ಚಂಡೀಗಢ: ಈ ವರೆಗೂ ಐಪಿಎಲ್ನಲ್ಲಿ ಟ್ರೋಫಿ ಗೆಲ್ಲಲು ವಿಫಲರಾಗಿರುವ ಡೆಲ್ಲಿ ಕ್ಯಾಪಿಟಲ್ಸ್-ಪಂಜಾಬ್ ಕಿಂಗ್ಸ್ ತಂಡಗಳು 17ನೇ ಆವೃತ್ತಿ ಟೂರ್ನಿಯಲ್ಲಿ ಶನಿವಾರ ಪರಸ್ಪರ ಮುಖಾಮುಖಿಯಾಗಲಿದ್ದು, ಶುಭಾರಂಭದ ನಿರೀಕ್ಷೆಯಲ್ಲಿದೆ.
ಪಂದ್ಯಕ್ಕೆ ಪಂಜಾಬ್ನ ಹೊಸ ತವರು ಮುಲ್ಲಾನ್ಪುರ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.ನಾಯಕ ರಿಷಭ್ ಪಂತ್ 15 ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳುತ್ತಿರುವುದು ಡೆಲ್ಲಿಗೆ ನೈತಿಕ ಬಲ ಒದಗಿಸಿದೆ. ಆದರೆ ಕಮ್ಬ್ಯಾಕ್ ಪಂದ್ಯದಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬ ಕುತೂಹಲವಿದೆ.
ತಂಡದ ಬ್ಯಾಟಿಂಗ್ ವಿಭಾದ ಬಲಿಷ್ಠವಾಗಿ ತೋರುತ್ತಿದ್ದರೂ ಮೈದಾನದಲ್ಲಿ ಅಬ್ಬರಿಸಬೇಕಾದ ಅಗತ್ಯವಿದೆ. ವಾರ್ನರ್, ಪೃಥ್ವಿ ಶಾ, ಮಿಚೆಲ್ ಮಾರ್ಷ್, ಟ್ರಿಸ್ಟನ್ ಸ್ಟಬ್ಸ್ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.
ಏನ್ರಿಚ್ ನೋಕಿಯಾ, ಇಶಾಂತ್ ಶರ್ಮಾ, ಮುಕೇಶ್ ಕುಮಾರ್ ಇರುವ ವೇಗದ ಬೌಲಿಂಗ್ ಪಡೆಗೆ ಅನುಭವಿಗಳಾದ ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ರಿಂದ ಸೂಕ್ತ ಬೆಂಬಲ ಬೇಕಿದೆ.
ಅತ್ತ ಪಂಜಾಬ್ ಕಳೆದ 5 ಆವೃತ್ತಿಗಳಲ್ಲಿ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕಿಂದ ಮೇಲೇರಿಲ್ಲ. ಶಿಖರ್ ಧವನ್ ನಾಯಕತ್ವದ ತಂಡ ಈ ಬಾರಿ ಅಸಾಧಾರಣ ಪ್ರದರ್ಶನ ನೀಡಬೇಕಿದೆ.
ವೇಗಿಗಳಾದ ಕಗಿಸೊ ರಬಾಡ, ಅರ್ಶ್ದೀಪ್, ಹರ್ಷಲ್ ಪಟೇಲ್ ಜೊತೆ ಲಿವಿಂಗ್ಸ್ಟೋನ್, ಸ್ಯಾಮ್ ಕರ್ರನ್, ಸಿಕಂದರ್ ರಾಜಾ ಅವರಂಥ ತಜ್ಞ ಆಲ್ರೌಂಡರ್ಗಳು ತಂಡದಲ್ಲಿದ್ದಾರೆ. ಧವನ್, ಜಿತೇಶ್, ಬೇರ್ಸ್ಟೋವ್ ಬ್ಯಾಟಿಂಗ್ ಆಧಾರಸ್ತಂಭಗಳು ಎನಿಸಿಕೊಂಡಿದ್ದಾರೆ.
ಒಟ್ಟು ಮುಖಾಮುಖಿ: 32
ಡೆಲ್ಲಿ: 16ಪಂಜಾಬ್: 16
ಸಂಭವನೀಯ ಆಟಗಾರರ ಪಟ್ಟಿ
ಡೆಲ್ಲಿ: ಪೃಥ್ವಿ ಶಾ, ವಾರ್ನರ್, ಮಾರ್ಷ್, ರಿಷಭ್(ನಾಯಕ), ಸ್ಟಬ್ಸ್, ಅಕ್ಷರ್, ಕುಮಾರ್ ಕುಶಾಗ್ರ, ಕುಲ್ದೀಪ್, ಮುಕೇಶ್, ನೋಕಿಯಾ, ಖಲೀಲ್.
ಪಂಜಾಬ್: ಧವನ್(ನಾಯಕ), ಬೇರ್‌ಸ್ಟೋವ್, ಪ್ರಭ್‌ಸಿಮ್ರನ್, ಲಿವಿಂಗ್‌ಸ್ಟೋನ್, ಜಿತೇಶ್, ಕರ್ರನ್, ಹರ್‌ಪ್ರೀತ್, ಹರ್ಷಲ್, ರಬಾಡ, ಅರ್ಶ್‌ದೀಪ್, ಚಹರ್.
ಪಂದ್ಯ: ಮಧ್ಯಾಹ್ನ 3.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಸಿನಿಮಾ