ನಿಯಮ ಉಲ್ಲಂಘನೆ: ಜಸ್‌ಪ್ರೀತ್‌ ಬೂಮ್ರಾಗೆ ಐಸಿಸಿಯಿಂದ ಛೀಮಾರಿ

KannadaprabhaNewsNetwork | Updated : Jan 30 2024, 08:40 AM IST

ಸಾರಾಂಶ

ಹೈದರಾಬಾದ್‌ನಲ್ಲಿ ಭಾನುವಾರ ಮುಕ್ತಾಯವಾದ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಐಸಿಸಿ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಭಾರತದ ವೇಗಿ ಜಸ್‌ಪ್ರೀತ್‌ ಬ್ರೂಮಾ ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ.

ದುಬೈ: ಹೈದರಾಬಾದ್‌ನಲ್ಲಿ ಭಾನುವಾರ ಮುಕ್ತಾಯವಾದ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಐಸಿಸಿ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಭಾರತದ ವೇಗಿ ಜಸ್‌ಪ್ರೀತ್‌ ಬ್ರೂಮಾ ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ. 

2ನೇ ಇನ್ನಿಂಗ್ಸ್‌ನ 81 ನೇ ಓವರ್‌ನಲ್ಲಿ ಇಂಗ್ಲೆಂಡ್‌ನ ಓಲಿ ಪೋಪ್‌ ರನ್‌ ಕದಿಯುತ್ತಿದ್ದಾಗ ಉದ್ದೇಶಪೂರ್ವಕವಾಗಿ ಅಡ್ಡಿಯುಂಟು ಮಾಡಿದ್ದು, ಇದನ್ನು ಐಸಿಸಿ ಅನುಚಿತ ರೀತಿಯ ದೈಹಿಕ ಸ್ಪರ್ಶ ಎಂದು ಛೀಮಾರಿ ಹಾಕಿದೆ.

ಆಟಗಾರರು ಹಾಗೂ ಸಿಬ್ಬಂದಿ ಸಂಬಂಧಿಸಿದ ಕಾನೂನಿನ ಸೆಕ್ಷನ್‌ 2.12 ಉಲ್ಲಂಘನೆಯಾಗಿದ್ದು, ಬೂಮ್ರಾ ಕೂಡಾ ಪ್ರಮಾದವನ್ನು ಒಪ್ಪಿಕೊಂಡಿದ್ದಾರೆ.

ಹಾಗಾಗಿ ವಿಚಾರಣೆಯ ಅವಶ್ಯಕತೆ ಇಲ್ಲವೆಂದು ಐಸಿಸಿ ತಿಳಿಸಿದೆ. 24 ತಿಂಗಳ ಅವಧಿಯಲ್ಲಿ ಪ್ರಥಮ ಬಾರಿಗೆ ತಪ್ಪು ಎಸಗಿರುವುದರಿಂದ ಒಂದು ಡಿಮೇರಿಟ್‌ ಅಂಕ ನೀಡಲಾಗಿದೆ. 

ಆನ್‌ಫಿಲ್ಡ್‌ ಅಂಪೈರ್‌ಗಳಾದ ಪೌಲ್‌ ರೈಫೆಲ್‌, ಕ್ರಿಸ್‌ ಗಫಾನಿ ಮತ್ತು ಮೂರನೇ ಅಪೈರ್‌ ಎರಾಸ್ಮಸ್‌, ನಾಲ್ಕನೇ ಅಂಪೈರ್‌ ರೋಹನ್‌ ಪಂಡಿತ್‌ ಅವರು ಬೂಮ್ರಾ ವಿರುದ್ಧ ಆರೋಪ ಮಾಡಿದ್ದರು.

Share this article