ಆಡಿರುವ 6 ಪಂದ್ಯಗಳ ಪೈಕಿ 5ರಲ್ಲಿ ಸೋತಿರುವ 5 ಬಾರಿ ಚಾಂಪಿಯನ್ ಚೆನ್ನೈ ತಂಡ ಸೋಮವಾರ ಲಖನೌ ವಿರುದ್ಧ ಆಡಲಿದೆ. ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಪ್ಲೇ-ಆಫ್ ಪ್ರವೇಶಿಸುವ ತಂಡದ ಆಸೆ ಜೀವಂತವಾಗಿ ಉಳಿಯಬೇಕಿದ್ದರೆ ಗೆಲುವು ಅತ್ಯಗತ್ಯ. ಸೋತರೆ ತಂಡದ ಹಾದಿ ಮತ್ತಷ್ಟು ಕಠಿಣಗೊಳ್ಳಲಿದೆ.
ಲಖನೌ: ಆಡಿರುವ 6 ಪಂದ್ಯಗಳ ಪೈಕಿ 5ರಲ್ಲಿ ಸೋತಿರುವ 5 ಬಾರಿ ಚಾಂಪಿಯನ್ ಚೆನ್ನೈ ತಂಡ ಸೋಮವಾರ ಲಖನೌ ವಿರುದ್ಧ ಆಡಲಿದೆ. ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಪ್ಲೇ-ಆಫ್ ಪ್ರವೇಶಿಸುವ ತಂಡದ ಆಸೆ ಜೀವಂತವಾಗಿ ಉಳಿಯಬೇಕಿದ್ದರೆ ಗೆಲುವು ಅತ್ಯಗತ್ಯ. ಸೋತರೆ ತಂಡದ ಹಾದಿ ಮತ್ತಷ್ಟು ಕಠಿಣಗೊಳ್ಳಲಿದೆ.
ಚೆನ್ನೈ ಈ ಬಾರಿ ಎಲ್ಲಾ ವಿಭಾಗದಲ್ಲೂ ವಿಫಲವಾಗಿದೆ. ಬೌಲಿಂಗ್‌ನಲ್ಲಿ ನೂರ್ ಅಹ್ಮದ್, ಖಲೀಲ್ ಅಹ್ಮದ್ ವಿಕೆಟ್ ಪಡೆಯುತ್ತಿದ್ದರೂ, ಇತರರು ಮೊನಚು ದಾಳಿ ಸಂಘಟಿಸುತ್ತಿಲ್ಲ. ಬ್ಯಾಟರ್‌ಗಳು ಒಂದೊಂದು ರನ್ ಗಳಿಸಲೂ ತಿಣುಕಾಡುತ್ತಿದ್ದಾರೆ.
ಮತ್ತೊಂದೆಡೆ ರಿಷಭ್ ಪಂತ್ ನಾಯಕತ್ವದ ಲಖನೌ ಆಡಿರುವ 6 ಪಂದ್ಯಗಳ ಪೈಕಿ 4ರಲ್ಲಿ ಗೆದ್ದಿದೆ. ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್ ಸ್ಫೋಟಕ ಆಟ ತಂಡದ ಪ್ಲಸ್ ಪಾಯಿಂಟ್. ಬೌಲರ್‌ಗಳೂ ಸಂಘಟಿತ ದಾಳಿ ನಡೆಸುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.
ಪಂದ್ಯ: ಸಂಜೆ 7.30ಕ್ಕೆ