ವರ್ಲ್ಡ್ ಟೆನಿಸ್‌ ಟೂರ್‌ನಲ್ಲಿ ಮಂಡ್ಯದ ಕಶ್ವಿ ಸುನಿಲ್ ಚಾಂಪಿಯನ್‌

KannadaprabhaNewsNetwork |  
Published : Mar 15, 2024, 01:18 AM IST
೧೪ಕೆಎಂಎನ್‌ಡಿ-೪ತಮಿಳುನಾಡಿನ ಮಧುರೈನಲ್ಲಿ ನಡೆದ ಅಂತಾರಾಷ್ಟ್ರೀಯ ಟೆನ್ನಿಸ್ ವರ್ಲ್ಡ್ ರ್ಯಾಂಕಿಂಗ್ ಪಂದ್ಯಾವಳಿಯಲ್ಲಿ ಕಶ್ವಿ ಸುನಿಲ್ ಆಟದ ದೃಶ್ಯ. | Kannada Prabha

ಸಾರಾಂಶ

ಅಂಡರ್‌-18 ಮಹಿಳಾ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಭಾರತದವರೇ ಆದ ಹರ್ಷಿಣಿ ನಾಗರಾಜ್ ವಿರುದ್ಧ 2-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದ ಕಶ್ವಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ ವತಿಯಿಂದ ತಮಿಳುನಾಡಿನ ಮಧುರೈ ನಗರದಲ್ಲಿ ಮಾ.3ರಿಂದ ಮಾ.9ರವರೆಗೆ ನಡೆದ ಕಿರಿಯರ ವರ್ಲ್ಡ್ ಟೆನಿಸ್‌ ಟೂರ್‌ನಲ್ಲಿ ಮಂಡ್ಯದ ಕಶ್ವಿ ಸುನಿಲ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಮಾ.9ರಂದು ನಡೆದ ಅಂಡರ್‌-18 ಮಹಿಳಾ ಸಿಂಗಲ್ಸ್‌ ವಿಭಾಗದ ಫೈನಲ್ ಪಂದ್ಯಾವಳಿಯಲ್ಲಿ ಭಾರತದವರೇ ಆದ ಹರ್ಷಿಣಿ ನಾಗರಾಜ್ ವಿರುದ್ಧ ಕಶ್ವಿ ಗೆಲುವು ಸಾಧಿಸಿದ್ದಾರೆ. ಮೊದಲ ಸೆಟ್‌ನಲ್ಲಿ 5-7ರಿಂದ ಹಿನ್ನಡೆ ಅನುಭವಿಸಿದರೂ ಬಳಿಕ 2 ಸೆಟ್‌ಗಳಲ್ಲಿ 7-5, 6-3ರಲ್ಲಿ ಗೆಲುವು ಸಾಧಿಸಿದರು.

ಕಳೆದ ವರ್ಷ ನಡೆದ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಸೆಮಿಫೈನಲ್‌ನಲ್ಲಿ ಹೊರಬಿದ್ದಿದ್ದ ಮಂಡ್ಯದ ಪ್ರತಿಭೆ ಕಶ್ವಿ ಸುನಿಲ್ ತರಬೇತುದಾರರಾದ ಮಂಜುನಾಥ್‌ರವರ ಕಠಿಣ ಪರಿಶ್ರಮದಿಂದ ಈ ಬಾರಿ ವಿಜಯ ಸಾಧಿಸಿದ್ದಾರೆ.

ಪಂದ್ಯಾವಳಿಯ ಪ್ರಥಮ ಸುತ್ತಿನಲ್ಲಿ ಶೈನಿ ಗೌರವ್ ದಲಾಲ್ ವಿರುದ್ಧ 7-5, 6-3 ರಲ್ಲಿ ಗೆದ್ದು, ಎರಡನೇ ಸುತ್ತಿನಲ್ಲಿ ಧನಶ್ರೀ ಪಾಟೀಲ್‌ರನ್ನು 6-1, 6-2ರಲ್ಲಿ ಮಣಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಅಸ್ಮಿ ಆಡ್ಕರ್ ಅವರನ್ನು 6-1, 6-1 ರಿಂದ ಪರಾಭವಗೊಳಿಸಿ ಸೆಮಿಫೈನಲ್‌ನಲ್ಲಿ ಮೇಘನಾರನ್ನು 6-2, 6-3ರಲ್ಲಿ ಹಿಮ್ಮೆಟ್ಟಿಸಿ ಫೈನಲ್ ಪ್ರವೇಶಿಸಿದ್ದರು.

ಈ ಗೆಲುವಿನೊಂದಿಗೆ ಜೂನಿಯರ್ ವರ್ಲ್ಡ್ ರ್‍ಯಾಂಕಿಂಗ್‌ನಲ್ಲಿ 871ನೇ ಸ್ಥಾನ ಪಡೆದಿರುವ ಕಶ್ವಿ ಸುನಿಲ್ ಅವರಿಗೆ ಮಂಡ್ಯ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್‌ ಆನಂದ್, ಜಿಲ್ಲಾ ಟೆನಿಸ್ ಅಸೋಸಿಯೇಷನ್ ಅಧ್ಯಕ್ಷ ದಯಾನಂದ್, ಮಂಡ್ಯದ ಗ್ಲೋಬಲ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

ಕಶ್ವಿ ಸುನಿಲ್ ಅವರು ಮಂಡ್ಯ ಪಿಇಟಿ ಟೆನಿಸ್ ಸ್ಟೇಡಿಯಂನ ಟಾಪ್ ಸರ್ವ್ ಟೆನ್ನಿಸ್ ಅಕಾಡೆಮಿಯ ಮಂಜುನಾಥ್ ಅವರ ಬಳಿ ಎಂಟು ವರ್ಷಗಳಿಂದ ತರಬೇತಿ ಪಡೆಯುತ್ತಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಸೆಮಿಫೈನಲ್‌ ಕದನಕ್ಕೆ ಅಖಾಡ ಸಿದ್ಧ - ಸೆಮಿಫೈನಲ್‌ಗಿದೆ ಮೀಸಲು ದಿನ
ಕ್ರೀಡಾಲೋಕದ ಮೇಲೆ ಯುದ್ಧದ ಕಾರ್ಮೋಡ