ಜೋಗ, ಸೋಮನಾಥಪುರಕ್ಕೆ ಕೆಎಸ್ಸಾರ್ಟಿಸಿ ಪ್ಯಾಕೇಜ್‌ ಟೂರ್‌

ಸಾರಾಂಶ

ಪ್ರವಾಸ ಪ್ರಿಯರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿಯಿಂದ ಜೋಗ ಜಲಪಾತ ಹಾಗೂ ಸೋಮನಾಥಪುರಕ್ಕೆ ವಿಶೇಷ ಪ್ಯಾಕೇಜ್‌ ಟೂರ್‌ ಸೇವೆ ಆರಂಭಿಸಲಾಗುತ್ತಿದೆ.

ಬೆಂಗಳೂರು :  ಪ್ರವಾಸ ಪ್ರಿಯರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿಯಿಂದ ಜೋಗ ಜಲಪಾತ ಹಾಗೂ ಸೋಮನಾಥಪುರಕ್ಕೆ ವಿಶೇಷ ಪ್ಯಾಕೇಜ್‌ ಟೂರ್‌ ಸೇವೆ ಆರಂಭಿಸಲಾಗುತ್ತಿದೆ.

ಜು.19ರಿಂದ ಪ್ರತಿ ಶುಕ್ರವಾರ ಮತ್ತು ಶನಿವಾರದಂದು ಬೆಂಗಳೂರಿನಿಂದ ಶಿವಮೊಗ್ಗದ ಜೋಗ ಜಲಪಾತಕ್ಕ ಪ್ಯಾಕೇಜ್‌ ಟೂರ್‌ ಸೇವೆ ಆರಂಭವಾಗಲಿದೆ. ನಾನ್‌ ಎಸಿ ಸ್ಲೀಪರ್‌ ಬಸ್‌ನಲ್ಲಿ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತಿದ್ದು, ಬೆಂಗಳೂರಿನಿಂದ ರಾತ್ರಿ 10.30 ಮತ್ತು ಬೆಳಗ್ಗೆ 5.30ಕ್ಕೆ ಬಸ್‌ಗಳು ಹೊರಡಲಿವೆ. ಈ ಪ್ಯಾಕೇಜ್‌ ಟೂರ್‌ನಲ್ಲಿ ಸಾಗರದ ವರದಾ ನದಿಯ ಮೂಲ, ಕೆಳದಿ, ಇಕ್ಕೇರಿ ಹಾಗೂ ಜೋಗ ಜಲಪಾತ ವೀಕ್ಷಣೆ ಮಾಡಿಸಲಾಗುತ್ತದೆ. ವಯಸ್ಕರಿಗೆ 3 ಸಾವಿರ ರು. ಹಾಗೂ 6ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ 2,800 ರು. ಪ್ರಯಾಣ ದರ ನಿಗದಿ ಮಾಡಲಾಗಿದೆ.

ಜು.20ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಬೆಂಗಳೂರು-ಸೋಮನಾಥಪುರ ನಡುವೆ ಪ್ಯಾಕೇಜ್‌ ಟೂರ್‌ ಆರಂಭಿಸಲಾಗುತ್ತಿದೆ. ಈ ಪ್ಯಾಕೇಜ್‌ ಟೂರ್‌ ಬೆಳಗ್ಗೆ 6.30 ಮತ್ತು 8.30ಕ್ಕೆ ಆರಂಭವಾಗಲಿದೆ. ಬೆಂಗಳೂರಿನಿಂದ ಹೊರಟು, ಸೋಮನಾಥಪುರ, ತಲಕಾಡು, ಮಧ್ಯರಂಗ ದೇವಸ್ಥಾನಗಳು, ಭರಚುಕ್ಕಿ ಹಾಗೂ ಗಗನಚುಕ್ಕಿ ಜಲಪಾತ ವೀಕ್ಷಿಸಿ ಸಂಜೆ 6.15 ಮತ್ತು ರಾತ್ರಿ 9 ಗಂಟೆಗೆ ವಾಪಾಸು ಬೆಂಗಳೂರಿಗೆ ಕರೆತರಲಾಗುತ್ತದೆ. ವಯಸ್ಕರಿಗೆ 500 ರು. , ಮಕ್ಕಳಿಗೆ 350 ರು. ಪ್ರಯಾಣ ದರ ನಿಗದಿ ಮಾಡಲಾಗಿದೆ.

Share this article