ಅಹಮದಾಬಾದ್: ಟೂರ್ನಿಯುದ್ದಕ್ಕೂ ಪ್ರಾಬಲ್ಯ ಮೆರೆದು ಪ್ಲೇ-ಆಫ್ ಪ್ರವೇಶಿಸಿದ್ದ 2 ಬಾರಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ 17ನೇ ಆವೃತ್ತಿ ಐಪಿಎಲ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮಂಗಳವಾರ ಕ್ವಾಲಿಫೈಯರ್-1 ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೆಕೆಆರ್ 8 ವಿಕೆಟ್ ಭರ್ಜರಿ ಜಯಭೇರಿ ಬಾರಿಸಿ, ಐಪಿಎಲ್ ಇತಿಹಾಸದಲ್ಲೇ 4ನೇ ಬಾರಿ ಫೈನಲ್‌ಗೆ ಎಂಟ್ರಿ ಕೊಟ್ಟಿತು.ಟೂರ್ನಿಯಲ್ಲಿ ಸನ್‌ರೈಸರ್ಸ್‌ನ ಆರ್ಭಟ ಗಮನಿಸಿದ್ದರೆ ನಾಕೌಟ್ ಪಂದ್ಯ ಏಕಮುಖವಾಗಿ ಕೊನೆಗೊಳ್ಳಲಿದೆ ಎಂದು ಯಾರೂ ಭಾವಿಸಿರಲಿಕ್ಕಿಲ್ಲ. ಆದರೆ ನಿಖರ ದಾಳಿ, ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಕೋಲ್ಕತಾ, ಸನ್‌ರೈಸರ್ಸ್‌ನ ಸುಲಭದಲ್ಲಿ ಕಟ್ಟಿಹಾಕಿತು.ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ 19.3 ಓವರಲ್ಲಿ 159ಕ್ಕೆ ಸರ್ವಪತನ ಕಂಡಿತು. ಈ ಮೊತ್ತ ಕೆಕೆಆರ್‌ಗೆ ಸುಲಭ ತುತ್ತಾಯಿತು. 13.4 ಓವರಲ್ಲೇ ಗುರಿ ಬೆನ್ನತ್ತಿ ಗೆಲುವಿನ ಕೇಕೆ ಹಾಕಿತು. 4ನೇ ಓವರಲ್ಲಿ ರಹ್ಮಾನುಲ್ಲಾ ಗುರ್ಬಾಜ್(23), 7ನೇ ಓವರಲ್ಲಿ ನರೈನ್(21) ಔಟಾದರೂ, 3ನೇ ವಿಕೆಟ್‌ಗೆ ಜೊತೆಯಾದ ವೆಂಕಟೇಶ್ ಅಯ್ಯರ್ ಹಾಗೂ ಶ್ರೇಯಸ್ ಅಯ್ಯರ್ ಸನ್‌ರೈಸರ್ಸ್ ಬೌಲರ್‌ಗಳ ಚಳಿ ಬಿಡಿಸಿದರು. ಈ ಜೋಡಿ 44 ಎಸೆತಗಳಲ್ಲೇ 97 ರನ್ ಚಚ್ಚಿತು. ಶ್ರೇಯಸ್ 24 ಎಸೆತಗಳಲ್ಲಿ ಔಟಾಗದೆ 58, ವೆಂಕಟೇಶ್ 28 ಎಸೆಗಳಲ್ಲಿ ಔಟಾಗದೆ 51 ರನ್ ಸಿಡಿಸಿದರು.ಬ್ಯಾಟಿಂಗ್ ವೈಫಲ್ಯ: ಇನ್ನಿಂಗ್ಸ್‌ನ 2ನೇ ಎಸೆತದಲ್ಲೇ ಟ್ರ್ಯಾವಿಸ್ ಹೆಡ್(00), 2ನೇ ಓವರಲ್ಲಿ ಅಭಿಷೇಕ್(03) ವಿಕೆಟ್ ಬಿದ್ದಾಗಲೇ ಸನ್ ಪತನ ಆರಂಭಗೊಂಡಿತ್ತು. 