ಐಪಿಎಲ್‌ ಚಾಂಪಿಯನ್‌ ಆರ್‌ಸಿಬಿ ತಂಡ ಖರೀದಿಸಲ್ಲ : ಡಿ.ಕೆ.ಶಿವಕುಮಾರ್‌

Published : Jun 12, 2025, 12:09 PM IST
Dk Shivakumar

ಸಾರಾಂಶ

ಐಪಿಎಲ್‌ ಚಾಂಪಿಯನ್‌ ಆರ್‌ಸಿಬಿ ತಂಡವನ್ನು ಖರೀದಿಸುವ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ

 ಬೆಂಗಳೂರು: ಐಪಿಎಲ್‌ ಚಾಂಪಿಯನ್‌ ಆರ್‌ಸಿಬಿ ತಂಡವನ್ನು ಖರೀದಿಸುವ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ನನಗೇಕೆ ಆರ್‌ಸಿಬಿ ತಂಡ ಬೇಕು? ನಾನು ಆರ್‌ಸಿಬಿಯನ್ನು ಖರೀದಿಸುತ್ತಿಲ್ಲ ಎಂದಿದ್ದಾರೆ.

ಈ ಬಗ್ಗೆ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ‘ನಾನು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಸ್‌ಸಿಎ) ಸದಸ್ಯ ಮಾತ್ರ. ಈ ಹಿಂದೆ ನನಗೆ ಕೆಎಸ್‌ಸಿಎ ಆಡಳಿತ ಮಂಡಳಿ ಸೇರುವ ಆಫರ್ ಬಂದಿತ್ತು. ಆದರೆ ನನಗೆ ಸಮಯವಿಲ್ಲ. ನನ್ನ ಶಿಕ್ಷಣ ಸಂಸ್ಥೆಯನ್ನೇ ನೋಡಿಕೊಳ್ಳಲು ಕುಟುಂಬದ ಬೇರೆ ಸದಸ್ಯರಿಗೆ ಬಿಟ್ಟಿದ್ದೇನೆ. 

ನನಗೆ ಸಮಯವಿಲ್ಲದ ಕಾರಣ ತಾನು ಆರ್‌ಸಿಬಿ ತಂಡವನ್ನು ಖರೀದಿಸುತ್ತಿಲ್ಲ. ನಾನು ರಾಯಲ್ ಚಾಲೆಂಜ್ ವಿಸ್ಕಿಯನ್ನೇ ಕುಡಿಯಲ್ಲ. ನನಗೇಕೆ ಆರ್‌ಸಿಬಿ ಬೇಕು’ ಎಂದು ಮರು ಪ್ರಶ್ನಿಸಿದ್ದಾರೆ.

PREV
Read more Articles on

Recommended Stories

ಪಿಚ್‌ ಕ್ಯುರೇಟರ್‌ ಒರಟು ಮಾತಿಗೆ ಕೆರಳಿದ ಗಂಭೀರ್‌: ಮೈದಾನದಲ್ಲೇ ಮಾತಿನ ಚಕಮಕಿ
ವಯಸ್ಸು ತಿರುಚಿ ವಂಚನೆ : ಲಕ್ಷ್ಯ ಸೇನ್‌ ವಿರುದ್ಧ ಎಫ್‌ಐಆರ್‌ ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