ ಸಮತೋಲನದಿಂದ ಕೂಡಿರುವಂತೆ ಕಂಡು ಬರುತ್ತಿದೆ. ರಾಹುಲ್‌ ನಾಯಕನಾಗುವುದು ಬಹುತೇಕ ಖಚಿತ. ಬೆಸ್ಟ್‌ ಪ್ಲೇಯಿಂಗ್‌ 12: ಜೇಕ್‌ ಫ್ರೇಸರ್‌, ರಾಹುಲ್‌, ಪೊರೆಲ್‌ (ಕೀಪರ್‌), ಹ್ಯಾರಿ ಬ್ರೂಕ್‌, ಟ್ರಿಸ್ಟನ್‌ ಸ್ಟಬ್ಸ್‌, ಅಕ್ಷರ್‌, ಅಶುತೋಷ್‌, ಸಮೀರ್‌ ರಿಜ್ವಿ, ಕುಲ್ದೀಪ್‌ ಯಾದವ್‌, ಸ್ಟಾರ್ಕ್‌, ನಟರಾಜನ್‌, ಮುಕೇಶ್‌.

ರಾಜಸ್ಥಾನ ರಾಯಲ್ಸ್‌

ಹರಾಜಿಗೂ ಮುನ್ನ 5 ಬ್ಯಾಟರ್ಸ್‌ ಹಾಗೂ ಕೇವಲ ಒಬ್ಬ ಬೌಲರ್‌ (ಸಂದೀಪ್‌ ಶರ್ಮಾ)ರನ್ನು ಉಳಿಸಿಕೊಂಡಿದ್ದ ರಾಜಸ್ಥಾನ, ಹರಾಜಿನಲ್ಲಿ ಬೌಲರ್‌ಗಳ ಖರೀದಿಗೆ ಪ್ರಾಮುಖ್ಯತೆ ನೀಡಿತು. ಅಶ್ವಿನ್‌, ಚಹಲ್‌ರನ್ನು ಕೈಬಿಟ್ಟು ಪದೇ ಪದೇ ಗಾಯಗೊಳ್ಳುವ ಆರ್ಚರ್‌, ಹಸರಂಗರನ್ನು ಖರೀದಿಸಿದ್ದರ ಬಗ್ಗೆ, ಬಟ್ಲರ್‌ರನ್ನು ಉಳಿಸಿಕೊಳ್ಳದ್ದಕ್ಕೆ ಕೆಲವರಿಂದ ಟೀಕೆ ವ್ಯಕ್ತವಾಗಿದೆ. ಬೆಸ್ಟ್‌ ಪ್ಲೇಯಿಂಗ್‌ 12: ಜೈಸ್ವಾಲ್‌, ಸ್ಯಾಮ್ಸನ್‌ (ಕೀಪರ್‌), ನಿತೀಶ್‌ ರಾಣಾ, ಪರಾಗ್‌, ಧೃವ್‌ ಜುರೆಲ್‌, ಹೆಟ್ಮೇಯರ್‌, ಹಸರಂಗ, ಶುಭಂ ದುಬೆ/ಮಧ್ವಾಲ್‌, ಆರ್ಚರ್‌, ತೀಕ್ಷಣ, ಸಂದೀಪ್‌, ತುಷಾರ್‌.

----ಗುಜರಾತ್‌ ಟೈಟಾನ್ಸ್‌

ಕೆಲ ಘಟಾನುಘಟಿ ಆಟಗಾರರನ್ನು ಖರೀದಿಸಿದ ಗುಜರಾತ್‌, ಹೆಚ್ಚಿನ ಸಂಖ್ಯೆಯಲ್ಲಿ ಗುಣಮಟ್ಟದ ಭಾರತೀಯ ಬೌಲರ್‌ಗಳನ್ನು ಖರೀದಿಸಲು ವಿಫಲವಾಯಿತು. ಮಧ್ಯಮ ಕ್ರಮಾಂಕದಲ್ಲಿ ವಿಸ್ಫೋಟಕ ಆಟವಾಡಬಲ್ಲ ಆಟಗಾರನ ಕೊರತೆ ಎದ್ದು ಕಾಣುತ್ತಿದ್ದು, ತೆವಾಟಿಯಾ, ಶಾರುಖ್‌ ಮೇಲೆ ಹೆಚ್ಚು ಒತ್ತಡ ಬೀಳಬಹುದು. ಒಟ್ಟಾರೆ ತಂಡ ಬಲಿಷ್ಠವಾಗಿ ಕಾಣುತ್ತಿದೆ.ಬೆಸ್ಟ್‌ ಪ್ಲೇಯಿಂಗ್‌ 12: ಬಟ್ಲರ್‌ (ಕೀಪರ್‌), ಗಿಲ್‌, ಸಾಯಿ ಸುದರ್ಶನ್‌, ವಾಷಿಂಗ್ಟನ್‌, ರುಥರ್‌ಫೋರ್ಡ್‌/ಫಿಲಿಪ್ಸ್‌, ತೆವಾಟಿಯಾ, ಶಾರುಖ್‌, ರಶೀದ್‌, ಅರ್ಶದ್‌/ಸಾಯಿ ಕಿಶೋರ್‌/ಲೊಮ್ರೊರ್‌, ರಬಾಡ, ಸಿರಾಜ್‌, ಪ್ರಸಿದ್ಧ್‌.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!