ಬೆಂಗಳೂರು: 17ನೇ ಆವೃತ್ತಿ ಐಪಿಎಲ್‌ನ ಮೊದಲ ಹಂತದ ತನ್ನ ತವರಿನ 3 ಪಂದ್ಯಗಳ ಟಿಕೆಟ್‌ಗಳನ್ನು ಆರ್‌ಸಿಬಿ ಗುರುವಾರ ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದು, ಟಿಕೆಟ್ ಬೆಲೆ ನೋಡಿ ಅಭಿಮಾನಿಗಳು ಹೌಹಾರಿದ್ದಾರೆ.
ಸದ್ಯ ಮಾ.22ರಿಂದ ಏ.7ರ ವರೆಗಿನ ವೇಳಾಪಟ್ಟಿ ಪ್ರಕಟಗೊಂಡಿದ್ದು, ಈ ಅವಧಿಯಲ್ಲಿ ಆರ್‌ಸಿಬಿ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3 ಪಂದ್ಯಗಳನ್ನಾಡಲಿದೆ.
ಮಾ.25ಕ್ಕೆ ಪಂಜಾಬ್, 29ಕ್ಕೆ ಕೋಲ್ಕತಾ, ಏ.2ಕ್ಕೆ ಲಖನೌ ವಿರುದ್ಧ ಆಡಲಿದ್ದು, ಈ ಪಂದ್ಯಗಳ ಕನಿಷ್ಠ ಟಿಕೆಟ್ ಬೆಲೆ ₹2300 ಹಾಗೂ ಗರಿಷ್ಠ ಮೌಲ್ಯ ₹42,350 ವರೆಗೂ ಇದೆ.
ಆರ್‌ಸಿಬಿ ವೆಬ್‌ಸೈಟ್‌ನಲ್ಲಿ ಟಿಕೆಟ್‌ಗಳನ್ನು ಮಾರಾಟಕ್ಕೆ ಇಡಲಾಗಿದೆ. ಕಳೆದ ವರ್ಷವೂ ಆರ್‌ಸಿಬಿ ಪಂದ್ಯಗಳ ಟಿಕೆಟ್ ಮೌಲ್ಯ ₹2000ಕ್ಕಿಂತ ಹೆಚ್ಚಿತ್ತು.
ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಈ ಬಾರಿ ಟಿಕೆಟ್ ಬೆಲೆ ಮತ್ತಷ್ಟು ಹೆಚ್ಚಾಗಿದೆ.
ಇನ್ನು, ಟಿಕೆಟ್‌ಗಳನ್ನು ಬಾಕ್ಸ್ ಆಫೀಸ್‌ನಲ್ಲಿ ಮಾರಾಟ ಮಾಡುವ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಕಳೆದ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಟಿಕೆಟ್‌ಗೆ ಕನಿಷ್ಠ ₹1200 ನಿಗದಿಪಡಿಸಲಾಗಿತ್ತು.