ಚಿನ್ನಸ್ವಾಮಿಯಲ್ಲಿ ರನ್‌ ಮೆಷಿನ್‌ ಖ್ಯಾತಿಯ ವಿರಾಟ್‌ ಕೊಹ್ಲಿ 3500 ರನ್‌ ಮೈಲುಗಲ್ಲು : ವಿಶೇಷ ಸಾಧನೆ

KannadaprabhaNewsNetwork |  
Published : Apr 25, 2025, 12:34 AM ISTUpdated : Apr 25, 2025, 04:13 AM IST
ಕೊಹ್ಲಿ  | Kannada Prabha

ಸಾರಾಂಶ

ಕೊಹ್ಲಿ, ಇಲ್ಲಿ ಟಿ20 ಕ್ರಿಕೆಟ್‌ನಲ್ಲಿ 3500 ರನ್‌ಗಳನ್ನು ಕಲೆಹಾಕಿ ವಿಶೇಷ ಸಾಧನೆ ಮಾಡಿದ್ದಾರೆ. ಇದರೊಂದಿಗೆ ವಿಶ್ವದ ಯಾವುದೇ ಕ್ರೀಡಾಂಗಣದಲ್ಲಿ 3500 ರನ್‌ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು.

  ಬೆಂಗಳೂರು :  ರನ್‌ ಮೆಷಿನ್‌ ಖ್ಯಾತಿಯ ವಿರಾಟ್‌ ಕೊಹ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. 2008ರ ಚೊಚ್ಚಲ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ತಂಡ ಸೇರ್ಪಡೆಗೊಂಡ ಬಳಿಕ ನಗರದ ಚಿನ್ನಸ್ವಾಮಿ ಕ್ರೀಡಾಂಗಣವನ್ನು ತಮ್ಮ ಸಾಮ್ರಾಜ್ಯವನ್ನಾಗಿ ಮಾಡಿಕೊಂಡಿರುವ ಕೊಹ್ಲಿ, ಇಲ್ಲಿ ಟಿ20 ಕ್ರಿಕೆಟ್‌ನಲ್ಲಿ 3500 ರನ್‌ಗಳನ್ನು ಕಲೆಹಾಕಿ ವಿಶೇಷ ಸಾಧನೆ ಮಾಡಿದ್ದಾರೆ. ಇದರೊಂದಿಗೆ ವಿಶ್ವದ ಯಾವುದೇ ಕ್ರೀಡಾಂಗಣದಲ್ಲಿ 3500 ರನ್‌ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು.

ಗುರುವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧ ಪಂದ್ಯದ 3ನೇ ಓವರ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ಅವರು ಈ ಮೈಲುಗಲ್ಲು ತಲುಪಿದರು. ಪಂದ್ಯದಲ್ಲಿ 42 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್‌ನೊಂದಿಗೆ 70 ರನ್‌ಗೆ ಔಟಾಗಿ, ಒಟ್ಟಾರೆ ಚಿನ್ನಸ್ವಾಮಿ ಕ್ರೀಡಾಂಗಣದ ಗಳಿಕೆಯನ್ನು 3556ಕ್ಕೆ ಹೆಚ್ಚಿಸಿದರು. ಅವರು ಈ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆರ್‌ಸಿಬಿ ಪರ ಒಟ್ಟು 108 ಪಂದ್ಯಗಳನ್ನಾಡಿದ್ದಾರೆ. ಈ ಪೈಕಿ 105 ಇನ್ನಿಂಗ್ಸ್‌ಗಳಲ್ಲಿ 39.07ರ ಸರಾಸರಿಯಲ್ಲಿ ರನ್‌ ಕಲೆಹಾಕಿದ್ದಾರೆ. ಇಲ್ಲಿ 4 ಶತಕ, 26 ಅರ್ಧಶತಕ ಬಾರಿಸಿದ್ದು, 113 ಗರಿಷ್ಠ ಸ್ಕೋರ್‌.

