ಐಪಿಎಲ್‌ : ಆರ್‌ಸಿಬಿಯಲ್ಲಿ 2027ರ ತನಕ ಆಡುವ ಬಗ್ಗೆ ಮಾಜಿ ನಾಯಕ ವಿರಾಟ್‌ ಕೊಹ್ಲಿ ಸುಳಿವು!

KannadaprabhaNewsNetwork |  
Published : Nov 04, 2024, 12:15 AM ISTUpdated : Nov 04, 2024, 04:13 AM IST
ಕೊಹ್ಲಿ | Kannada Prabha

ಸಾರಾಂಶ

ವಿರಾಟ್‌ 2008ರ ಚೊಚ್ಚಲ ಆವೃತ್ತಿಯಿಂದಲೂ ಆರ್‌ಸಿಬಿ ಪರ ಆಡುತ್ತಿದ್ದಾರೆ. ಈ ಬಾರಿ ಅವರನ್ನು ಫ್ರಾಂಚೈಸಿಯು 21 ಕೋಟಿ ರು. ನೀಡಿ ರೀಟೈನ್ ಮಾಡಿಕೊಂಡಿದೆ.

ಬೆಂಗಳೂರು: ಐಪಿಎಲ್‌ನ ಆರ್‌ಸಿಬಿ ತಂಡದಲ್ಲೇ 2027ರ ವರೆಗೂ ಮುಂದುವರಿಯುವ ಬಗ್ಗೆ ಮಾಜಿ ನಾಯಕ ವಿರಾಟ್‌ ಕೊಹ್ಲಿ ಸುಳಿವು ನೀಡಿದ್ದಾರೆ. ಈ ಬಗ್ಗೆ ‘ಆರ್‌ಸಿಬಿ ಬೋಲ್ಡ್‌ ಡೈರೀಸ್‌’ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿರುವ ಕೊಹ್ಲಿ, ‘ಆರ್‌ಸಿಬಿ ಪರ ಆಡಲು ಶುರುಮಾಡಿ ಈ ಋತು(2025-27)ವಿನ ಅಂತ್ಯಕ್ಕೆ 20 ವರ್ಷವಾಗಲಿದೆ.

ಇದು ನನಗೆ ತುಂಬಾ ವಿಶೇಷ ಕ್ಷಣ. ನಾನು ಒಂದು ತಂಡದ ಪರ ಇಷ್ಟು ವರ್ಷಗಳ ಕಾಲ ಆಡುತ್ತೇನೆ ಅಂದುಕೊಂಡಿರಲಿಲ್ಲ. ನಾನು ಯಾವತ್ತೂ ಆರ್‌ಸಿಬಿ ಹೊರತುಪಡಿಸಿ ಬೇರೆ ತಂಡದ ಪರ ಆಡುವುದನ್ನು ಚಿಂತಿಸಿಯೇ ಇಲ್ಲ. 

ಈ ಬಾರಿ ಹೊಸ ತಂಡವನ್ನು ಕಟ್ಟುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಿದೆ’ ಎಂದಿದ್ದಾರೆ. ವಿರಾಟ್‌ 2008ರ ಚೊಚ್ಚಲ ಆವೃತ್ತಿಯಿಂದಲೂ ಆರ್‌ಸಿಬಿ ಪರ ಆಡುತ್ತಿದ್ದಾರೆ. ಈ ಬಾರಿ ಅವರನ್ನು ಫ್ರಾಂಚೈಸಿಯು 21 ಕೋಟಿ ರು. ನೀಡಿ ರೀಟೈನ್ ಮಾಡಿಕೊಂಡಿದೆ.

ಏಕದಿನ: ವಿಂಡೀಸ್‌ ವಿರುದ್ಧ ಇಂಗ್ಲೆಂಡ್‌ಗೆ 5 ವಿಕೆಟ್‌ ಜಯ

ಆ್ಯಂಟಿಗಾ: ವೆಸ್ಟ್‌ಇಂಡೀಸ್‌ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ 5 ವಿಕೆಟ್‌ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 6 ವಿಕೆಟ್‌ಗೆ 328 ರನ್‌ ಕಲೆಹಾಕಿತು.

ಶಾಯ್‌ ಹೋಪ್‌ 117, ಕೀಸಿ ಕಾರ್ಟಿ 71, ಶೆರ್ಫಾನೆ ರುಥರ್‌ಫೋರ್ಡ್‌ 54 ರನ್ ಸಿಡಿಸಿದರು. ದೊಡ್ಡ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ನಾಯಕ ಲಿಯಾಮ್‌ ಲಿವಿಂಗ್‌ಸ್ಟೋನ್‌ ಭರ್ಜರಿ ಶತಕದ ನೆರವಿನಿಂದ 47.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ ಜಯಗಳಿಸಿತು. ಲಿವಿಂಗ್‌ಸ್ಟೋನ್‌ 85 ಎಸೆತಗಳಲ್ಲಿ ಔಟಾಗದೆ 124 ರನ್‌ ಸಿಡಿಸಿದರು. ಫಿಲ್‌ ಸಾಲ್ಟ್‌ 59, ಸ್ಯಾಮ್‌ ಕರ್ರನ್‌ 52, ಜೇಕಬ್‌ ಬೆಥೆಲ್‌ 55 ರನ್‌ ಗಳಿಸಿದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!