ಮಹಾರಾಜ ಟ್ರೋಫಿ ಟಿ 20 ಟೂರ್ನಿ : ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ ಹುಬ್ಬಳ್ಳಿ ಟೈಗರ್ಸ್‌ಗೆ ಹ್ಯಾಟ್ರಿಕ್‌ ಗೆಲುವು

KannadaprabhaNewsNetwork |  
Published : Aug 20, 2024, 12:46 AM ISTUpdated : Aug 20, 2024, 04:12 AM IST
ವಿದ್ವತ್‌ ಕಾವೇರಪ್ಪ | Kannada Prabha

ಸಾರಾಂಶ

ಮೊದಲ ಸೋಲುಂಡ ಬೆಂಗಳೂರು ಬ್ಲಾಸ್ಟರ್ಸ್‌. ಬೆಂಗಳೂರು ನೀಡಿದ್ದ ಸುಲಭ ಗುರಿಯನ್ನು ಮನೀಶ್‌ ಪಾಂಡೆ ನಾಯಕತ್ವದ ಹುಬ್ಬಳ್ಳಿ 18.5 ಓವರ್‌ಗಳಲ್ಲಿ ಬೆನ್ನತ್ತಿ ಜಯಗಳಿಸಿತು.

ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಹುಬ್ಬಳ್ಳಿ ಟೈಗರ್ಸ್‌ ಹ್ಯಾಟ್ರಿಕ್‌ ಗೆಲುವು ಸಾಧಿಸಿದೆ. ಸೋಮವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ ಹುಬ್ಬಳ್ಳಿ 5 ವಿಕೆಟ್ ಜಯಗಳಿಸಿತು. ಬೆಂಗಳೂರು ಟೂರ್ನಿಯ ಮೊದಲ ಸೋಲುಂಡಿತು.

ಮೊದಲು ಬ್ಯಾಟ್‌ ಮಾಡಿದ ಬೆಂಗಳೂರು 19.5 ಓವರ್‌ಗಳಲ್ಲಿ 142 ರನ್‌ಗೆ ಆಲೌಟಾಯಿತು. ಎಲ್‌.ಆರ್‌.ಚೇತನ್‌ 35 ಎಸೆತಗಳಲ್ಲಿ 48, ಶುಭಾಂಗ್‌ ಹೆಗ್ಡೆ 36 ಎಸೆತಗಳಲ್ಲಿ ಔಟಾಗದೆ 52 ರನ್‌ ಸಿಡಿಸಿ ತಂಡವನ್ನು ಕಾಪಾಡಿದರು. ಬೇರೆ ಯಾರೂ ತಂಡಕ್ಕೆ ನೆರವಾಗಲಿಲ್ಲ. ವಿದ್ವತ್‌ ಕಾವೇರಪ್ಪ ಹಾಗೂ ಮನ್ವಂತ್‌ ತಲಾ 3 ವಿಕೆಟ್‌ ಕಿತ್ತರು.ಸುಲಭ ಗುರಿಯನ್ನು ಮನೀಶ್‌ ಪಾಂಡೆ ನಾಯಕತ್ವದ ಹುಬ್ಬಳ್ಳಿ 18.5 ಓವರ್‌ಗಳಲ್ಲಿ ಬೆನ್ನತ್ತಿ ಜಯಗಳಿಸಿತು. ತಿಪ್ಪಾ ರೆಡ್ಡಿ 37 ಎಸೆತಗಳಲ್ಲಿ 47, ಕೃಷ್ಣನ್‌ ಶ್ರೀಜಿತ್‌ 41 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು. ಕ್ರಾಂತಿ ಕುಮಾರ್‌ 3 ವಿಕೆಟ್‌ ಕಿತ್ತರು.

ಇಂದಿನ ಪಂದ್ಯಗಳು

ಶಿವಮೊಗ್ಗ -ಹುಬ್ಬಳ್ಳಿ, ಮಧ್ಯಾಹ್ನ 3ಕ್ಕೆ । ಗುಲ್ಬರ್ಗಾ-ಮಂಗಳೂರು, ಸಂಜೆ 7ಕ್ಕೆ-

ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌: ಭಾರತದ ಕ್ರೀಡಾಳುಗಳಿಗೆ ಶುಭ ಹಾರೈಸಿದ ಮೋದಿ

ನವದೆಹಲಿ: ಮುಂಬರುವ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ.

 ಅವರು ಸೋಮವಾರ ಭಾರತದ ಅಥ್ಲೀಟ್‌ಗಳ ಜೊತೆ ವರ್ಚುವಲ್‌ ಸಂವಾದದಲ್ಲಿ ಪಾಲ್ಗೊಂಡರು. ‘ನಿಮ್ಮ ಪಯಣ ನಿಮಗೆ ಮಾತ್ರವಲ್ಲ, ಇಡೀ ದೇಶಕ್ಕೆ ಮುಖ್ಯವಾದದ್ದು. ನೀವು ಪ್ಯಾರಿಸ್‌ನಲ್ಲಿ ಸಾಧನೆ ಮಾಡಿದರೆ ಭಾರತೀಯರು ಇಲ್ಲಿ ಹೆಮ್ಮೆ ಪಡುತ್ತಾರೆ. ಇಡೀ ದೇಶವೇ ನಿಮ್ಮ ಬೆಂಬಲಕ್ಕಿದೆ. 140 ಕೋಟಿ ಭಾರತೀಯರ ಆಶೀರ್ವಾದ ನಿಮ್ಮ ಮೇಲಿದೆ. 

ಏಷ್ಯನ್‌ ಪಾರಾಲಿಂಪಿಕ್ಸ್‌, ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದ ಹಾಗೆ ಪ್ಯಾರಿಸ್‌ನಲ್ಲೂ ಹೊಸ ದಾಖಲೆ ಸೃಷ್ಟಿಸಿ’ ಎಂದು ಅವರು ಹಾರೈಸಿದ್ದಾರೆ. ಕೆಲ ಅಥ್ಲೀಟ್‌ಗಳ ಜೊತೆ ಮುಕ್ತವಾಗಿ ಮಾತನಾಡಿದ ಅವರು, ಯಾವುದೇ ಒತ್ತಡಕ್ಕೊಳಗಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು. ಈ ಬಾರಿ ಪ್ಯಾರಾಲಿಂಪಿಕ್ಸ್‌ ಆ.28ರಿಂದ ಸೆ.8ರ ವರೆಗೆ ನಡೆಯಲಿದೆ.

PREV

Recommended Stories

ಅದ್ದೂರಿಯಾಗಿ ಡಾ. ವಿಷ್ಣುವರ್ಧನ್‌ 75ನೇ ಹುಟ್ಟುಹಬ್ಬ ಆಚರಣೆ
ಪಾಕ್‌ ಕದನಕ್ಕೂ ಮುನ್ನ ಭಾರತಕ್ಕೆ ಇಂದು ಒಮಾನ್‌ ವಿರುದ್ಧ ‘ಅಭ್ಯಾಸ’