5 ಓವರ್ ವೇಳೆ 4 ವಿಕೆಟ್ ಬಿದ್ದಿತ್ತು. ಪವರ್-ಪ್ಲೇನಲ್ಲೇ ಸನ್‌ರೈಸರ್ಸ್‌ನ ಕಟ್ಟಿಹಾಕುವಲ್ಲಿ ಯಶಸ್ವಿಯಾದ ಕೆಕೆಆರ್ ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆಯಿತು. ಈ ವೇಳೆ ತಂಡಕ್ಕೆ ಆಸರೆಯಾಗಿದ್ದು ರಾಹುಲ್ ತ್ರಿಪಾಠಿ. ಅವರು 35 ಎಸೆತಗಳಲ್ಲಿ 55 ರನ್ ಸಿಡಿಸಿ ತಂಡವನ್ನು ಕಾಪಾಡಿದರು. ಕ್ಲಾಸೆನ್(32), ಕಮಿನ್ಸ್(30) ಆಟ ತಂಡವನ್ನು 150ರ ಗಡಿ ದಾಟಿಸಿತು. ಸ್ಟಾರ್ಕ್ 3 ವಿಕೆಟ್ ಕಬಳಿಸಿದರು.ಸ್ಕೋರ್: ಸನ್‌ರೈಸರ್ಸ್ 19.3 ಓವರಲ್ಲಿ 159/10 (ತ್ರಿಪಾಠಿ 55, ಕ್ಲಾಸೆನ್ 32, ಸ್ಟಾರ್ಕ್ 3-34), ಕೆಕೆಆರ್ 13.4 ಓವರಲ್ಲಿ 164/2 (ಶ್ರೇಯಸ್ 58*, ವೆಂಕಟೇಶ್ 51*, ನಟರಾಜನ್ 1-22)
ಸನ್‌ರೈಸರ್ಸ್‌ಗೆ ಇದೆ ಮತ್ತೊಂದು ಚಾನ್ಸ್ಕೋಲ್ಕತಾ ವಿರುದ್ಧ ಸೋತ ಹೊರತಾಗಿಯೂ ಸನ್‌ರೈಸರ್ಸ್ ಟೂರ್ನಿಯಿಂದ ಹೊರಬಿದ್ದಿಲ್ಲ. ತಂಡಕ್ಕೆ ಫೈನಲ್‌ಗೇರಲು ಮತ್ತೊಂದು ಅವಕಾಶವಿದೆ. ಬುಧವಾರ ನಡೆಯಲಿರುವ ಆರ್‌ಸಿಬಿ ಹಾಗೂ ರಾಜಸ್ಥಾನ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದ ಶುಕ್ರವಾರ ಸನ್‌ರೈಸರ್ಸ್ ಕ್ವಾಲಿಫೈಯರ್-2ರಲ್ಲಿ ಸೆಣಸಲಿದೆ. ಗೆದ್ದರೆ ಫೈನಲ್‌ಗೇರಲಿದೆ.3 ವರ್ಷ ಬಳಿಕ ಫೈನಲ್‌ಗೆ
2012, 2014ರ ಚಾಂಪಿಯನ್ ಕೋಲ್ಕತಾ 2021ರಲ್ಲೂ ಫೈನಲ್‌ಗೇರಿತ್ತು. ಆದರೆ ಚೆನ್ನೈ ವಿರುದ್ಧ ಸೋತು ಪ್ರಶಸ್ತಿ ತಪ್ಪಿಸಿಕೊಂಡಿತ್ತು. 3 ವರ್ಷ ಬಳಿಕ ಮತ್ತೆ ಫೈನಲ್‌ಗೇರಿದೆ.03ನೇ ತಂಡ: ಐಪಿಎಲ್‌ನಲ್ಲಿ 4+ ಬಾರಿ ಫೈನಲ್‌ಗೇರಿದ 3ನೇ ತಂಡ ಕೆಕೆಆರ್. ಚೆನ್ನೈ 10, ಮುಂಬೈ 6 ಬಾರಿ ಫೈನಲ್‌ಗೇರಿದೆ.