ಪ್ಯಾರಾ ಖೇಲೋ ಇಂಡಿಯಾ ಗೇಮ್ಸ್‌: ಕರ್ನಾಟಕದ ಸವಿತಾಗೆ ಟೇಬಲ್‌ ಟೆನಿಸ್‌ನಲ್ಲಿ ಬಂಗಾರದ ಪದಕ

KannadaprabhaNewsNetwork |  
Published : Dec 18, 2023, 02:00 AM IST
ಪ್ಯಾರಾ ಖೇಲೋ ಇಂಡಿಯಾ ಗೇಮ್ಸ್‌ನ ಪ್ಯಾರಾ ಟೇಬಲ್‌ ಟೆನಿಸ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕರ್ನಾಟಕದ ಸವಿತಾ (ಫೋಟೋ: ವಿಶೇಷ ವ್ಯವಸ್ಥೆ)  | Kannada Prabha

ಸಾರಾಂಶ

ಪ್ಯಾರಾ ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಕರ್ನಾಟಕದ ಸವಿತಾಗೆ ಚಿನ್ನದ ಪದಕ. ಚೊಚ್ಚಲ ಆವೃತ್ತಿಯ ಕ್ರೀಡಾಕೂಟಕ್ಕೆ ತೆರೆ. ಒಟ್ಟು 30 ಪದಕಗಳನ್ನು ಬಾಚಿಕೊಂಡ ಕರ್ನಾಟಕ.

- ಚೊಚ್ಚಲ ಆವೃತ್ತಿಯ ಪ್ಯಾರಾ ಖೇಲೋ ಇಂಡಿಯಾಗೆ ತೆರೆ - 7 ಚಿನ್ನ, 10 ಬೆಳ್ಳಿ, 13 ಕಂಚಿನ ಪದಕ ಗೆದ್ದ ಕರ್ನಾಟಕ - 114 ಪದಕಗಳನ್ನು ಗೆದ್ದ ಹರ್ಯಾಣಗೆ ಚಾಂಪಿಯನ್‌ ಪಟ್ಟ ಕನ್ನಡಪ್ರಭ ವಾರ್ತೆ ಬೆಂಗಳೂರುಉದ್ಘಾಟನಾ ಆವೃತ್ತಿಯ ಪ್ಯಾರಾ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ತೆರೆ ಬಿದ್ದಿದ್ದು, ಕರ್ನಾಟಕ ಒಟ್ಟು 30 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಕೂಟದ ಕೊನೆಯ ದಿನವಾದ ಭಾನುವಾರ ಟೇಬಲ್‌ ಟೆನಿಸ್‌ನಲ್ಲಿ ರಾಜ್ಯಕ್ಕೆ 1 ಚಿನ್ನ, 2 ಬೆಳ್ಳಿ, 3 ಕಂಚಿನ ಪದಕಗಳು ದೊರೆತವು.ಮಹಿಳೆಯರ ಕ್ಲಾಸ್‌-8ರ ವಿಭಾಗದಲ್ಲಿ ಸವಿತಾ ಅಜ್ಜನಕಟ್ಟಿ ಚಿನ್ನದ ಪದಕ ಗೆದ್ದರು. ಫೈನಲ್‌ನಲ್ಲಿ ಅವರು ಗುಜರಾತ್‌ನ ಸರಳ ಸೋಲಂಕಿ ವಿರುದ್ಧ 11-5, 11-3, 11-7 ಸೆಟ್‌ಗಳಲ್ಲಿ ಗೆದ್ದರು. ಪುರುಷರ ಕ್ಲಾಸ್‌-7 ವಿಭಾಗದಲ್ಲಿ ಸಂಜೀವ್‌ ಹಮ್ಮಣ್ಣನವರ್, ಕ್ಲಾಸ್‌-8 ವಿಭಾಗದಲ್ಲಿ ಶಶಿಧರ್‌ ಕುಲ್ಕರ್ಣಿ ಬೆಳ್ಳಿಗೆ ತೃಪ್ತಿಪಟ್ಟರೆ, ಮಹಿಳೆಯರ ಕ್ಲಾಸ್‌-7ನಲ್ಲಿ ಮಯಾವ್ವ, ಪುರುಷರ ಕ್ಲಾಸ್‌-7ನಲ್ಲಿ ಸಂಜೀವ್‌ ಕುಮಾರ್‌ ಹಜೇರಿ, ಕ್ಲಾಸ್‌-8 ವಿಭಾಗದಲ್ಲಿ ಅಜಯ್‌ ಜಿ.ವಿ. ಕಂಚಿನ ಪದಕ ಪಡೆದರು.ಕರ್ನಾಟಕ ಕೂಟದಲ್ಲಿ ಒಟ್ಟಾರೆ 7 ಚಿನ್ನ, 10 ಬೆಳ್ಳಿ ಹಾಗೂ 13 ಕಂಚಿನ ಪದಕ ಪಡೆದು, ಪದಕ ಪಟ್ಟಿಯಲ್ಲಿ 9ನೇ ಸ್ಥಾನ ಗಳಿಸಿತು. 40 ಚಿನ್ನ, 39 ಬೆಳ್ಳಿ, 35 ಕಂಚಿನೊಂದಿಗೆ ಒಟ್ಟು 114 ಪದಕ ಗೆದ್ದ ಹರ್ಯಾಣ ಸಮಗ್ರ ಚಾಂಪಿಯನ್‌ ಎನಿಸಿತು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಬಹಿಷ್ಕಾರದಿಂದ ಪಾಕ್‌ ಯೂಟರ್ನ್‌ ?ಭಾರತ ಜತೆ ಟಿ 20 ಪಂದ್ಯದ ಕುರಿತು ಇಂದು ಘೋಷಣೆ ?
ಮುಳುಗುತ್ತಿದ್ದ ಭಾರತಕ್ಕೆ ಬೆಳಕಾದ ‘ಸೂರ್ಯ’!