ಇಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಮಧ್ಯಪ್ರದೇಶ ವಿರುದ್ಧ ರಣಜಿ ಟ್ರೋಫಿ ಗುಂಪು ಹಂತದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಮೊದಲ ದಿನವಾದ ಶುಕ್ರವಾರ ಆತಿಥೇಯ ಮಧ್ಯಪ್ರದೇಶ ತಂಡ 4 ವಿಕೆಟ್‌ಗೆ 232 ರನ್ ಗಳಿಸಿತು.
ಇಂದೋರ್: ಇಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಮಧ್ಯಪ್ರದೇಶ ವಿರುದ್ಧ ರಣಜಿ ಟ್ರೋಫಿ ಗುಂಪು ಹಂತದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಮೊದಲ ದಿನವಾದ ಶುಕ್ರವಾರ ಆತಿಥೇಯ ಮಧ್ಯಪ್ರದೇಶ ತಂಡ 4 ವಿಕೆಟ್‌ಗೆ 232 ರನ್ ಗಳಿಸಿತು.
ರನ್ ಖಾತೆ ತೆರೆಯುವ ಮೊದಲೇ ಹಿಮಾನ್ಶು ಮಂತ್ರಿ ಔಟಾದರೂ, ಹರ್ಪೀತ್ ಸಿಂಗ್(ಔಟಾಗದೆ 75) ಹಾಗೂ ನಾಯಕ ಶುಭಮ್ ಶರ್ಮಾ(40) ತಂಡಕ್ಕೆ ಆಸರೆಯಾದರು. ರಜತ್ ಪಾಟೀದಾರ್ 31, ಶುಭ್ರಾಂಶು ಸೇನಾಪತಿ 28, ವೆಂಕಟೇಶ್ ಅಯ್ಯರ್ ಔಟಾಗದೆ 25 ರನ್ ಗಳಿಸಿದರು. ವಾಸುಕಿ ಕೌಶಿಕ್, ಪ್ರಸಿದ್ಧ್ ಕೃಷ್ಣ, ವೈಶಾಕ್ ಹಾಗೂ ಹಾರ್ದಿಕ್ ರಾಜ್ ತಲಾ 1 ವಿಕೆಟ್ ಕಿತ್ತರು. 2ನೇ ದಿನವಾದ ಶನಿವಾರ ಮಳೆ ಹಾಗೂ ಒದ್ದೆ ಮೈದಾನದಿಂದಾಗಿ ಒಂದೂ ಓವರ್ ಎಸೆಯಲು ಸಾಧ್ಯವಾಗಿಲ್ಲ.