ಕೆ.ಎಲ್‌.ರಾಹುಲ್‌ ಆಡಲು ಫಿಟ್‌: ಲಖನೌ ಪರ ಪೂರ್ಣ ಐಪಿಎಲ್‌ಗೆ ಲಭ್ಯ

KannadaprabhaNewsNetwork |  
Published : Mar 19, 2024, 12:49 AM ISTUpdated : Mar 19, 2024, 12:22 PM IST
ಕೆ.ಎಲ್‌.ರಾಹುಲ್‌ | Kannada Prabha

ಸಾರಾಂಶ

ರಾಹುಲ್‌ಗೆ ಸದ್ಯ ಎನ್‌ಸಿಎ ನಿರಾಕ್ಷೇಪಣಾ ಪತ್ರ ನೀಡಿದೆ. ಇಂಗ್ಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದ ವೇಳೆ ಸ್ನಾಯುಸೆಳೆತಕ್ಕೆ ಒಳಗಾಗಿದ್ದ ರಾಹುಲ್‌ ಬಳಿಕ ಬೆಂಗಳೂರಿನ ಎನ್‌ಸಿಎಗೆ ಪುನಶ್ಚೇತನ ಶಿಬಿರಕ್ಕೆ ಹಾಜರಾಗಿದ್ದರು.

ನವದೆಹಲಿ: ಭಾರತದ ತಾರಾ ಕ್ರಿಕೆಟಿಗ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದು, 17ನೇ ಆವೃತ್ತಿ ಐಪಿಎಲ್‌ನ ಆರಂಭದಿಂದಲೇ ಲಖನೌ ತಂಡದ ಪರ ಕಣಕ್ಕಿಳಿಯದ್ದಾರೆ. ಆದರೆ ಮೊದಲ ಕೆಲ ಪಂದ್ಯಗಳಿಗೆ ಅವರು ವಿಕೆಟ್‌ ಕೀಪರ್‌ ಆಗಿ ಆಡುವುದಿಲ್ಲ ಎಂದು ತಿಳಿದುಬಂದಿದೆ. 

ಇಂಗ್ಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದ ವೇಳೆ ಸ್ನಾಯುಸೆಳೆತಕ್ಕೆ ಒಳಗಾಗಿದ್ದ ರಾಹುಲ್‌ ಬಳಿಕ ಬೆಂಗಳೂರಿನ ಎನ್‌ಸಿಎಗೆ ಪುನಶ್ಚೇತನ ಶಿಬಿರಕ್ಕೆ ಹಾಜರಾಗಿದ್ದರು.

ಸದ್ಯ ಅವರಿಗೆ ಎನ್‌ಸಿಎ ನಿರಾಕ್ಷೇಪಣಾ ಪತ್ರ ನೀಡಿದ್ದು, ಐಪಿಎಲ್‌ನಲ್ಲಿ ಆಡಲು ಸಜ್ಜಾಗಿದ್ದಾರೆ. ಲಖನೌ ಮಾ.24ಕ್ಕೆ ರಾಜಸ್ಥಾನ ವಿರುದ್ಧ ಮೊದಲ ಪಂದ್ಯವಾಡಲಿದೆ.

ಲಂಕಾ ವಿರುದ್ಧ ಏಕದಿನ ಸರಣಿ ಗೆದ್ದ ಬಾಂಗ್ಲಾ

ಚಿತ್ತಗಾಂಗ್‌: ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಬಾಂಗ್ಲಾದೇಶ 2-1 ಅಂತರದಲ್ಲಿ ಕೈ ವಶಪಡಿಸಿಕೊಂಡಿದೆ. ಸೋಮವಾರ ನಡೆದ ಕೊನೆ ಪಂದ್ಯದಲ್ಲಿ ಬಾಂಗ್ಲಾಕ್ಕೆ 4 ವಿಕೆಟ್‌ ಗೆಲುವು ಲಭಿಸಿತು. ಮೊದಲು ಬ್ಯಾಟ್‌ ಮಾಡಿದ ಲಂಕಾ 50 ಓವರಲ್ಲಿ 235ಕ್ಕೆ ಆಲೌಟಾಯಿತು.

 ಜನಿತ್‌ ಲಿಯನಗೆ ಔಟಾಗದೆ 101 ರನ್‌ ಸಿಡಿಸಿ ತಂಡಕ್ಕೆ ಆಸರೆಯಾದರು. ಸ್ಪಧಾತ್ಮಕ ಗುರಿ ಬೆನ್ನತ್ತಿದ ಬಾಂಗ್ಲಾ 40.2 ಓವರಲ್ಲಿ 6 ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು. 

ತಂಜೀದ್‌ ಹಸನ್‌ 84 ರನ್ ಗಳಿಸಿದರೆ, ರಿಶಾದ್ ಹೊಸೈನ್‌ ಕೇವಲ 18 ಎಸೆತಗಳಲ್ಲಿ 48 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