ಇನ್ನು, ಟಿ20 ಕ್ರಿಕೆಟ್‌ನಲ್ಲಿ ಯಾವುದೇ ಕ್ರೀಡಾಂಗಣದಲ್ಲಿ ಗರಿಷ್ಠ ರನ್‌ ಸರದಾರರ ಪಟ್ಟಿಯಲ್ಲಿ ಬಾಂಗ್ಲಾದೇಶದ ಮುಷ್ಫಿಕುರ್‌ ರಹೀಂ 2ನೇ ಸ್ಥಾನದಲ್ಲಿದ್ದಾರೆ. ಅವರು ಬಾಂಗ್ಲಾದೇಶದ ಢಾಕಾ ಕ್ರೀಡಾಂಗಣದಲ್ಲ 3373 ರನ್‌ ಗಳಿಸಿದ್ದಾರೆ. ಇಂಗ್ಲೆಂಡ್‌ನ ಜೇಮ್ಸ್‌ ವಿನ್ಸ್‌ ಸೌಥಾಂಪ್ಟಮ್‌ನಲ್ಲಿ 3253, ಅಲೆಕ್ಸ್‌ ಹೇಲ್ಸ್‌ ನಾಟಿಂಗ್‌ಹ್ಯಾಮ್‌ನಲ್ಲಿ 3241, ಬಾಂಗ್ಲಾದೇಶದ ತಮೀಮ್‌ ಇಕ್ಬಾಲ್‌ ಢಾಕಾ ಕ್ರೀಡಾಂಗಣದಲ್ಲಿ 3238, ಮಹ್ಮೂದುಲ್ಲಾ ಢಾಕಾ ಕ್ರೀಡಾಂಗಣದಲ್ಲಿ 3150 ರನ್‌ ಕಲೆಹಾಕಿದ್ದಾರೆ. ಬೇರೆ ಯಾವುದೇ ಆಟಗಾರರು ನಿರ್ದಿಷ್ಟ ಕ್ರೀಡಾಂಗಣವೊಂದರಲ್ಲಿ 3000ಕ್ಕಿಂತ ಹೆಚ್ಚು ರನ್‌ ಗಳಿಸಿಲ್ಲ.----ಈ ಬಾರಿ 9 ಪಂದ್ಯದಲ್ಲಿ

ಕೊಹ್ಲಿ 5ನೇ ಅರ್ಧಶತಕ

ವಿರಾಟ್‌ ಕೊಹ್ಲಿ ತಮ್ಮ ಅಭೂತಪೂರ್ವ ಪ್ರದರ್ಶನವನ್ನು ರಾಜಸ್ಥಾನ ವಿರುದ್ಧ ಪಂದ್ಯದಲ್ಲೂ ಮುಂದುವರಿಸಿದರು. ಅವರು 70 ರನ್‌ ಗಳಿಸಿ ಔಟಾದರು. ಇದು ಟೂರ್ನಿಯಲ್ಲಿ ಕೊಹ್ಲಿ ಗಳಿಸಿದ 5ನೇ ಅರ್ಧಶತಕ. ಆರಂಭಿಕ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ 59 ರನ್‌ ಗಳಿಸಿದ್ದ ಕೊಹ್ಲಿ, ಮುಂಬೈ ವಿರುದ್ಧ ವಾಂಖೆಡೆಯಲ್ಲಿ 67 ರನ್‌ ಬಾರಿಸಿದ್ದರು. ಬಳಿಕ ರಾಜಸ್ಥಾನ ವಿರುದ್ಧ ಜೈಪುರಲ್ಲಿ ಔಟಾಗದೆ 62, ಪಂಜಾಬ್‌ ವಿರುದ್ಧ ಚಂಡೀಗಢದಲ್ಲಿ ಔಟಾಗದೆ 73 ರನ್‌ ಗಳಿಸಿದ್ದರು. ಟೂರ್ನಿಯಲ್ಲಿ ಮೊದಲ ಬಾರಿ ಚಿನ್ನಸ್ವಾಮಿಯಲ್ಲಿ ಅವರು ಅರ್ಧಶತಕದ ಗಡಿ ದಾಟಿದರು.--

