ಐಪಿಎಲ್‌: ಇಂದು ರಾಜಸ್ಥಾನ vs ಪಂಜಾಬ್‌ ಫೈಟ್‌

KannadaprabhaNewsNetwork |  
Published : Apr 13, 2024, 01:06 AM ISTUpdated : Apr 13, 2024, 03:59 AM IST
ಶಿಖರ್‌ ಧವನ್‌ರ ಪಂಜಾಬ್‌ ಕಿಂಗ್ಸ್‌ ಸವಾಲು ಎದುರಿಸಲಿರುವ ಸಂಜು ಸ್ಯಾಮ್ಸನ್‌ರ ರಾಜಸ್ಥಾನ ರಾಯಲ್ಸ್‌.  | Kannada Prabha

ಸಾರಾಂಶ

ರಾಜಸ್ಥಾನ ರಾಯಲ್ಸ್‌ ಮತ್ತೆ ಹಳೇ ಚಾಳಿ ಮುಂದುವರಿಸುತ್ತಾ? ಆರಂಭದಲ್ಲಿ ಅಬ್ಬರಿಸಿ ಆ ಬಳಿಕ ಮಂಕಾಗುವ ರಾಜಸ್ಥಾನ ಗೆಲುವಿನ ಹಳಿಗೆ ಮರಳುತ್ತಾ? ಇಂದು ಎದುರಾಗುವ ಪಂಜಾಬ್‌ ಕಿಂಗ್ಸ್‌ ಸವಾಲು ಗೆಲ್ಲಲು ಸಂಜು ಸ್ಯಾಮ್ಸನ್‌ ಪಡೆಗೆ ಸಾಧ್ಯವಾಗುತ್ತಾ? ರಾಜಸ್ಥಾನ vs ಪಂಜಾಬ್‌ ಕದನ ಕುತೂಹಲ.

ಮುಲ್ಲಾನ್‌ಪುರ: ರಾಜಸ್ಥಾನ ರಾಯಲ್ಸ್‌ ಪ್ರತಿ ಬಾರಿಯಂತೆ ಈ ಸಲವೂ ಆರಂಭದಲ್ಲಿ ಅಬ್ಬರಿಸಿ ಬಳಿಕ ಮಂಕಾಗುತ್ತದೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಶುರುವಾಗಿರುವಾಗಲೇ, ತಂಡಕ್ಕೆ ಶನಿವಾರ ಮಹತ್ವದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಎದುರಾಗಲಿದೆ. 

ಸತತ 4 ಪಂದ್ಯಗಳನ್ನು ಗೆದ್ದಿದ್ದ ರಾಯಲ್ಸ್‌, ಕಳೆದ ಪಂದ್ಯದಲ್ಲಿ ಗುಜರಾತ್‌ಗೆ ಶರಣಾಗಿತ್ತು. ರಾಜಸ್ಥಾನ ಕಳೆದ 6 ಆವೃತ್ತಿಗಳಲ್ಲಿ ಕೇವಲ 2ರಲ್ಲಿ ಪ್ಲೇ-ಆಫ್‌ ಪ್ರವೇಶಿಸಿದ್ದು, ಈ ಸಲ ಪ್ಲೇ-ಆಫ್‌ಗೇರಬೇಕಿದ್ದರೆ, ಜಯದ ಲಯಕ್ಕೆ ಮರಳಬೇಕಿದೆ. 

ತಂಡದ ಬ್ಯಾಟಿಂಗ್‌ ಪಡೆ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಮೊದಲು ಬ್ಯಾಟ್‌ ಮಾಡಿದಾಗ ತಂಡ ಗಳಿಸಿದ ಕನಿಷ್ಠ ಮೊತ್ತವೇ 185 ರನ್‌. ಈ ಪಂದ್ಯದಲ್ಲಿ ಬೌಲಿಂಗ್‌ ಪ್ರದರ್ಶನ ತೋರಬೇಕಿದೆ.ಮತ್ತೊಂದೆಡೆ 5 ಪಂದ್ಯಗಳಲ್ಲಿ 3ರಲ್ಲಿ ಸೋತಿರುವ ಪಂಜಾಬ್‌ ಸ್ಥಿರತೆ ಕಾಯ್ದುಕೊಳ್ಳಬೇಕಿದ್ದು, ತಂಡದಲ್ಲಿ ಕೆಲ ಬದಲಾವಣೆ ಅವಶ್ಯಕತೆಯೂ ಇದೆ. ಶಿಖರ್‌ ಧವನ್‌ ಮೇಲೆ ದೊಡ್ಡನ ನಿರೀಕ್ಷೆ ಇದ್ದು, ಜಾನಿ ಬೇರ್‌ಸ್ಟೋವ್‌, ಜಿತೇಶ್‌ ಶರ್ಮಾ ಲಯ ಕಂಡುಕೊಳ್ಳಬೇಕಿದೆ. ಶಶಾಂಕ್‌ ಸಿಂಗ್‌ ಹಾಗೂ ಅಶುತೋಷ್‌ ಶರ್ಮಾ ಮತ್ತೊಂದು ಅಮೋಘ ಇನ್ನಿಂಗ್ಸ್‌ ಆಡುತ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ಒಟ್ಟು ಮುಖಾಮುಖಿ: 26

ರಾಜಸ್ಥಾನ: 15ಪಂಜಾಬ್‌: 11

ಸಂಭವನೀಯ ಆಟಗಾರರ ಪಟ್ಟಿ

ರಾಜಸ್ಥಾನ: ಜೈಸ್ವಾಲ್‌, ಬಟ್ಲರ್‌, ಸ್ಯಾಮ್ಸನ್‌ (ನಾಯಕ), ರಿಯಾನ್‌, ಹೆಟ್ಮೇಯರ್‌, ಜುರೆಲ್‌, ಅಶ್ವಿನ್‌, ಕೇಶವ್‌, ಬೌಲ್ಟ್‌, ಆವೇಶ್‌, ಕುಲ್ದೀಪ್‌ ಸೇನ್‌, ಚಹಲ್‌.ಪಂಜಾಬ್‌: ಧವನ್‌ (ನಾಯಕ), ಬೇರ್‌ಸ್ಟೋವ್‌, ಪ್ರಭ್‌ಸಿಮ್ರನ್‌, ಕರ್ರನ್‌, ಸಿಕಂದರ್‌, ಶಶಾಂಕ್‌, ಜಿತೇಶ್‌, ಅಶುತೋಷ್‌, ಬ್ರಾರ್‌, ಹರ್ಷಲ್‌, ರಬಾಡ, ಅರ್ಶ್‌ದೀಪ್‌.

ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಆರ್‌ಸಿಬಿ ಖರೀದಿಗೆ ಮ್ಯಾಂಚೆಸ್ಟರ್‌ ಯುನೈಟೆಡ್‌ ಆಸಕ್ತಿ!
ಭಾರತ 6ನೇ ಬಾರಿಗೆ ಅಂಡರ್‌-19 ವಿಶ್ವ ಚಾಂಪಿಯನ್‌