ತವರಲ್ಲಿ ಸತತ 4ನೇ

ಟಾಸ್‌ ಸೋತ ರಜತ್‌

ಆರ್‌ಸಿಬಿ ತವರಿನ ಆರಂಭಿಕ 3 ಪಂದ್ಯಗಳಲ್ಲೂ ಸೋತಿದ್ದರ ಹಿಂದೆ ಟಾಸ್‌ ಸೋಲು ಕೂಡಾ ಪ್ರಮುಖ ಪಾತ್ರ ವಹಿಸಿತ್ತು. ಗುರುವಾರ ರಾಜಸ್ಥಾನ ವಿರುದ್ಧವೂ ರಜತ್‌ಗೆ ಟಾಸ್‌ ಗೆಲ್ಲುವ ಅದೃಷ್ಟವಿರಲಿಲ್ಲ. ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತತ 4ನೇ ಸೋಲು ಕಂಡಿತು. ಎಲ್ಲಾ 4 ಪಂದ್ಯಗಳಲ್ಲೂ ಟಾಸ್‌ ಗೆದ್ದ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿವೆ.--

04ನೇ ಬಾರಿ

ಕೊಹ್ಲಿ ಹಾಗೂ ಸಾಲ್ಟ್‌ ಈ ಬಾರಿ ಐಪಿಎಲ್‌ನಲ್ಲಿ ಮೊದಲ ವಿಕೆಟ್‌ಗೆ 4ನೇ ಬಾರಿ 50+ ರನ್‌ ಜೊತೆಯಾಟವಾಡಿದರು. --

ಮೊದಲ ಇನ್ನಿಂಗ್ಸ್‌ನಲ್ಲಿ

62 ಫಿಫ್ಟಿ: ಪಾಕ್‌ನ ಆಜಂ

ದಾಖಲೆ ಮುರಿದ ಕೊಹ್ಲಿ

ಟಿ20 ಕ್ರಿಕೆಟ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿ ಅತಿ ಹೆಚ್ಚು ಬಾರಿ ಅರ್ಧಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನಕ್ಕೇರಿದರು. ಅವರು ಪಾಕಿಸ್ತಾನ ಬಾಬರ್‌ ಆಜಂರನ್ನು ಹಿಂದಿಕ್ಕಿದರು. ಆಜಂ 61 ಬಾರಿ ಈ ಸಾಧನೆ ಮಾಡಿದ್ದು, ಕೊಹ್ಲಿ 62 ಅರ್ಧಶತಕ ಬಾರಿಸಿದ್ದಾರೆ. ಉಳಿದಂತೆ ಕ್ರಿಸ್‌ ಗೇಲ್‌ 57, ಡೇವಿಡ್‌ ವಾರ್ನರ್‌ 55, ಜೋಸ್‌ ಬಟ್ಲರ್‌ 52, ಫಾಫ್‌ ಡು ಪ್ಲೆಸಿ 52 ಬಾರಿ ಫಿಫ್ಟಿ ಪ್ಲಸ್‌ ಸ್ಕೋರ್‌ ಗಳಿಸಿದ್ದಾರೆ.--

ಚಿನ್ನಸ್ವಾಮಿಯಲ್ಲಿ ಈ

ಸಲ ಮೊದಲ 200

ಚಿನ್ನಸ್ವಾಮಿ ಕ್ರೀಡಾಂಗಣ ಈ ಬಾರಿ ಮೊದಲ 200+ ಸ್ಕೋರ್‌ಗೆ ಸಾಕ್ಷಿಯಾಯಿತು. ರಾಜಸ್ಥಾನ ವಿರುದ್ಧ ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 5 ವಿಕೆಟ್‌ಗೆ 205 ರನ್‌ ಗಳಿಸಿತು. ಆರಂಭಿಕ 3 ಪಂದ್ಯಗಳಲ್ಲಿ ಒಮ್ಮೆಯೂ 170ಕ್ಕಿಂತ ಹೆಚ್ಚು ರನ್‌ ದಾಖಲಾಗಿರಲಿಲ್ಲ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಭಾರತ 5-0 ಸರಣಿ ಕ್ಲೀನ್‌ ಸ್ವೀಪ್‌! - ಶ್ರೀಲಂಕಾ ವಿರುದ್ಧ 5ನೇ ಟಿ20 ಪಂದ್ಯದಲ್ಲಿ 15 ರನ್‌ ಗೆಲುವು
ಕರ್ನಾಟಕಕ್ಕೆ ಹ್ಯಾಟ್ರಿಕ್‌ ಜಯ